Health Tips: ಚಳಿಗಾಲದಲ್ಲಿ ನೋವು ನೀಡುವ ಸ್ನಾಯುಗಳಿಂದ ರಕ್ಷಣೆ ಹೇಗೆ? ಇಲ್ಲಿದೆ ಸಿಂಪಲ್​ ಸೂತ್ರ

ಪ್ರತಿದಿನ ಕನಿಷ್ಠ 1 ಗಂಟೆಯಾದರು ವ್ಯಾಯಾಮ ಮಾಡಿ. ಇದು ಚಳಿಯಿಂದ ಬಿಗಿಯಾದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.  ವ್ಯಾಯಾಮದಿಂದ ನಿಮ್ಮ ದೇಹವೂ ಬಿಸಿಯಾಗುತ್ತದೆ.

Health Tips: ಚಳಿಗಾಲದಲ್ಲಿ ನೋವು ನೀಡುವ ಸ್ನಾಯುಗಳಿಂದ ರಕ್ಷಣೆ ಹೇಗೆ? ಇಲ್ಲಿದೆ ಸಿಂಪಲ್​ ಸೂತ್ರ
ಪ್ರಾತಿನಿಧಿಕ ಚಿತ್ರ
Follow us
| Updated By: Pavitra Bhat Jigalemane

Updated on: Jan 07, 2022 | 8:45 AM

ಚಳಿಗಾಲದಲ್ಲಿ ಬೇಡವೆಂದರೂ ಕಾಡುವ ಕೀಲು ನೋವು, ಮೊಣಕಾಲುಗಳ ನೋವು ಅತೀವ ಹಿಂಸೆಯನ್ನು ನೀಡುತ್ತದೆ. ವಯಸ್ಸಾದವರಿಗಂತೂ ಚಳಿಗಾಲ ನೋವಿನ ಕಾಲವೆಂದರೂ ತಪ್ಪಾಗದು. ಕೀಲು, ಸ್ನಾಯುಗಳಲ್ಲಿ ಕಾಡುವ ನೋವಿಗೆ ನೈಸರ್ಗಿಕವಾಗಿಯೇ ಪರಿಹಾರ ಕಂಡುಕೊಳ್ಳಬಹುದು. ಚಳಿಗಾಲದಲ್ಲಿ ವಾತಾವರಣದಲ್ಲಿನ ತಂಪಿನಿಂದ ದೇಹದಲ್ಲಿನ ಸ್ನಾಯುಗಳು ಬಿಗಿಯಾಗುತ್ತವೆ. ಅಲ್ಲದೆ ಸ್ನಾಯುರಜ್ಜುಗಳಲ್ಲಿ ಊತ ಉಂಟಾಗಿ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ವಾತಾವರಣವು ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಲ್ಲದೆ  ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್​ ಡಿ ಕೊರತೆಯಾದರೆ ಸ್ನಾಯುಗಳಲ್ಲಿ ಶಕ್ತಿ ಕುಂಠಿತವಾಗುತ್ತದೆ. ಆದ್ದರಿಂದ ಮನೆಯಲ್ಲಿಯೇ ಸಿಂಪಲ್​ ಸೂತ್ರಗಳನ್ನು ಅಳವಡಿಸಿಕೊಂಡು ನೋವಿನಿಂದ ಮುಕ್ತಿ ಹೊಂದಿರಿ.

ದೇಹವನ್ನು ಬೆಚ್ಚಗಿರಿಸಿಕೊಳ್ಳಿ ನಿಮ್ಮ ದೇಹವನ್ನು ಚಳಿಯಿಂದ ಬೆಚ್ಚಗಿರಿಸಿಕೊಂಡರೆ ಸ್ನಾಯುಗಳು ಬಿಗಿಯಾಗುವುದನ್ನು ತಡೆಯಬಹುದು. ಇದರಿಂದ ನಿಮಗೆ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದಿಲ್ಲ. ಮನೆಯಲ್ಲಿ ಇರುವಾಗಲೂ ಮತ್ತು ಮನೆಯಿಂದ ಹೊರಗೆ ಹೋಗುವಾಗಲು ದಪ್ಪನೆಯ ಉಣ್ಣೆ ಬಟ್ಟೆಯನ್ನು ಧರಿಸಿ. ಇದು ನಿಮ್ಮನ್ನು ಬೆಚ್ಚಗಿರಿಸುವಂತೆ ಮಾಡಿ ನೋವನ್ನು ಕಡಿಮೆಗೊಳಿಸುತ್ತದೆ.

