Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ? ಆರೋಗ್ಯದಲ್ಲಿನ ಈ ಬದಲಾವಣೆ ನಿಮ್ಮನ್ನು ಬಾಧಿಸುತ್ತದೆ ಎಚ್ಚರ

ಕಡಿಮೆ ಗಂಟೆಗಳ ನಿದ್ದೆಯು ಜ್ಞಾಪಕಶಕ್ತಿ, ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ವರದಿಗಳ ಪ್ರಕಾರ ದೀರ್ಘಕಾಲದವರೆಗೆ ನಿದ್ರೆಯ ಕೊರತೆಯು ಬೊಜ್ಜು, ಟೈಪ್ 2 ಡಯಾಬಿಟಿಸ್ ಮತ್ತು ಕ್ಯಾನ್ಸರ್​ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ಪ್ರತಿದಿನ ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಿದ್ದೀರಾ?  ಆರೋಗ್ಯದಲ್ಲಿನ ಈ ಬದಲಾವಣೆ ನಿಮ್ಮನ್ನು ಬಾಧಿಸುತ್ತದೆ ಎಚ್ಚರ
ಸಂಗ್ರಹ ಚಿತ್ರ
Follow us
TV9 Web
| Updated By: preethi shettigar

Updated on: Feb 05, 2022 | 7:11 AM

ಇಂದಿನ ಕಾಲದಲ್ಲಿ ಎಲ್ಲರೂ ಬಿಡುವಿಲ್ಲದ ಜೀವನ ನಡೆಸುತ್ತಿದ್ದಾರೆ. ಹೆಚ್ಚಿನ ಕೆಲಸ ಮತ್ತು ಒತ್ತಡದಿಂದಾಗಿ, ಜನರು ನಿದ್ರೆಯ ಮೇಲೆ ಹೆಚ್ಚು ರಾಜಿ ಮಾಡಿಕೊಳ್ಳುತ್ತಾರೆ. ಕೆಲಸದ ಹೊರತಾಗಿ, ಪಾರ್ಟಿ(party) ಅಥವಾ ಇನ್ನಾವುದೇ ಕಾರಣದಿಂದ ಜನರು ಮೊದಲು ನಿದ್ರೆ(Sleep) ಮಾಡುವ ಸಮಯವನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ನೀವು ದೀರ್ಘಕಾಲದವರೆಗೆ ನಿರಂತರವಾಗಿ ನಿಮ್ಮ ನಿದ್ರೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದ್ದರೆ, ಅದು ತುಂಬಾ ಅಪಾಯಕಾರಿಯಾಗಬಹುದು. ನಿದ್ರೆಯ ಕೊರತೆಯು ನಿಮ್ಮ ಆರೋಗ್ಯದ(Health) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಡಿಮೆ ಗಂಟೆಗಳ ನಿದ್ದೆಯು ಜ್ಞಾಪಕಶಕ್ತಿ, ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ವರದಿಗಳ ಪ್ರಕಾರ ದೀರ್ಘಕಾಲದವರೆಗೆ ನಿದ್ರೆಯ ಕೊರತೆಯು ಬೊಜ್ಜು, ಟೈಪ್ 2 ಡಯಾಬಿಟಿಸ್ ಮತ್ತು ಕ್ಯಾನ್ಸರ್​ನಂತಹ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

ನೀವು ಆರೋಗ್ಯಕರ ಜೀವನವನ್ನು ನಡೆಸಲು ಬಯಸಿದರೆ, ಪ್ರತಿದಿನ ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಬೇಡಿ. ಇದಕ್ಕಿಂತ ಕಡಿಮೆ ನಿದ್ದೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಕಡಿಮೆ ನಿದ್ರೆಯಿಂದಾಗಿ, ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ ಸಾಮರ್ಥ್ಯ, ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಮತ್ತು ಅನೇಕ ದೈಹಿಕ ಪ್ರಕ್ರಿಯೆಗಳು ಸಹ ಪರಿಣಾಮ ಬೀರುತ್ತವೆ. ನಿದ್ರೆಯ ಕೊರತೆಯಿಂದ ಜ್ಞಾಪಕ ಶಕ್ತಿಯೂ ಹದಗೆಡುತ್ತದೆ. ರಾತ್ರಿಯ ನಿದ್ದೆಯ ನಂತರ ಹೆಚ್ಚಿನವರು ಈ ಎಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದಲ್ಲದೆ ನೀವು ಹೃದಯ, ಕ್ಯಾನ್ಸರ್ ಮತ್ತು ಬಿಪಿ ಕಾಯಿಲೆಗೆ ಬಲಿಯಾಗುವ ಸಾಧ್ಯತೆ ಇದೆ.

