ರಾತ್ರಿ ನಿದ್ದೆ ಬರದೆ ಒದ್ದಾಡುತ್ತಿದ್ದರೆ ಅಸಮರ್ಪಕ ಆಹಾರಶೈಲಿ ಕಾರಣವಿರಬಹದು; ಎಚ್ಚರವಿರಲಿ

ದೇಹಕ್ಕೆ ಬೇಕಾದ ಕ್ಯಾಲೋರಿಗಳನ್ನು ಸರಿಯಾದ ರೀತಿಯಲ್ಲಿ ಪೂರೈಸದಿದ್ದರೆ ದೇಹ  ಹಸಿವು, ನೀರಡಿಕೆ ಸುಸ್ತು ಎಲ್ಲದರಲ್ಲೂ ಗೊಂದಲಕ್ಕೀಡಾಗಿ ಸಮಸ್ಯೆ ಉಲ್ಬಣವಾಗುತ್ತದೆ. ಇದರಿಂದ ನಿಮ್ಮ ಚಯಾಪಯದ ಮೇಲೆ ಪರಿಣಾಮ ಬೀರುತ್ತದೆ.

ರಾತ್ರಿ ನಿದ್ದೆ ಬರದೆ ಒದ್ದಾಡುತ್ತಿದ್ದರೆ ಅಸಮರ್ಪಕ ಆಹಾರಶೈಲಿ ಕಾರಣವಿರಬಹದು; ಎಚ್ಚರವಿರಲಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on: Jan 28, 2022 | 10:40 AM

ಕೆಲವರ ಬಳಿ ಕೇಳಿರಬಹುದು, ರಾತ್ರಿ ನಿದ್ದೆಯೇ ಬರುತ್ತಿಲ್ಲ, ಸಿನಿಮಾ ನೋಡಿ, ಪುಸ್ತಕ ಓದಿ, ವಾಕಿಂಗ್​ ಹೋಗಿ ಬಂದ ಮೇಲೂ ಮಧ್ಯರಾತ್ರಿ ಕಳೆದರೂ ನಿದ್ದೆ ಬರುವುದಿಲ್ಲ ಎಂದು ಗೊಣಗುತ್ತಾರೆ. ರಾತ್ರಿ ನಿದ್ದೆ ಬರದೆ ನಿಶಾಚರಿಗಳಂತೆ ಓಡಾಡಿ ಸುಸ್ತಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ಈ ಸಮಸ್ಯೆ ಅತೀ ಚಿಕ್ಕ ವಯಸ್ಸಿನವರಲ್ಲಿಯೇ ಕಾಡುತ್ತಿದೆ. ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ನಿದ್ದೆ (Sleep) ಅತಿ ಮುಖ್ಯ ಅಂಶವಾಗಿದೆ. ನಿದ್ದೆಯ ಕೊರತೆಯಿಂದ ಆರೋಗ್ಯ ಹದಗೆಡುವುದಲ್ಲದೆ ಇನ್ನಿತರ ಕಾಯಿಲೆಗಳೂ ಆವರಿಸಿಕೊಳ್ಳುತ್ತವೆ. ಪ್ರತಿಯೊಬ್ಬರ ನಿದ್ದೆಯ ಅವಧಿ ಬೇರೆ ಬೇರೆ ಆದರೆ ಆರೋಗ್ಯವಂತ ವ್ಯಕ್ತಿಗೆ ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಅಗತ್ಯವಾಗಿರುತ್ತದೆ. ಹೀಗಾಗಿ ಅದಕ್ಕೆ ಆಹಾರ ಸೇವನೆ ಮುಖ್ಯವಾಗಿರುತ್ತದೆ. ನಿದ್ದೆಗೆ ಪ್ರಮುಖ ಕಾರಣ ಸೇವಿಸುವ ಆಹಾರ (Food). ಪ್ರತಿದಿನ ಸೇವಿಸುವ ಆಹಾರ, ನಿಮ್ಮ ಡಯೆಟ್​ (Diet) ಎಲ್ಲವೂ ನಿದ್ದೆ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಎಷ್ಟೇ ಸುಸ್ತಾಗಿದ್ದರೂ ಸರಿಯಾದ ಪ್ರಮಾಣದಲ್ಲಿ, ಸರಿಯಾದ ಆಹಾರವನ್ನು ಸೇವಿಸಿದರೆ ನಿದ್ದೆ ತಾನಾಗಿಯೇ ಆವರಿಸಿಕೊಳ್ಳುತ್ತದೆ. ನಿದ್ದೆಯ ಕೊರತೆಯಿಂದ ಮಧುಮೆಹ, ಹೃದಯಸಂಬಂಧಿ ಕಾಯಿಲೆ ಸೇರಿದಂತೆ ಹಲವು ರೋಗಗಳು ನಿಮ್ಮ ಕಾಡಬಹುದು. ಆದ್ದರಿಂದ ಮಲಗಿದ ತಕ್ಷಣ ನಿದ್ದೆ ಬರದಿದ್ದರೆ ಅದಕ್ಕೆ ನೀವು ನಿಮ್ಮ ಆಹಾರದ ಶೈಲಿಯಲ್ಲೇ ದೂಷಿಸಿಕೊಳ್ಳಬೇಕು. ಹಾಗಾದರೆ ಯಾವೆಲ್ಲಾ ಆಹಾರ ನಿಮ್ಮ ನಿದ್ದೆಗೆ ಧಕ್ಕೆ ತರುತ್ತವೆ? ಇಲ್ಲದೆ ಮಾಹಿತಿ

