ರಾತ್ರಿ ನಿದ್ರೆಯ ಮಧ್ಯೆ ಎಚ್ಚರವಾಗುತ್ತಿದೆಯೇ? ಇದರ ಹಿಂದಿನ ಕಾರಣದ ಬಗ್ಗೆ ಇರಲಿ ನಿಮ್ಮ ಗಮನ

Health Tips: ಕಿರಿಕಿರಿ ಮತ್ತು ಕೋಪ ಹೆಚ್ಚುತ್ತದೆ. ಅಲ್ಲದೆ ಕ್ರಮೇಣ ವ್ಯಕ್ತಿಯು ಅನೇಕ ಕಾಯಿಲೆಗಳಿಗೆ ತುತ್ತಾಗಬಹುದು. ಇದರಿಂದ ಹೊರಬರಲು ಈ ಸಮಸ್ಯೆ ಹಿಂದಿನ ಕಾರಣವನ್ನು ತಿಳಿಯುವುದು ಬಹಳ ಮುಖ್ಯ.

ರಾತ್ರಿ ನಿದ್ರೆಯ ಮಧ್ಯೆ ಎಚ್ಚರವಾಗುತ್ತಿದೆಯೇ? ಇದರ ಹಿಂದಿನ ಕಾರಣದ ಬಗ್ಗೆ ಇರಲಿ ನಿಮ್ಮ ಗಮನ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: preethi shettigar

Updated on: Jan 08, 2022 | 7:30 AM

ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯೂ ದೊಡ್ಡ ಸಮಸ್ಯೆಯಾಗುತ್ತಿದೆ. ಕೆಲವರಿಗೆ ಸರಿಯಾಗಿ ನಿದ್ದೆ (Sleep)ಬರುವುದಿಲ್ಲ. ಬಂದರೂ ನಿದ್ರೆ ಮಧ್ಯೆ ಆಗಾಗ್ಗೆ ಎಚ್ಚರಗೊಳ್ಳುವ ಮೂಲಕ ಕಿರಿಕಿರಿ ಅನುಭವಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ದೇಹವು ಸರಿಯಾಗಿ ವಿಶ್ರಾಂತಿ ಪಡೆಯುವುದಿಲ್ಲ ಮತ್ತು ಅದರ ಋಣಾತ್ಮಕ ಪರಿಣಾಮವು ಆರೋಗ್ಯದ (Health) ಮೇಲೆ ಕಂಡುಬರುತ್ತದೆ. ಇದರಿಂದ ದಿನವಿಡೀ ಆಯಾಸ, ಆಲಸ್ಯ, ತಲೆನೋವಿನ ಸಮಸ್ಯೆ, ಜೊತೆಗೆ ಯಾವ ಕೆಲಸವನ್ನೂ ಪೂರ್ಣವಾಗಿ ಏಕಾಗ್ರತೆಯಿಂದ ಮಾಡಲಾಗುವುದಿಲ್ಲ. ಇದರಿಂದ ಕಿರಿಕಿರಿ ಮತ್ತು ಕೋಪ ಹೆಚ್ಚುತ್ತದೆ. ಅಲ್ಲದೆ ಕ್ರಮೇಣ ವ್ಯಕ್ತಿಯು ಅನೇಕ ಕಾಯಿಲೆಗಳಿಗೆ ತುತ್ತಾಗಬಹುದು. ಇದರಿಂದ ಹೊರಬರಲು ಈ ಸಮಸ್ಯೆ ಹಿಂದಿನ ಕಾರಣವನ್ನು ತಿಳಿಯುವುದು ಬಹಳ ಮುಖ್ಯ.

ಒತ್ತಡ ಇತ್ತೀಚೆಗೆ ಒತ್ತಡ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡದ ಸಮಯದಲ್ಲಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಹೆಚ್ಚಾಗುತ್ತದೆ. ಈ ಕಾರಣದಿಂದಾಗಿ, ಮೆದುಳು ನಿರಂತರವಾಗಿ ಸಕ್ರಿಯವಾಗಿರುತ್ತದೆ. ಆದ್ದರಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ.

