AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss: ಬೆಳಗಿನ ಈ ತಿಂಡಿಯಿಂದ ಆರೋಗ್ಯ, ಫಿಟ್​ನೆಸ್ ಕಾಪಾಡಿಕೊಳ್ಳುವುದು ಸುಲಭ

Besan Chilla Benefits: ಚಿಲ್ಲಾ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಜನಪ್ರಿಯ ಭಾರತೀಯ ತಿಂಡಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ.

Weight Loss: ಬೆಳಗಿನ ಈ ತಿಂಡಿಯಿಂದ ಆರೋಗ್ಯ, ಫಿಟ್​ನೆಸ್ ಕಾಪಾಡಿಕೊಳ್ಳುವುದು ಸುಲಭ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Feb 04, 2022 | 1:50 PM

Share

ತೂಕ ಇಳಿಸಿಕೊಳ್ಳುವುದು (Weight Loss) ಅಷ್ಟು ಸುಲಭದ ಮಾತೇನಲ್ಲ. ಹಾಗಂತ ಅದು ಅಸಾಧ್ಯವೂ ಅಲ್ಲ. ನಾವು ಬೆಳಗ್ಗೆ ತಿನ್ನುವ ತಿಂಡಿ ನಮ್ಮ ದೇಹದ ತೂಕದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಹೀಗಾಗಿ, ಬೆಳಗಿನ ತಿಂಡಿಗೆ ಸೂಕ್ತವಾದ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಹಳ ಅತ್ಯಗತ್ಯ. ನಿಮಗೆ ಚೀಲಾ ಅಥವಾ ಚಿಲ್ಲ ಎಂಬ ತಿಂಡಿಯ ಬಗ್ಗೆ ಗೊತ್ತಿರಬಹುದು. ಆರೋಗ್ಯಕ್ಕೆ ಚಿಲ್ಲಾದ ಕೆಲವು ಪ್ರಯೋಜನಗಳು ಇಲ್ಲಿವೆ.

ಚಿಲ್ಲಾ ಪೋಷಕಾಂಶಗಳಿಂದ ತುಂಬಿರುತ್ತದೆ: ಚಿಲ್ಲಾದ ಪೌಷ್ಟಿಕಾಂಶ ಅದಕ್ಕೆ ನೀವು ಬಳಸುವ ಪದಾರ್ಥಗಳ ಮೇಲೆ ಅವಲಂಬಿರವಾಗಿರುತ್ತದೆ. ಕಡಲೆಹಿಟ್ಟು, ಸೂಜಿ ರವೆ, ಮೊಟ್ಟೆ, ತರಕಾರಿಗಳು, ಇತ್ಯಾದಿಗಳಂತಹ ಪದಾರ್ಥಗಳನ್ನು ಬಳಸುವುದರಿಂದ ಫೈಬರ್, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶ ದೇಹಕ್ಕೆ ಸಿಗುತ್ತದೆ.

ತೂಕ ಇಳಿಸಲು ಸಹಾಯಕ: ಸರಿಯಾದ ಪದಾರ್ಥಗಳನ್ನು ಬಳಸಿ ತಯಾರಿಸಿದರೆ ಚಿಲ್ಲಾ ಎಂಬ ಈ ತಿಂಡಿಯಿಂದ ಬೇಗ ತೂಕ ಇಳಿಸಿಕೊಳ್ಳಬಹುದು. ಏಕೆಂದರೆ ಇದು ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದು, ಇದರಲ್ಲಿ ಸಮೃದ್ಧವಾದ ಫೈಬರ್‌ ಅಂಶ ತುಂಬಿದೆ. ಇದು ಜೀರ್ಣಶಕ್ತಿಗೂ ಸಹಾಯಕವಾಗಿದೆ.

ಬೇಗ ಹೊಟ್ಟೆ ತುಂಬುತ್ತದೆ: ಕೆಲವು ಆಹಾರಗಳನ್ನು ಜೀರ್ಣಿಸಿಕೊಳ್ಳುವುದು ಕಷ್ಟ. ಆದರೆ, ಚಿಲ್ಲಾ ಸುಲಭವಾಗಿ ಜೀರ್ಣವಾಗುತ್ತದೆ. ಇದು ಆರೋಗ್ಯಕರವಾಗಿದ್ದು, ಬೇಗ ಹೊಟ್ಟೆಯೂ ತುಂಬುತ್ತದೆ. ಈ ತಿಂಡಿಯಲ್ಲಿ ಪ್ರೋಟೀನ್‌ ಸಮೃದ್ಧವಾಗಿದೆ.

