Diet Tips: ಪ್ರತಿದಿನ ಸೇವಿಸುವ ಆಹಾರದ ಪಟ್ಟಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ

ಇಡೀ ದಿನ ದೇಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಅದಕ್ಕೆ ತಕ್ಕ ಹಾಗೆ ಪ್ರೋಟೀನ್​ ಅಂಶಗಳು ದೊರೆಯಬೇಕು. ಇದಕ್ಕಾಗಿ ಕಡಲೆಕಾಯಿ, ಮೊಸರು, ಬಾದಾಮಿಯಂತಹ ಪ್ರೋಟೀನ್​ಯುಕ್ತ  ಆಹಾರವನ್ನು ಸೇವಿಸಿ

Diet Tips: ಪ್ರತಿದಿನ ಸೇವಿಸುವ ಆಹಾರದ ಪಟ್ಟಿಯಲ್ಲಿ ಈ ಪೋಷಕಾಂಶಗಳನ್ನು ಸೇರಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 07, 2022 | 3:50 PM

ಹೊಸ ವರ್ಷ ಬಂದಾಗಿದೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ಅಲ್ಲದೆ ಚಳಿಗಾಲವೂ ಬಿಟ್ಟು ಬಿಡದೆ ಕಾಡುತ್ತಿದೆ. ಹೀಗಾಗಿ ದೇಹಕ್ಕೆ ಸರಿಯಾದ ಪೋಷಕಾಂಶಗಳನ್ನು ನೀಡುವುದು ಅಗತ್ಯವಾಗಿದೆ. ಅದಕ್ಕಾಗಿ ಆಹಾರದ ಆಯ್ಕೆಯಲ್ಲಿ ಎಚ್ಚರವಿರಲಿ.  ಅವುಗಳು ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವಂತಿರಬೇಕು ಆಗ ಮಾತ್ರ ಸೇವಿಸುವ ಆಹಾರ ದೇಹದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುತ್ತದೆ.  2022 ಆರಂಭದಲ್ಲಿದ್ದೇವೆ. ಈಗಲೇ ಒಂದಷ್ಟು  ಹೊಸ ಆಹಾರಾಭ್ಯಾಸಗಳನ್ನು ಅಳವಡಿಸಿಕೊಳ್ಳಿ ಇದು ನಿಮ್ಮ ದೇಹವನ್ನು ಫಿಟ್​ ಅಗಿಯೂ ಇಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಈ ಪೋಷಕಾಂಶಗಳನ್ನು ನಿಮ್ಮ ಆಹಾರದಲ್ಲಿರುವಂತೆ ನೋಡಿಕೊಳ್ಳಿ.

ಪ್ರೋಟೀನ್​ ಇಡೀ ದಿನ ದೇಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಅದಕ್ಕೆ ತಕ್ಕ ಹಾಗೆ ಪ್ರೋಟೀನ್​ ಅಂಶಗಳು ದೊರೆಯಬೇಕು. ಇದಕ್ಕಾಗಿ ಕಡಲೆಕಾಯಿ, ಮೊಸರು, ಬಾದಾಮಿಯಂತಹ ಪ್ರೋಟೀನ್​ಯುಕ್ತ  ಆಹಾರವನ್ನು ಸೇವಿಸಿ. ಪ್ರತಿದಿನ 1 ಗ್ರಾಮ್​ನಷ್ಟು ಪ್ರೋಟಿನ್​ಭರಿತ ಆಹಾರವನ್ನು ಸೇವಿನೆ ದೇಹದಲ್ಲಿರುವ ಮಾಂಸಖಂಡಗಳನ್ನು ಬಲಪಡಿಸುತ್ತವೆ. ಇದರ ಜತೆಗೆ ಡೈರಿ ಉತ್ಪನ್ನಗಳಾದ ಹಾಲು, ಮೊಸರಿನ ಸೇವನೆಯೂ ಪ್ರತಿದಿನ ನಿಮ್ಮ ಡಯೆಟ್​ ಆಹಾರದಲ್ಲಿರಲಿ.

ಒಮೆಗಾ 3 ಆಹಾರಗಳು ಮೀನು, ಏಡಿ ಸೇರಿದಂತೆ ಸಮುದ್ರ ಆಹಾರಗಳಲ್ಲಿ ಒಮೆಗಾ3 ಅಂಶ ಯಥೇಚ್ಛವಾಗಿರುತ್ತವೆ. ಇದು ನಿಮ್ಮ  ದೇಹದಲ್ಲಿ ಶಕ್ತಿಯ ವರ್ಧನೆಗೆ ಸಹಾಯ ಮಾಡುತ್ತದೆ ಜತೆಗೆ ನಿಮ್ಮ ಕಣ್ಣಿನ ದೃಷ್ಟಿಯನ್ನೂ ಚುರುಕುಗೊಳಿಸುತ್ತದೆ. ಇನ್ನು ಸಸ್ಯಾಹಾರಿಗಳಿಗೆ ಕಡಲೆಕಾಯಿ, ಡ್ರೈಫ್ರೂಟ್ಸ್​ ಹಾಗೂ ತರಕಾರಿಗಳಲ್ಲಿ ಹೆಚ್ಚು ಒಮೆಗಾ 3 ಅಂಶಗಳು ಸಿಗುತ್ತವೆ.  ಆದ್ದರಿಂದ ಒಮೆಗಾ 3 ಅಂಶದ ಆಹಾರಗಳು ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿರಲಿ.

