Updated on: Feb 04, 2022 | 8:13 PM
ನೋರಾ ಫತೇಹಿ ಬಾಲಿವುಡ್ನಲ್ಲಿ ಸಾಕಷ್ಟು ಬೇಡಿಕೆ ಸೃಷ್ಟಿಕೊಂಡಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ, ಈಗ ಅವರ ಅಭಿಮಾನಿಗಳಿಗೆ ಬೇಸರದ ವಿಚಾರ ಒಂದು ಸಿಕ್ಕಿದೆ. ನೋರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ನೋರಾ ಫತೇಹಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿದ್ದಾರೆ. ಅವರನ್ನು ಹಿಂಬಾಲಿಸುವವರ ಸಂಖ್ಯೆ ದೊಡ್ಡದಿದೆ. ಆದರೆ, ಈಗ ಅವರ ಇನ್ಸ್ಟಾಗ್ರಾಮ್ ಖಾತೆ ಕಾಣೆಯಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿದೆ.
ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ 3.6 ಕೋಟಿ ಹಿಂಬಾಲಕರಿದ್ದರು. ಇವರೆಲ್ಲರಿಗೂ ನೋರಾ ನಿರ್ಧಾರ ಬೇಸರ ತಂದಿದೆ. ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು.
ಅವರ ಇನ್ಸ್ಟಾಗ್ರಾಮ್ ಖಾತೆಗೆ ಭೇಟಿ ನೀಡೋಕೆ ಪ್ರಯತ್ನಿಸಿದರೆ, ಆ ಪೇಜ್ ಲಭ್ಯವಿಲ್ಲ ಎನ್ನುವ ಸಂದೇಶ ಬರುತ್ತದೆ. ಅವರು ಖಾತೆಯನ್ನು ಡಿಲೀಟ್ ಮಾಡಿದ್ದಾರೋ ಅಥವಾ ಇದು ತಾಂತ್ರಿಕ ಸಮಸ್ಯೆಯೋ ಎಂಬುದು ತಿಳಿದು ಬಂದಿಲ್ಲ.
200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ನೋರಾ ಹೆಸರು ಕೂಡ ಥಳುಕು ಹಾಕಿಕೊಂಡಿದೆ. ಈ ಹಿನ್ನೆಲೆಯಲ್ಲಿ ಅವರು ಸೋಶಿಯಲ್ ಮೀಡಿಯಾದಿಂದ ದೂರ ಉಳಿದರಾ ಎನ್ನುವ ಪ್ರಶ್ನೆಯೂ ಎದುರಾಗಿದೆ.
ಈ ಬಗ್ಗೆ ನೋರಾ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಶೀಘ್ರವೇ ಅವರು ಮರಳಿ ಇನ್ಸ್ಟಾಗ್ರಾಮ್ಗೆ ಬರಬಹುದು ಎಂಬುದು ಅವರ ಅಭಿಮಾನಿಗಳ ನಂಬಿಕೆ. ಈ ಬಗ್ಗೆ ಶೀಘ್ರವೇ ತಿಳಿಯಲಿದೆ.