ತಯಾರಿಸಲು ಸುಲಭ: ಈ ಚಿಲ್ಲಾ ತಿಂಡಿಯನ್ನು ತಯಾರಿಸಲು ಇದು ಕೇವಲ 10 ನಿಮಿಷ ಸಾಕು. ಇದರಿಂದ ಬೆಳಗ್ಗೆ ಸುಲಭವಾಗಿ ಈ ತಿಂಡಿಯನ್ನು ಮಾಡಿಕೊಳ್ಳಬಹುದು. ಇನ್ನೊಂದು ವಿಶೇಷವೆಂದರೆ ನಿಮಗೆ ಸ್ವೀಟ್ ತಿನ್ನಬೇಕು ಎನಿಸಿದರೆ ಸೂಜಿ ರವೆ ಮತ್ತು ಸಕ್ಕರೆಯನ್ನು ಸೇರಿಸಿ ಸಿಹಿ ಚಿಲ್ಲಾವನ್ನು ತಯಾರಿಸಬಹುದು. ನೀವೇನಾದರೂ ಮಸಾಲೆ ಪದಾರ್ಥ ತಿನ್ನಬೇಕೆಂದುಕೊಂಡಿದ್ದರೆ ಕಡಲೆಹಿಟ್ಟು, ಮೆಣಸಿನಕಾಯಿಗಳೊಂದಿಗೆ ಚಿಲ್ಲಾವನ್ನು ತಯಾರಿಸಬಹುದು.

ಚಿಲ್ಲಾವನ್ನು ತಯಾರಿಸುವ ವಿಧಾನ: ಭಾರತದಲ್ಲಿ ಸೇವಿಸುವ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಚಿಲ್ಲಾ ಕೂಡ ಒಂದಾಗಿದೆ. ಆದರೆ, ನೀವು ಇದುವರೆಗೂ ಚಿಲ್ಲಾ ಬಗ್ಗೆ ಕೇಳಿರದಿದ್ದರೆ ಆರೋಗ್ಯಯುತವಾದ ಚಿಲ್ಲಾ ತಯಾರಿಸುವ ವಿಧಾನ ಇಲ್ಲಿದೆ.

ಕಡಲೆಹಿಟ್ಟು, ಸೂಜಿ ರವೆ, ಮೊಟ್ಟೆ, ಅಥವಾ ಮೂಂಗ್ ದಾಲ್ ಬಳಸಿ ಸುಲಭವಾಗಿ ಬೇಗ ಚಿಲ್ಲಾವನ್ನು ತಯಾರಿಸಬಹುದು. ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಮುಂತಾದ ಕೆಲವು ತರಕಾರಿಗಳನ್ನು ಕತ್ತರಿಸಿ ಹಿಟ್ಟಿಗೆ ಸೇರಿಸಿ. ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ. ದೋಸೆ ಹಿಟ್ಟಿನ ಹದಕ್ಕೆ ಅದನ್ನು ಕಲೆಸಿ. ಕಾವಲಿಯ ಮೇಲೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ. ರೆಡಿ ಮಾಡಿಟ್ಟುಕೊಂಡ ಚಿಲ್ಲಾ ಹಿಟ್ಟನ್ನು ಕಾವಲಿಯ ಮೇಲೆ ಹಾಕಿ ಎರಡೂ ಕಡೆ ಗೋಲ್ಡನ್ ಕಲರ್ ಆಗುವವರೆಗೆ ಬೇಯಿಸಿ.

ಆರೋಗ್ಯಕರ ಚಿಲ್ಲಾವನ್ನು ತಯಾರಿಸಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಸಲಹೆಗಳು ಇಲ್ಲಿವೆ:

