Skincare: ಚರ್ಮದ ಆರೋಗ್ಯಕ್ಕೆ ಆಲ್ಕೋಹಾಲ್ ಬಳಕೆ; ಮಾಹಿತಿ ಹಂಚಿಕೊಂಡ ಶಹೀನ್ ಭಟ್
ಬಾಲಿವುಡ್ ನಟಿ ಆಲಿಯಾಭಟ್ ಸಹೋದರಿ ಶಹೀನ್ ಭಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಲ್ಕೋಹಾಲ್ ಬಗೆಗಿನ ಉತ್ತಮ ಗುಣಗಳ ಬಗ್ಗೆ ಹಂಚಿಕೊಂಡಿದ್ದಾರೆ.
ಆಲ್ಕೋಹಾಲ್ (Alcohol) ಬಳಕೆ ಸಮಾಜದಲ್ಲಿ ಒಂದು ರೀತಿಯ ದುರಾಭ್ಯಾಸ ಎನ್ನುವ ಭಾವನೆಯನ್ನು ಜನರಲ್ಲಿ ಮೂಡಿಸಿದೆ. ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವುದು ಎಲ್ಲರಿಗೂ ತಿಳಿದ ವಿಷಯ ಆದರೆ ಬಾಲಿವುಡ್ ನಟಿ ಆಲಿಯಾಭಟ್ ಸಹೋದರಿ ಶಹೀನ್ ಭಟ್ (Shaheen Bhatt) ತಮ್ಮ ಸಾಮಾಜಿಕ ಜಾಲತಾಣದಲ್ಲಿ ಆಲ್ಕೋಹಾಲ್ ಬಗೆಗಿನ ಉತ್ತಮ ಗುಣಗಳ ಬಗ್ಗೆ ಹಂಚಿಕೊಂಡಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಶಹೀನ್ ಅವರು ಆಲ್ಕೋಹಾಲ್ನ ಉಪಯೋಗಗಳ ಕುರಿತು ಇನ್ಸ್ಟಾಗ್ರಾಮ್ (Instagram) ನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಶಹೀನ್ ಅವರು ಚರ್ಮರೋಗ ತಜ್ಞೆ ಜಯಶ್ರೀ ಅವರ ಸಲಹೆಯನ್ನು ಕೇಳಿದ ಬಳಿಕ ಪೋಸ್ಟ್ ಹಂಚಿಕೊಂಡಿದ್ದಾರೆ. ಆಲ್ಕೋಹಾಲ್ ಚರ್ಮದ ಆರೋಗ್ಯಕ್ಕೆ ಉತ್ತಮವಾಗಿದೆ. ಸ್ಕಿನ್ ಕೇರ್ ಉತ್ಪನ್ನಗಳ ತಯಾರಿಕೆಯಲ್ಲಿಯೂ ಆಲ್ಕೋಹಾಲನ್ನು ಬಳಸಲಾಗುತ್ತದೆ. ಇದು ಸ್ಕಿನ್ ಕೇರ್ ಉತ್ಪನ್ನಗಳನ್ನು ದೀರ್ಘಕಾಲ ಬಾಳಿಕೆ ಬರುವಂತೆ ಮಾಡುತ್ತದೆ. ಅಲ್ಲದೆ ಆಲ್ಕೋಹಾಲ್ನಲ್ಲಿರುವ ಆ್ಯಂಟಿ ಮೈಕ್ರೋಬೈಯಲ್ ಅಂಶಗಳು ಚರ್ಮದ ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ. ಇಲ್ಲಿ ನಾವು ಉತ್ತಮ ಆಲ್ಕೋಹಾಲ್ ಬಗ್ಗೆ ಮಾತ್ರ ಹೇಳುತ್ತಿದ್ದೇವೆ. ಆಲ್ಕೋಹಾಲ್ಅನ್ನು ನೇರವಾಗಿ ಬಳಸುವುದು ಚರ್ಮದ ಆರೋಗ್ಯಕ್ಕೆ ಒಳಿತಲ್ಲ. ಆದರೆ ಬಹುತೇಕ ಸ್ಕಿನ್ ಕೇರ್ ಉತ್ಪನ್ನಗಳಲ್ಲಿ ಇದನ್ನು ಬಳಸುತ್ತಾರೆ. ಆಲ್ಕೋಹಾಲ್ನಲ್ಲಿ ಹಲವು ವಿಧಗಳಿವೆ ಅದರಲ್ಲಿ ಚರ್ಮಕ್ಕೆ ಉತ್ತಮವಾಗಿರುವ ಸೆಟೈಲ್ ಆಲ್ಕೋಹಾಲ್, ಸ್ಟೆರಿಲ್ ಆಲ್ಕೋಹಾಲ್, ಸೆಟರಿಲ್ ಆಲ್ಕೋಹಾಲ್ಗಳನ್ನು ಬಳಸಬಹುದು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:
ಈ ಆಯುರ್ವೇದ ಟಿಪ್ಸ್ಗಳ ಮೂಲಕ ಶೀತ ಕೆಮ್ಮಿನಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ
Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!