ನಿದ್ರಾಹೀನತೆ

ಜನರು ವಿಭಿನ್ನ ರೀತಿಯಲ್ಲಿ ಮಲಗುತ್ತಾರೆ. ಅಂದರೆ ಕೆಲವರು ಕೆಲಸವನ್ನು ಪೂರ್ಣಗೊಳಿಸಲು ನಿದ್ರೆಯನ್ನು ತ್ಯಾಗ ಮಾಡುತ್ತಾರೆ. ಇನ್ನು ಕೆಲವರು ಕೆಲಸದ ಶಿಫ್ಟ್‌ನಿಂದ ನಿದ್ರೆಯನ್ನು ಸಮತೋಲನಗೊಳಿಸಬೇಕಾಗುತ್ತದೆ. ಇನ್ನು ಅನೇಕರು ಸರಿಯಾದ ವಾತವರಣವಿಲ್ಲದ ಪರಿಣಾಮ ಕಡಿಮೆ ನಿದ್ರೆ ಮಾಡುತ್ತಾರೆ ಅಥವಾ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

ವಿವಿಧ ಅವಧಿಗಳಲ್ಲಿ ನಿದ್ರೆಯನ್ನು ಪೂರ್ಣಗೊಳಿಸಬಹುದು

ನಿಮ್ಮ ಕೆಲಸ ಇತ್ಯಾದಿಗಳಿಂದ ನಿರಂತರವಾಗಿ 8 ಗಂಟೆಗಳ ನಿದ್ದೆ ಮಾಡಲು ನಿಮಗೆ ಸಾಧ್ಯವಾಗದಿದ್ದರೆ. ನೀವು ಅದನ್ನು ಕಡಿಮೆ ಅವಧಿಯಲ್ಲಿ ಪೂರೈಸಬಹುದು. ಇದರೊಂದಿಗೆ ನೀವು 8 ಗಂಟೆಗಳ ನಿದ್ರೆಯನ್ನು ಪೂರ್ಣಗೊಳಿಸಬಹುದು. ನೀವು ಮುಖ್ಯವಾಗಿ 4, 5 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದರೆ, ಮಧ್ಯಾಹ್ನದ ಒಂದು ಗಂಟೆ ಅಥವಾ ಎರಡು ಗಂಟೆ ನಿದ್ದೆಯೊಂದಿಗೆ ನಿಮ್ಮ ಉಳಿದ ನಿದ್ರೆಯನ್ನು ನೀವು ಸರಿದೂಗಿಸಬಹುದು. ಸಣ್ಣ ನಿದ್ರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ನಿದ್ರೆಯ ಹಂತಗಳನ್ನು ತಿಳಿಯಿರಿ

ನಿದ್ರೆಯ ಮೊದಲ ಹಂತವು ನೀವು ಉತ್ತಮ ನಿದ್ರೆಯನ್ನು ಅನುಭವಿಸುತ್ತಿರುವಾಗ, ಈ ಹಂತವು ಕೆಲವೇ ನಿಮಿಷಗಳವರೆಗೆ ಇರುತ್ತದೆ, ಎರಡನೇ ಹಂತವು ಲಘು ನಿದ್ರೆಯಾಗಿದೆ, ಇದರಲ್ಲಿ ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ ಮತ್ತು ಕಣ್ಣುಗಳ ಚಲನೆಯು ನಿಲ್ಲುತ್ತದೆ. ಈ ಹಂತವು 10-25 ನಿಮಿಷಗಳವರೆಗೆ ಇರುತ್ತದೆ. ಮೂರನೇ ಹಂತವು ನಿಧಾನಗತಿಯ ನಿದ್ರೆಯಾಗಿದ್ದರೆ ಮೂರನೇ ಹಂತದ ನಿದ್ರೆಯು ಆರೋಗ್ಯಕರ ಜೀವನಕ್ಕೆ ತುಂಬಾ ಅವಶ್ಯಕವಾಗಿದೆ. ನಿದ್ರೆಯ ಕೊರತೆಯು ನಿಮ್ಮ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುವ ಆತಂಕ ಹಾಗೂ ಚಡಪಡಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಕೆಲಸ ಮಾಡುವಾಗ ತೂಕಡಿಸುತ್ತೀರಾ?; ಹಗಲು ನಿದ್ರೆ ಬಾರದಂತೆ ಎಚ್ಚರವಾಗಿರಲು 6 ಮಾರ್ಗಗಳು ಇಲ್ಲಿವೆ

ರಾತ್ರಿ ನಿದ್ರೆಯ ಮಧ್ಯೆ ಎಚ್ಚರವಾಗುತ್ತಿದೆಯೇ? ಇದರ ಹಿಂದಿನ ಕಾರಣದ ಬಗ್ಗೆ ಇರಲಿ ನಿಮ್ಮ ಗಮನ