ವ್ಯಾಯಾಮ ಮಾಡಿ ಪ್ರತಿದಿನ ಕನಿಷ್ಠ 1 ಗಂಟೆಯಾದರು ವ್ಯಾಯಾಮ ಮಾಡಿ. ಇದು ಚಳಿಯಿಂದ ಬಿಗಿಯಾದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.  ವ್ಯಾಯಾಮದಿಂದ ನಿಮ್ಮ ದೇಹವೂ ಬಿಸಿಯಾಗುತ್ತದೆ. ಇದರಿಂದ ನೋವುಗಳು ಕಾಣಿಸಿಕೊಳ್ಳುವುದಿಲ್ಲ. ವ್ಯಾಯಾಮ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಒಳಿತು. ಹೀಗಾಗಿ ಸರ್ವರೋಗಕ್ಕೂ ವ್ಯಾಯಾಮ ಮದ್ದು ಎಂದರೆ ತಪ್ಪಾಗಲಾರದು.

ದೇಹದ ತೂಕ ಕಾಪಾಡಿಕೊಳ್ಳಿ ದೇಹದ ತೂಕ ನಿಮ್ಮ ದೇಹದ ಆರೋಗ್ಯಕ್ಕೆ ಹಿಡಿದ ಕೈಗನ್ನಡಿ. ಹೀಗಾಗಿ ಸರಿಯಾದ ದೇಹದ ತೂಕ ಕಾಪಾಡಿಕೊಳ್ಳಿ. ಅತಿಯಾದ ದೇಹದ ತೂಕ ನಿಮ್ಮ ಮೊಣಕಾಲಿನ ಮೇಲೆ ಭಾರ ಬೀಳುವಂತೆ ಮಾಡಿ ನೋವಿನ ಅನುಭವ ನೀಡುತ್ತದೆ. ಸರಿಯಾದ ಡಯೆಟ್​ ರೂಢಿಸಿಕೊಂಡು ದೇಹದ ತೂಕ ಕಾಪಾಡಿಕೊಳ್ಳಿ.

ಸಮತೊಲಿತ ಆಹಾರ ಮತ್ತು ನೀರು ಸೇವನೆ ದೇಹಕ್ಕೆ ನೀರು ಅತೀ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ  ನೀರಿನ ಕೊರೆತೆಯಿಂದ ನಿಮ್ಮ ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಎನ್ನುವುದು ಕೂಡ ಅಷ್ಟೆ ಸತ್ಯ. ಜತೆಗೆ ಸಮತೋಲಿತ ಆಹಾರ ಕೂಡ ನಿಮ್ಮ ಸ್ನಾಯುಗಳ ನೋವಿನ ನಿರ್ವಹಣೆಗೆ ಅಗತ್ಯವಾಗಿದೆ. ಅತಿಯಾದ ಮಸಾಲೆ, ಉಪ್ಪಿನ ಸೇವನೆ, ಸಕ್ಕರೆ ಅಥವಾ ಕಾರ್ಬೋಹೈಡ್ರೇಟ್​ ಇರುವ ಆಹಾರ ಪದಾರ್ಥಗಳ  ಸೇವನೆಗೆ ನಿರ್ಬಂಧವಿರಲಿ.

ಬಿಸಿನೀರಿನ ಶಾಖ ನೀಡಿ ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ಸಹಿಸಲಾಗದ ನೋವು ಸಂಕಷ್ಟಕ್ಕೀಡು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ  ನೋವಿರುವ ಜಾಗದಲ್ಲಿ ಬಿಸಿ ನೀರಿದ ಶಾಖ ನೀಡಿ. ಗ್ಲಾಸ್​ ಬಾಟಲಿಯಲ್ಲಿ ಬಿಸಿನೀರನ್ನು ಹಾಕಿ ನೋವಿರುವ ಜಾಗದಲ್ಲಿ ಇರಿಸಿಕೊಳ್ಳಿ. ಇದು ನಿಮಗೆ ನೋವನ್ನು ಶಮನಗೊಳಿಸಲು ನೆರವಾಗುತ್ತದೆ.