ಚಿಲ್ಲಾ ತಯಾರಿಸುವಾಗ ಅತಿಯಾದ ಎಣ್ಣೆಯನ್ನು ಬಳಸುವುದನ್ನು ತಪ್ಪಿಸಿ. ಸೂರ್ಯಕಾಂತಿ ಎಣ್ಣೆ, ತೆಂಗಿನ ಎಣ್ಣೆ, ಆಲಿವ್ ಎಣ್ಣೆ ಇತ್ಯಾದಿ ಆರೋಗ್ಯಕರ ಎಣ್ಣೆಗಳನ್ನೇ ಬಳಸಿ. ಸಿಹಿ ಚೀಲವನ್ನು ತಯಾರಿಸುವಾಗ, ಅತಿಯಾದ ಸಕ್ಕರೆಯನ್ನು ಸೇರಿಸಬೇಡಿ. ನೀವು ಜೇನುತುಪ್ಪ, ಚಾಕೊಲೇಟ್‌ಗಳಂತಹ ಇತರ ಆರೋಗ್ಯಕರ ವಸ್ತುಗಳನ್ನು ಕೂಡ ಬಳಸಬಹುದು. ಬೆಳಗಿನ ತಿಂಡಿಗೆ ಓಟ್ಸ್​ ಜೊತೆಗೆ ಕೂಡ ಇದನ್ನು ಬೆರೆಸಿ ಸಿದ್ಧಪಡಿಸಿಕೊಳ್ಳಬಹುದು.

ಇದನ್ನೂ ಓದಿ: Weight Loss Tips: ಬೇಗ ತೂಕ ಕಡಿಮೆಯಾಗಲು ಮೊಟ್ಟೆ ತಿನ್ನಬೇಕಾ? ಪನೀರ್​​ ಒಳ್ಳೆಯದಾ?

Weight Lose Tips: ತೂಕ ಇಳಿಕೆಯಾಗಲೆಂದು ಬೆಳಗಿನ ತಿಂಡಿ ಬಿಡಬೇಡಿ; ಅದರ ಬದಲು ಈ ವಿಧಾನ ಅನುಸರಿಸಿ

Follow Us
Web contact
Web contact

TV9 Kannada

Read More
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಹರಿಹರ ಪಂಚಮಸಾಲಿ ಪೀಠ ವಿವಾದ ಬಗ್ಗೆ ಯತ್ನಾಳ್ ಸ್ಫೋಟಕ ಹೇಳಿಕೆ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ಕಾರು ಗುದ್ದಿದ ರಭಸಕ್ಕೆ ಆಟೋ ಅಪ್ಪಚ್ಚಿ: 10 ಮಂದಿಗೆ ಗಾಯ
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ನಮ್ಮ ಮೆಟ್ರೋ ನೀಲಿ ಮಾರ್ಗಕ್ಕೆ  ಸೌರಶಕ್ತಿ ಬಳಕೆಗೆ ಶಿಫಾರಸು: ಲಾಭ ಏನು?
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
ರೀಷ್ಮಾ ನಾಣಯ್ಯಗಿಂತ ಒಳ್ಳೆ ಡ್ಯಾನ್ಸರ್ ಇಲ್ಲ ಬಿಡಿ, ವಿಡಿಯೋ ನೋಡಿ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
1.85 ಕೆಜಿ ಚಿನ್ನ ಬ್ಯಾಗ್​​​​​ನಲ್ಲಿ ತುಂಬಿಕೊಂಡು ಹೋದ ದೃಶ್ಯ ಇಲ್ಲಿದೆ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ವಿಶ್ವನಾಥ ವಿರುದ್ಧ ಎಫ್‌ಐಆರ್: ಸಿದ್ದರಾಮಯ್ಯ ಪುತ್ರನ ವಿರುದ್ಧ ಸ್ಫೋಟಕ ಆರೋಪ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ರೈಲ್ವೆ ಕ್ರಾಸಿಂಗ್‌ನಲ್ಲಿ ಬಸ್‌ ಹಾಗೂ ಕಾರಿಗೆ ರೈಲು ಡಿಕ್ಕಿ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬೀದರ್​ನಲ್ಲಿ ಬಿರುಗಾಳಿ ಮಳೆ ಆರ್ಭಟಕ್ಕೆ ಒಂದು ಎಕರೆ ಪಪ್ಪಾಯಿ ಬೆಳೆ ನಾಶ
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಬಾದಾಮಿ ಐತಿಹಾಸಿಕ ದೇಗುಲದಲ್ಲಿ ಚಪ್ಪಲಿ ಧರಿಸಿ ಕೂತ ಮುಸ್ಲಿಂ ಯುವತಿ!
ಇಟಲಿ ಪ್ರಧಾನಿಗೆ ಮೆಲೋಡಿ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ
ಇಟಲಿ ಪ್ರಧಾನಿಗೆ ಮೆಲೋಡಿ ಗಿಫ್ಟ್​ ಕೊಟ್ಟ ಪ್ರಧಾನಿ ಮೋದಿ