ಕೆಲಸ ಮಾಡುವಾಗ ತೂಕಡಿಸುತ್ತೀರಾ?; ಹಗಲು ನಿದ್ರೆ ಬಾರದಂತೆ ಎಚ್ಚರವಾಗಿರಲು 6 ಮಾರ್ಗಗಳು ಇಲ್ಲಿವೆ

Sleep Control: ಆಫೀಸಿನಲ್ಲಿ ನೀವು ಆಗಾಗ ಆಕಳಿಸಿದರೆ ಅದು ಸಹೋದ್ಯೋಗಿಗಳಿಗೆ ಮುಜುಗರ ಉಂಟುಮಾಡಬಹುದು. ಕೆಲಸದ ಸಮಯದಲ್ಲಿ ನೀವು ನಿದ್ರೆಯಿಂದ ತಪ್ಪಿಸಿಕೊಳ್ಳಲು ಬಯಸಿದರೆ ಸುಲಭ ಉಪಾಯ ಇಲ್ಲಿದೆ.

ಕೆಲಸ ಮಾಡುವಾಗ ತೂಕಡಿಸುತ್ತೀರಾ?; ಹಗಲು ನಿದ್ರೆ ಬಾರದಂತೆ ಎಚ್ಚರವಾಗಿರಲು 6 ಮಾರ್ಗಗಳು ಇಲ್ಲಿವೆ
ನಿದ್ರೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 28, 2022 | 1:52 PM

ಕೆಲವರಿಗೆ ಓದಲು ಕುಳಿತ ಕೂಡಲೆ ನಿದ್ರೆ (Sleep) ಬರಲು ಶುರುವಾಗುತ್ತದೆ. ಇನ್ನು ಕೆಲವರು ಕೆಲಸ ಮಾಡುವಾಗಲೆಲ್ಲ ತೂಕಡಿಸುತ್ತಿರುತ್ತಾರೆ. ಹೀಗೆ ಕೆಲಸ ಮಾಡುವಾಗಲೆಲ್ಲ ನಿದ್ರೆ ಬಂದರೆ ಕೆಲಸದಲ್ಲಿ ಏಕಾಗ್ರತೆ ವಹಿಸಲು ಸಾಧ್ಯವಾಗುವುದಿಲ್ಲ. ಆಫೀಸಿನಲ್ಲಿ ನೀವು ಆಗಾಗ ಆಕಳಿಸಿದರೆ ಅದು ಸಹೋದ್ಯೋಗಿಗಳಿಗೆ ಮುಜುಗರ ಉಂಟುಮಾಡಬಹುದು. ಕೆಲಸದ ಸಮಯದಲ್ಲಿ ನೀವು ನಿದ್ರೆಯಿಂದ ತಪ್ಪಿಸಿಕೊಳ್ಳಲು ಬಯಸಿದರೆ ಸುಲಭ ಉಪಾಯ ಇಲ್ಲಿದೆ. ನೀವು ಸೇವಿಸುವ ಆಹಾರದಲ್ಲಿ, ನಿಮ್ಮ ಚಟುವಟಿಕೆಯಲ್ಲಿ ಕೊಂಚ ಎಚ್ಚರ ವಹಿಸಿದರೆ ಕೆಲಸದ ವೇಳೆ ನಿದ್ರೆಯಿಂದ ಮುಕ್ತಿ ಪಡೆಯಬಹುದು.

ಕೆಫೇನ್ ಸೇವನೆ: ಕೆಫೇನ್ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ನಿದ್ರೆ ಬರದಂತೆ ತಡೆಯಬಹುದು. ಕಾಫಿ, ಟೀ, ಚಾಕೋಲೇಟ್​ನಂತಹ ಪದಾರ್ಥಗಳನ್ನು ಸೇವನೆ ತ್ವರಿತ ಶಕ್ತಿಯ ವರ್ಧಕವನ್ನು ನೀಡುತ್ತದೆ ಮತ್ತು ಮೆದುಳು ಮತ್ತು ನರಮಂಡಲವನ್ನು ಉತ್ತೇಜಿಸುತ್ತದೆ. ಇದರಿಂದ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.

ವಾಕಿಂಗ್: ನಿಮಗೆ ನಿದ್ರೆ ಬರುತ್ತಿದೆ ಎನಿಸಿದ ಕೂಡಲೆ ಆಫೀಸಿನ ಆವರಣದ ಒಳಗೆ ಅಥವಾ ಹೊರಗೆ ಸ್ವಲ್ಪ ಸಮಯದವರೆಗೆ ವಾಕಿಂಗ್ ಮಾಡಿ. ದೈಹಿಕ ಚಟುವಟಿಕೆಯು ನಿಮಗೆ ನಿದ್ರೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ನಿಮಗೆ ಚೈತನ್ಯವನ್ನು ಸಹ ನೀಡುತ್ತದೆ.

ಸಂಗೀತವನ್ನು ಆಲಿಸಿ: ನಿದ್ರೆ ಬರುತ್ತಿದೆ ಎನಿಸಿದಾಗ ಸರಿಯಾದ ರೀತಿಯ ಸಂಗೀತವನ್ನು ಕೇಳುವುದು ಕೆಲಸದ ಸಮಯದ ತೂಕಡಿಕೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ವೇಗದ ಗತಿಯ ಅಥವಾ ಲವಲವಿಕೆಯ ಸಂಗೀತವನ್ನು ಕೇಳುವುದರಿಂದ ಕೆಲಸದ ಸಮಯದಲ್ಲಿ ನಿದ್ರಿಸುವುದನ್ನು ತಡೆಯಬಹುದು. ನೀವು ಮೆಲೋಡಿಯಸ್ ಹಾಡುಗಳನ್ನು ಕೇಳಿದರೆ ನಿದ್ರೆಯ ಪ್ರಚೋದನೆಯು ಹೆಚ್ಚಾಗುವ ಸಾಧ್ಯತೆಗಳಿವೆ.

