Viral Video: ಕರೆಂಟ್ ಇಲ್ಲದೆ ಚಲಿಸುವ ಈ ಮರದ ಟ್ರೆಡ್‌ಮಿಲ್ ವಿಡಿಯೋ ನೋಡಿ ಫಿಟ್‌ನೆಸ್ ಉತ್ಸಾಹಿಗಳು ಫಿದಾ
ತೆಲಂಗಾಣದ ಐಟಿ ಸಚಿವ ಕೆ.ಟಿ. ರಾಮರಾವ್ ಈ ವ್ಯಕ್ತಿಯ ವಿನೂತನ ಪ್ರಯತ್ನದ ವೀಡಿಯೊವನ್ನು ರೀ-ಟ್ವೀಟ್ ಮಾಡಿದ್ದಾರೆ. 45 ಸೆಕೆಂಡುಗಳ ವಿಡಿಯೋದಲ್ಲಿ ಟ್ರೆಡ್ ಮಿಲ್ ಜೋಡಿಸಲು ಆ ವ್ಯಕ್ತಿ ತನ್ನ ಮರಗೆಲಸದ ಕೌಶಲ್ಯವನ್ನು ಬಳಸುವುದನ್ನು ನೋಡಬಹುದು.
ನೀವು ಜಿಮ್ನಲ್ಲಿ (Gym) ವರ್ಕ್ಔಟ್ ಮಾಡುತ್ತೀರಾ? ದಿನಾ ಬೆಳಗ್ಗೆ ಅಥವಾ ಸಂಜೆ ಜಿಮ್ಗೆ ಹೋಗಿ ವರ್ಕ್ಔಟ್ ಮಾಡಲು ಸೋಮಾರಿತನವೇ? ಮನೆಯಲ್ಲೇ ಜಿಮ್ ಉಪಕರಣಗಳು ಇದ್ದಿದ್ದರೆ ಬಹಳ ಸಹಾಯವಾಗುತ್ತಿತ್ತು ಎಂದು ಆಗಾಗ ಅಂದುಕೊಳ್ಳುತ್ತಾ ಇರುತ್ತೀರಾ? ಮನೆಯಲ್ಲಿ ಟ್ರೆಡ್‌ಮಿಲ್ (Treadmill) ಇಟ್ಟುಕೊಳ್ಳಲು ಬಯಸುವ ಫಿಟ್‌ನೆಸ್ ಉತ್ಸಾಹಿಗಳಿಗೆ ಒಳ್ಳೆಯ ಸುದ್ದಿ ಇದೆ. ತೆಲಂಗಾಣದಲ್ಲಿ ವ್ಯಕ್ತಿಯೊಬ್ಬರು ಮರದ ಟ್ರೆಡ್‌ಮಿಲ್ ನಿರ್ಮಿಸಿದ್ದು, ಇದು ಇಂಟರ್ನೆಟ್ನಲ್ಲಿ ಮೆಚ್ಚುಗೆ ಗಳಿಸುತ್ತಿದೆ.
ತೆಲಂಗಾಣ ಐಟಿ ಸಚಿವ ಕೆ.ಟಿ. ರಾಮರಾವ್ ಈ ವ್ಯಕ್ತಿಯ ವಿನೂತನ ಪ್ರಯತ್ನದ ವೀಡಿಯೊವನ್ನು ರೀ-ಟ್ವೀಟ್ ಮಾಡಿದ್ದಾರೆ. “ಅದ್ಭುತ! ಈ ರೀತಿಯ ಪರಿಸರಸ್ನೇಹಿ ಟ್ರೆಡ್‌ಮಿಲ್ ಮತ್ತು ಮರದ ಜಿಮ್ ಉಪಕರಣದ ಅಗತ್ಯವಿದ್ದರೆ ದಯವಿಟ್ಟು ಸಂಪರ್ಕಿಸಿ. ಅವರಿಗೆ ಈ ವಿಚಾರದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಹಾಯ ಮಾಡಿ ಎಂದು ಸಚಿವ ಕೆಟಿಆರ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
45 ಸೆಕೆಂಡುಗಳ ವಿಡಿಯೋದಲ್ಲಿ ಟ್ರೆಡ್ ಮಿಲ್ ಜೋಡಿಸಲು ಆ ವ್ಯಕ್ತಿ ತನ್ನ ಮರಗೆಲಸದ ಕೌಶಲ್ಯವನ್ನು ಬಳಸುವುದನ್ನು ನೋಡಬಹುದು. ಕತ್ತರಿಸಿದ ಮರದ ಭಾಗಗಳನ್ನು ಜೋಡಿಸುವುದು ಮತ್ತು ಅವುಗಳನ್ನು ಬಿಗಿಯಾಗಿ ಸರಿಪಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋದ ಕೊನೆಯಲ್ಲಿ ಆ ವ್ಯಕ್ತಿಯು ಯಾವುದೇ ವಿದ್ಯುತ್ ಬಳಸದೆ ಟ್ರೆಡ್‌ಮಿಲ್ ಯಾವ ರೀತಿಯ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತದೆ.