ಆಲ್ಕೋಹಾಲ್​ ಸೇವನೆ :  ನಿದ್ದೆಯ ಕೊರತೆಗೆ ಅಥಾವ ನಿದ್ದೆ ಸರಿಯಾಗಿ ಬರದಿರಲು ಮದ್ಯ ಸೇವೆನೆ ಒಂದು  ಪ್ರಮುಖ ಕಾರಣವಾಗಿದೆ. ಆಲ್ಕೋಹಾಲ್​ ಸೇವನೆಯಿಂದ ಬಹುಬೇಗ ನಿದ್ದೆ ಬರುತ್ತದೆ ಎಂದು ಕೆಲವರು ನಂಬುತ್ತಾರೆ. ಆದರೆ ಆಲ್ಕೋಹಾಲ್​ ಉತ್ತಮ ನಿದ್ದೆಯನ್ನು ಕಸಿಯುತ್ತದೆ ಎನ್ನುವುದೂ ಕೂಡ ಅಷ್ಟೇ ಸತ್ಯ. ಅಷ್ಟೇ ಅಲ್ಲದೆ ಆರೋಗ್ಯದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುತ್ತದೆ,

ಊಟ ಮಾಡಿದ ತಕ್ಷಣ ನಿದ್ದೆ : ಮಲಗುವ ಕನಿಷ್ಠ 2 ಗಂಟೆ ಮೊದಲು ಊಟವನ್ನು ಮಾಡಿ. ಊಟ ಮಾಡಿದ ತಕ್ಷಣ ಮಲಗಿದರೆ ನಿದ್ದೆ ಬರುವುದಿಲ್ಲ. ಇದು ಆರೋಗ್ಯಕ್ಕೂ ಒಳಿತಲ್ಲ. ಆದ್ದರಿಂದ ನಿದ್ದೆಗೂ ಮೊದಲು ಊಟ ಬೇಡ. ಸಾಧ್ಯವಾದರೆ ಸಂಜೆ 7 ಗಂಟೆಗೆ ಊಟ ಮಾಡಿ 10 ಗಂಟೆಯ ಸಮಯಕ್ಕೆ ಮಲಗುವ ಅಭ್ಯಾಸ ಮಾಡಿಕೊಳ್ಳಿ. ನಿದ್ದೆಯ ಸಮಯ  ಸರಿಯಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ.

ಬೆಳಗ್ಗಿನ ತಿಂಡಿಯನ್ನು ತ್ಯಜಿಸುವುದು : ಬೆಳಗ್ಗಿನ ತಿಂಡಿ ದೇಹವನ್ನು ಇಡೀ ದಿನದ ಕೆಲಸಕ್ಕೆ ಒಗ್ಗಿಕೊಳ್ಳುವಂತೆ ಮಾಡುತ್ತದೆ. ಹೀಗಾಗಿ ತಿಂಡಿಯನ್ನು ಸ್ಕಿಪ್​ ಮಾಡಲೇಬೇಡಿ.  ಬೆಳಗ್ಗಿನ ತಿಂಡಿಯನ್ನು ಸ್ಕಿಪ್​ ಮಾಡುವುದು ದಿನಕಳೆದಂತೆ ನಿಮ್ಮ ನಿದ್ದೆಯ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅಲ್ಲದೆ ಬೆಳಗ್ಗೆ ಎದ್ದಾಗ ನಿಮ್ಮ ಆಹಾರ ಸರಿಯಾಗಿದ್ದರೆ ಮೆದುಳು ಕೂಡ ಕ್ರೀಯಾಶಿಲತೆಯಿಂದ ಕೂಡಿರುತ್ತದೆ. ಇಲ್ಲವಾದರೆ ಗೊಂದಲ,ಮಂಪರಿನಂತ ಹಅನುಭವವಾಗುತ್ತದೆ. ಕ್ರಮೇಣ ನಿದ್ದೆಯ ಸಮಸ್ಯೆ ಉಂಟಾಗಬಹುದು.

ಕ್ಯಾಲೋರಿಗಳ ಕೊರತೆ: ದೇಹಕ್ಕೆ ಬೇಕಾದ ಕ್ಯಾಲೋರಿಗಳನ್ನು ಸರಿಯಾದ ರೀತಿಯಲ್ಲಿ ಪೂರೈಸದಿದ್ದರೆ ದೇಹ  ಹಸಿವು, ನೀರಡಿಕೆ ಸುಸ್ತು ಎಲ್ಲದರಲ್ಲೂ ಗೊಂದಲಕ್ಕೀಡಾಗಿ ಸಮಸ್ಯೆ ಉಲ್ಬಣವಾಗುತ್ತದೆ. ಇದರಿಂದ ನಿಮ್ಮ ಚಯಾಪಯದ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ ನಿದ್ದೆ ಸರಿಯಾಗಿ ಬರುವುದಿಲ್ಲ. ಆದ್ದರಿಂದ ದೇಹಕ್ಕೆ ಕ್ಯಾಲೋರಿ, ಪ್ರೋಟೀನ್, ಫೈಬರ್​ ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ನೀಡಿ ದೇಹ ಸ್ವಾಸ್ಥ್ಯವಾಗಿರುವಂತೆ ನೋಡಿಕೊಳ್ಳಿ.

(ಇಲ್ಲಿರುವ ಸಲಹೆಗಳು ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ ನೌ ವರದಿಯನ್ನು ಆಧರಿಸಿ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ)

ಇದನ್ನೂ ಓದಿ;

Health Tips: ಆ್ಯಸಿಡಿಟಿ, ಅಜೀರ್ಣದಿಂದ ಬಳಲುತ್ತಿದ್ದೀರಾ?; ಆಯುರ್ವೇದದಲ್ಲಿದೆ ಸುಲಭ ಪರಿಹಾರ