ಕಡಿಮೆ ಆಹಾರ ಪದಾರ್ಥಗಳನ್ನು ತಿನ್ನಿರಿ: ಕೆಲಸದ ಸಮಯದಲ್ಲಿ ನಿಮಗೆ ಮಲಗಬೇಕು ಎನಿಸುತ್ತಿದ್ದರೆ ಕೆಲಸ ಶುರು ಮಾಡುವ ಮೊದಲು ಸ್ವಲ್ಪವೇ ಆಹಾರ ಸೇವಿಸಿ. ಕಡಿಮೆ ಆಹಾರವನ್ನು ಸೇವಿಸಿದರೆ ಹೊಟ್ಟೆಯೂ ಹಗುರವಾಗಿರುತ್ತದೆ. ಹೆಚ್ಚು ತಿಂದರೆ ಹೊಟ್ಟೆ ಭಾರವಾಗಿ, ಆಲಸ್ಯ ಶುರುವಾಗಿ ನಿದ್ರೆ ಬರುತ್ತದೆ. ಆದಷ್ಟೂ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯಿಂದ ದೂರವಿರಿ. ನಿಮ್ಮ ಶಕ್ತಿಯನ್ನು ಉಳಿಸಿಕೊಳ್ಳಲು ಲಘು ಊಟವನ್ನು ಸೇವಿಸಿ.

ಮುಖದ ಮೇಲೆ ನೀರು ಚಿಮುಕಿಸಿ: ನಿದ್ರೆಯನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯುವುದು. ಇದು ನಿಮಗೆ ಚೈತನ್ಯ ನೀಡುತ್ತದೆ ಮತ್ತು ಜಾಗರೂಕತೆಯನ್ನು ಹೆಚ್ಚಿಸುತ್ತದೆ.

ಮೌನ ಮತ್ತು ಏಕತಾನತೆಯನ್ನು ತಪ್ಪಿಸಿ: ಕೆಲಸದ ಸ್ಥಳದ ಸುತ್ತಲೂ ಇರುವ ಮೌನ ಅಥವಾ ನಿಶ್ಯಬ್ಧ ನಿದ್ರಾಹೀನತೆಗೆ ಕಾರಣವಾಗಬಹುದು. ನಿಮ್ಮ ಮೆದುಳನ್ನು ಉತ್ತೇಜಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಆಸಕ್ತಿದಾಯಕ ಸಂಗತಿಯ ಕುರಿತು ಸಹೋದ್ಯೋಗಿಯೊಂದಿಗೆ ಮಾತನಾಡಿ. ಹೆಚ್ಚುವರಿಯಾಗಿ, ನಿಮ್ಮನ್ನು ಕಾರ್ಯನಿರತವಾಗಿರಿಸಲು ಮತ್ತು ಆಯಾಸವನ್ನು ತಪ್ಪಿಸಲು ಕೆಲಸ ಮತ್ತು ಜವಾಬ್ದಾರಿಗಳನ್ನು ತೆಗೆದುಕೊಳ್ಳಿ. ಸುಮ್ಮನೇ ಕುಳಿತಿದ್ದರೆ ನಿದ್ರೆ ಬರುವುದು ಸಾಮಾನ್ಯ. ಹಾಗಾಗಿ, ಚಟುವಟಿಕೆಯಿಂದ ಇದ್ದರೆ ನಿದ್ರೆ ಬರದಂತೆ ತಡೆಯಬಹುದು.

ಚೆನ್ನಾಗಿ ನಿದ್ರೆ ಮಾಡುವುದರಿಂದ ಕ್ಯಾಲೋರಿ ಸೇವನೆಯ ಹೆಚ್ಚಳವನ್ನು ತಡೆಯಬಹುದು. ಸರಿಯಾದ ಎಂಟು ಗಂಟೆಗಳ ನಿದ್ರೆಯನ್ನು ಪಡೆಯುವುದು ಕ್ಯಾಲೋರಿ ಸೇವನೆ ಮತ್ತು ಹಸಿವು ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಸಾಮಾನ್ಯವಾಗಿ ನೀವು ನಿದ್ರೆಯಿಂದ ವಂಚಿತರಾದಾಗ ಸಂಭವಿಸುತ್ತದೆ. ಹೀಗಾಗಿ, ನಿದ್ರೆ ನಮ್ಮ ಆರೋಗ್ಯದಲ್ಲಿ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ರಾತ್ರಿ ಸಂಪೂರ್ಣವಾಗಿ ನಿದ್ರೆ ಮಾಡಿದರೆ ಹಗಲು ವೇಳೆ ನಿದ್ರೆ ಬಾರದಂತೆ ತಡೆಯಬಹುದು.

ಇದನ್ನೂ ಓದಿ: Health Tips: ನಿದ್ರೆಯಿಂದ ಖಿನ್ನತೆ ಹೆಚ್ಚಾಗುತ್ತಾ?; ನಿದ್ರೆಗೂ ಮಾನಸಿಕ ಆರೋಗ್ಯಕ್ಕೂ ಇರುವ ನಂಟೇನು?

Weight Loss: ನಿದ್ರೆ ಮಾಡುವಾಗ ತೂಕ ಜಾಸ್ತಿ ಆಗುತ್ತಾ? ಕಡಿಮೆಯಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್