Amazing treadmill that works without power. pic.twitter.com/iTOVuzj6va
— Arunn Bhagavathula చి లిపి (@ArunBee) March 17, 2022
ಟ್ರೆಡ್ಮಿಲ್ನ ಮರದ ಹಿಡಿಕೆಯನ್ನು ಹಿಡಿದುಕೊಂಡು, ಅವನು ತನ್ನ ಕಾಲುಗಳನ್ನು ಕನ್ವೇಯರ್ ಬೆಲ್ಟ್‌ನಂತೆ ಜೋಡಿಸಲಾದ ಮರದ ಭಾಗಗಳ ಮೇಲೆ ಇಟ್ಟುಕೊಳ್ಳುತ್ತಾನೆ. ಅದು ವೇಗವಾಗಿ ಚಲಿಸಲು ಪ್ರಾರಂಭಿಸುತ್ತದೆ. ಈ ವಿಡಿಯೋವನ್ನು ಮಾರ್ಚ್ 17ರಂದು ಪೋಸ್ಟ್ ಮಾಡಲಾಗಿತ್ತು. ಆದರೆ ಈಗ ಅದು ಹೆಚ್ಚು ವೈರಲ್ ಆಗುತ್ತಿದೆ. ಅನೇಕ ಟ್ವಿಟ್ಟರ್ ಬಳಕೆದಾರರು ಈ ವ್ಯಕ್ತಿಯ ಕೌಶಲ್ಯದಿಂದ ಪ್ರಭಾವಿತರಾಗಿದ್ದಾರೆ.
ಆದರೆ, ಕೆಲವು ಇಂಟರ್ನೆಟ್ ಬಳಕೆದಾರರು ಇದು ಸೇಮ್ ಜಿಮ್ನ ಟ್ರೆಡ್ಮಿಲ್ನಂತೆ ಕಾಣಿಸುತ್ತಿದೆ. ಈ ಟ್ರೆಡ್ಮಿಲ್ನ ಬಗ್ಗೆ ಅನೇಕರು ಪರ-ವಿರೋಧದ ಕಮೆಂಟ್ ಮಾಡಿದ್ದಾರೆ. ಹೈದರಾಬಾದ್‌ನ ಕೆಲವು ಜಿಮ್‌ಗಳಲ್ಲಿ ವಿದ್ಯುತ್ ಇಲ್ಲದೆ ಕೆಲಸ ಮಾಡುವ ಟ್ರೆಡ್‌ಮಿಲ್‌ಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ ಎಂದು ಕೆಲವು ಬಳಕೆದಾರರು ಹೇಳಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ವಿಡಿಯೋವನ್ನು 1,38,000ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಟ್ರೆಡ್‌ಮಿಲ್ ತಯಾರಿಸಿರುವುದು ಯಾರು ಎಂಬುದು ಇನ್ನೂ ಪತ್ತೆಯಾಗಿಲ್ಲ.
ಇದನ್ನೂ ಓದಿ: Viral Video: ಮೊಟ್ಟ ಮೊದಲ ಬಾರಿಗೆ ಚಾಕೋಲೇಟ್ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ಗೊತ್ತಾ?