ಥೈರಾಯ್ಡ್ ಥೈರಾಯ್ಡ್ ರೋಗಿಗಳೂ ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ವಾಸ್ತವವಾಗಿ ಥೈರಾಯ್ಡ್ ಸಮಯದಲ್ಲಿ ಆರೋಗ್ಯದಲ್ಲಿ ಅಸಮತೋಲನ ಉಂಟಾಗುತ್ತದೆ ಮತ್ತು ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಥೈರಾಯ್ಡ್ ಹಿಗ್ಗಿದಾಗ, ಹೃದಯವು ವೇಗವಾಗಿ ಕೆಲಸ ಮಾಡುತ್ತದೆ ಮತ್ತು ದೇಹದಲ್ಲಿ ಅಡ್ರಿನಾಲಿನ್ ಹಾರ್ಮೋನ್ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದರಿಂದ ನಿದ್ರಾಹೀನತೆಯ ಸಮಸ್ಯೆ ಪ್ರಾರಂಭವಾಗುತ್ತದೆ.

ನಿದ್ರಾಹೀನತೆ ನಿದ್ರಾಹೀನತೆಯೂ ಇದಕ್ಕೆ ಕಾರಣವಾಗಿರಬಹುದು. ರಾತ್ರಿ ನಿದ್ರೆ ಬರದೇ ಇರುವುದು ಮತ್ತು ಇದರಿಂದ ಆಯಾಸ ಅನುಭವಿಸುವುದು ಇದಕ್ಕೆ ಕಾರಣ.

ಅತಿಯಾದ ಮೊಬೈಲ್​ ಬಳಕೆ ನಿದ್ರಾಹೀನತೆಯ ಸಮಸ್ಯೆಗೆ ಮೊಬೈಲ್ ಮತ್ತು ಸಾಮಾಜಿಕ ಮಾಧ್ಯಮಗಳ ಅತಿಯಾದ ಬಳಕೆಯೂ ಕಾರಣವಾಗಬಹುದು. ಮೊಬೈಲ್​ನ ಬೆಳಕು ನೇರವಾಗಿ ನಿಮ್ಮ ಕಣ್ಣಿಗೆ ಬೀಳುತ್ತದೆ. ಈ ಕಾರಣದಿಂದಾಗಿ ದೇಹವು ಮೆಲಟೋನಿನ್ ಮತ್ತು ನಿದ್ರೆಯ ಹಾರ್ಮೋನ್ ಉತ್ಪಾದನೆಯನ್ನು ತಡೆಯುತ್ತದೆ. ಇದರಿಂದಾಗಿ ನಿದ್ರೆ ಸರಿಯಾಗಿ ಆಗುವುದಿಲ್ಲ.

ನಿದ್ರೆಯಲ್ಲಿ ಉಸಿರುಕಟ್ಟುವಿಕೆ ರಾತ್ರಿಯಲ್ಲಿ ಮಲಗುವಾಗ ಉಸಿರಾಟದಲ್ಲಿ ಪದೇ ಪದೇ ತೊಂದರೆಯಾಗುತ್ತದೆ. ಪದೇ ಪದೇ ಎಚ್ಚರಗೊಳ್ಳಲು ಇದು ಒಂದು ಕಾರಣವಾಗಿರಬಹುದು. ಈ ಸಮಸ್ಯೆಯಿಂದ ದೂರವಿರಲು ಮತ್ತು ಉತ್ತಮ ನಿದ್ರೆ ಪಡೆಯಲು ವೈದ್ಯರ ಸಲಹೆ ಪಡೆಯಿರಿ.

ಈ ಅಭ್ಯಾಸಗಳು ಸಹ ಕಾರಣವಾಗಬಹುದು ರಾತ್ರಿಯಲ್ಲಿ ಚಹಾ ಅಥವಾ ಕಾಫಿಯ ಅತಿಯಾದ ಸೇವನೆಯು ನಿದ್ರೆಗೆ ಅಡ್ಡಿಪಡಿಸುತ್ತದೆ. ಇನ್ನು ರಾತ್ರಿ ಪಾಳಿಯ ಕೆಲಸ ಕೂಡ ನಿದ್ರಾಹೀನತೆಗೆ ಕಾರಣವಾಗಬಹುದು.

ಇದನ್ನೂ ಓದಿ: ಕಿಡ್ನಿ ಸಮಸ್ಯೆ ಎದುರಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸಿ; ಆರೋಗ್ಯ ಕಾಳಜಿಗಾಗಿ ಫೋಟೋ ಸಹಿತ ಮಾಹಿತಿ ಇದೆ ನೋಡಿ

Women Health: ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವಿನ ಸಮಸ್ಯೆಯೇ? ಪರಿಹಾರಕ್ಕಾಗಿ ಇಲ್ಲಿದೆ ಸರಳ ವಿಧಾನಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