ಕ್ಯಾಲ್ಸಿಯಂ ಕ್ಯಾಲ್ಸಿಯಂ ನಿಮ್ಮ ದೇಹದಲ್ಲಿನ ಮೂಳೆಗಳ ಬಲವರ್ಧನೆಗೆ ಸಹಾಯಕವಾಗಿದೆ. ಹಲ್ಲುಗಳ ಆರೋಗ್ಯಕ್ಕೂ ಕ್ಯಾಲ್ಸಿಯಂ ಅತೀ ಅಗತ್ಯವಾಗಿದೆ. ಹೀಗಾಗಿ ನೀವು ಹಾಲು, ಮೊಸರು, ಚೀಸ್​, ಬೀನ್ಸ್​​ನಂತಹ ಕ್ಯಾಲ್ಸಿಯಂ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿ.

ವಿಟಮಿನ್​ ಡಿ ವಿಟಮಿನ್​ ಡಿ ಅಂಶವು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೂರ್ಯನ ಎಳೆಕಿರಣಗಳಿಂದ ಸುಲಭವಾಗಿ ಸಿಗುವ ವಿಟಮಿನ್​ ಡಿ ದೇಹವನ್ನು ಬೆಚ್ಚಗಿರಿಸಿ ಚಯಾಪಯಗಳನ್ನು ಸುಗಮಗೊಳಿಸುತ್ತದೆ. ಸೂರ್ಯನ ಕಿರಣಗಳಿಂದ ಮಾತ್ರವಲ್ಲ, ಅಡುಗೆಯಲ್ಲಿ ಬಳಸುವ ಎಣ್ಣೆ, ಮೊಟ್ಟೆ, ಕಿತ್ತಳೆ ಹಣ್ಣುಗಳಿಂದಲೂ ವಿಟಮಿನ್​ ಡಿ ಅಂಶ ನಿಮಗೆ ದೊರೆಯುತ್ತದೆ.

ವಿಟಮಿನ್​ ಎ,ಇ,ಸಿ ವಿಟಮಿನ್​ ಎ ನಿಮ್ಮ ಚರ್ಮದ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಹೊಟ್ಟೆಗೆ ಸಂಬಂಧಿಸಿದ, ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ರಕ್ಷಣೆ ನೀಡುತ್ತದೆ. ಹೀಗಾಗಿ ಕ್ಯಾರೆಟ್​,ಗೆಣಸಿನಂತಹ ಆಹಾರ ಹೆಚ್ಚು ಸೇವಿಸಿ. ಇನ್ನು ವಿಟಮಿನ್ ಇ ಅಂಶಗಳು ದೇಹದಲ್ಲಿ ರೋಗವನ್ನು ತಡೆಯಲು ಸಹಾಯಕವಾಗಿದೆ. ವಿಟಮಿನ್​ ಇ ಅಂಶವು ಸಾಮಾನ್ಯವಾಗಿ ದಿನನಿತ್ಯ ಸೇವಿಸುವ ಎಲ್ಲ ರೀತಿಯ ಆಹಾರಗಳಲ್ಲಿಯೂ ಇರುತ್ತದೆ. ಉದಾಹರಣೆಗೆ ಅಡುಗೆ ಎಣ್ಣೆ, ಶೇಂಗಾ, ಬಾದಾಮಿಯಂತಹ ಬೀಜಗಳು ವಿಟಮಿನ್​ ಇ ಅಂಶಗಳು ಒಳಗೊಂಡಿರುತ್ತವೆ. ವಿಟಮಿನ್​​ ಸಿ ಅಂಶಗಳು ನಿಮ್ಮ ಡ್ಯಾಮೇಜ್​ ಆದ ಚರ್ಮವನ್ನು ಸರಿಪಡಿಸುತ್ತದೆ.  ಕಿವಿ, ಸ್ಟ್ರಾಬೆರಿಯಂತಹ ಹಣ್ಣುಗಳಿಂದ ವಿಟಮಿನ್​ ಸಿ ಅಂಶವು ದೊರೆಯುತ್ತದೆ.

ಜಿಂಕ್​ /ಸತು ಜಿಂಕ್​ ಇರುವ ಆಹಾರ ಪದಾರ್ಥಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಸುಧಾರಿಸುತ್ತವೆ. ಚಿಕ್ಕಮಕ್ಕಳಿಗೆ ಹಾಗೂ  ಗರ್ಭಿಣಿಯರಿಗೆ ಈ ಜಿಂಕ್​ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಬೇಕು. ಮಾಂಸಹಾರಿಗಳಾಗಿದ್ದರೆ  ಚಿಕನ್​ನಂತಹ ಆಹಾರಗಳಲ್ಲಿ ಜಿಂಕ್​ ಅಂಶ ಸಿಗುತ್ತವೆ. ಸಸ್ಯಾಹಾರಿಗಳಾಗಿದ್ದರೆ ಬೀನ್ಸ್​ , ಕಡಲೆ, ಶೇಂಗಾದಲ್ಲಿ ಹೆಚ್ಚು ಸಿಗುತ್ತದೆ.

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