ಉತ್ತರ ಅಮೆರಿಕಾ ಮೂಲದ ಕುಂಬಳಕಾಯಿ ಸಾಕಷ್ಟು ಔಷಧಿಯ ಗುಣಗಳನ್ನು ಹೊಂದಿದೆ. ಯಥೇಚ್ಛವಾದ ವಿಟಮಿನ್, ಮಿನರಲ್ಸ್ಗಳನ್ನು ಹೊಂದಿರುವ ಕುಂಬಳಕಾಯಿ ಭಾರತದಲ್ಲೂ ಹೆಚ್ಚು ಪ್ರಸ್ತುತವಾಗಿದೆ.
ಕುಂಬಳಕಾಯಿಯಲ್ಲಿರು ಫೈಬರ್ ಮತ್ತು ಕಡಿಮೆ ಕ್ಯಾಲೋರಿಗಳು ದೇಹದ ತೂಕ ನಷ್ಟಕ್ಕೆ ಸಹಾಯಕವಾಗಿದೆ.
ಕುಂಬಳಕಾಯಿಯಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ದೀರ್ಘಕಾಲದ ರೋಗಗಳನ್ನು ತಡೆಯುತ್ತದೆ.
ಕಣ್ಣಿನ ಆರೋಗ್ಯಕ್ಕೆ ಬೇಕಾದ ವಿಟಮಿನ್ ಎ ಅಂಶಗಳು ಕುಂಬಳಕಾಯಿಯಲ್ಲಿದೆ. ಹೀಗಾಗಿ ಕುಂಬಳಕಾಯಿಯ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕುಂಬಳಕಾಯಿ ಹೆಚ್ಚು ನೆರವಾಗುತ್ತದೆ. ಕುಂಬಳಕಾಯಿಯನ್ನು ಸೇವಿಸುವುದರಿದ ಬಿಳಿ ರಕ್ಕಣಗಳ ಅಭಿವೃದ್ಧಿಯಾಗುತ್ತದೆ.
ಕ್ಯಾನ್ಸರ್ಅನ್ನು ನಿಯಂತ್ರಿಸಲು ಕೂಡ ಕುಂಬಳಕಾಯಿ ಸಹಾಯಕವಾಗಿದೆ. ಇದರಲ್ಲಿನ ಆಲ್ಫಾ ಮತ್ತು ಬೀಟಾ ಕಾರಟಿನ್ ಅಂಶಗಳು ಕೆಲವು ಬಗೆಯ ಕ್ಯಾನ್ಸರ್ಅನ್ನು ನಿಯಂತ್ರಿಸುತ್ತದೆ ಎಂದು ಅಧ್ಯಯಯನದಲ್ಲಿ ಸಾಬೀತಾಗಿದೆ.
ಪೊಟಾಷಿಯಂ, ವಿಟಮಿನ್ ಸಿ ಅಂಶಗಳು ಹೃದಯದ ಆರೋಗ್ಯಕ್ಕೂ ಒಳಿತು. ಕುಂಬಳಕಾಯಿ ಜ್ಯೂಸ್ ರೀತಿಯಲ್ಲಿ ಸೇವಿಸದರೆ ಆರೋಗ್ಯಕ್ಕೆ ಇನ್ನೂ ಉತ್ತಮ.
ಕಾಂತಿಯುತ ಚರ್ಮ ಪಡೆಯಲು ಕುಂಬಳಕಾಯಿ ಸಹಕಾರಿಯಾಗಿದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಮೊಡವೆಗಳ ನಿವಾರಣೆಗೂ ಸಹಾಯಕವಾಗಿದೆ.
ದೇಹದಲ್ಲಿನ ರಕ್ತದೊತ್ತಡ ಕಡಿಮೆ ಮಾಡಿ, ಕುಂಬಳಕಾಯಿಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಇದರಿಂದ ಮಧುಮೇಹವೂ ನಿಯಂತ್ರಣದಲ್ಲಿರುತ್ತದೆ.
ನಿಮ್ಮ ಡಯೆಟ್ ಪಟ್ಟಿಗೆ ಕುಂಬಳಕಾಯಿ ಸಂಪೂರ್ಣ ಆಹಾರವಾಗಲಿದೆ. ಮಧುಮೇಹಿಗಳಿಗೂ ಕುಂಬಳಕಾಯಿ ಉತ್ತಮ ಆಹಾರ ಎನ್ನುತ್ತಾರೆ.
Published On - 10:39 am, Sat, 5 February 22