Health Tips: ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗೆಲ್ಲ ಮಾತ್ರೆ ನುಂಗುತ್ತೀರಾ?; ಈ 5 ಅಪಾಯಗಳ ಬಗ್ಗೆ ಎಚ್ಚರ!
ಎಷ್ಟೋ ಜನರು ಕೊರೊನಾ ರೋಗಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರ ಬಳಿ ಹೋಗುವುದೇ ಇಲ್ಲ. ಬದಲಾಗಿ ತಾವೇ ಜ್ವರದ ಮಾತ್ರೆ, ನೋವು ನಿವಾರಕಗಳನ್ನು ಸೇವಿಸಿ ಸುಮ್ಮನಾಗುತ್ತಾರೆ. ಇದರಿಂದ ಔಷಧೀಯ ಉದ್ಯಮವು ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ.
ಶೀತ, ಕೆಮ್ಮು, ಜ್ವರ, ತಲೆನೋವು, ಆ್ಯಸಿಡಿಟಿ, ಮಲಬದ್ಧತೆ, ಮೈ-ಕೈ ನೋವು ಹೀಗೆ ಏನೇ ಸಮಸ್ಯೆಗಳು ಎದುರಾದರೂ ಜನರು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಾರಂಭವಾದ ಕೂಡಲೆ ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಆಂಟಾಸಿಡ್, ನೋವು ನಿವಾರಕ (Pain Killers) ಅಥವಾ ಆ್ಯಂಟಿ ಬಯಾಟಿಕ್ (Antibiotic) ಆಗಿರಬಹುದು. ಜನರು ಜೀವನಶೈಲಿಯ ಬದಲಾವಣೆಗಳು ಮತ್ತು ಸುಧಾರಣೆಗಳ ಮೇಲೆ ಔಷಧಿಗಳನ್ನು ಆಯ್ಕೆ ಮಾಡುತ್ತಾರೆ. ಇದು ಬೇಗ ಗುಣವಾಗುವ ಸುಲಭದ ಮಾರ್ಗವಾಗಿದೆ.
ಭಾರತದಲ್ಲಿ ಕೊರೊನಾ 3ನೇ ಅಲೆಯ ಸಾಂಕ್ರಾಮಿಕ ಶುರುವಾಗಿದೆ. ಜ್ವರವನ್ನು ಹೋಲುವ COVID-19 ರೋಗಲಕ್ಷಣಗಳನ್ನು ಗುಣಪಡಿಸಲು ಜನರು ಡೋಲೋ-650, ಪ್ಯಾರಾಸಿಟಮಾಲ್ ಮುಂತಾದ ಮಾತ್ರೆಗಳನ್ನು ಸೇವಿಸುತ್ತಾರೆ. ಎಷ್ಟೋ ಜನರು ಕೊರೊನಾ ರೋಗಲಕ್ಷಣಗಳು ಕಾಣಿಸಿಕೊಂಡರೂ ವೈದ್ಯರ ಬಳಿ ಹೋಗುವುದೇ ಇಲ್ಲ. ಬದಲಾಗಿ ತಾವೇ ಜ್ವರದ ಮಾತ್ರೆ, ನೋವು ನಿವಾರಕಗಳನ್ನು ಸೇವಿಸಿ ಸುಮ್ಮನಾಗುತ್ತಾರೆ. ಇದರಿಂದ ಔಷಧೀಯ ಉದ್ಯಮವು ಹೆಚ್ಚಿನ ಬೆಳವಣಿಗೆಯನ್ನು ಕಂಡಿದೆ. ಡೋಲೋ – ಪ್ಯಾರಸಿಟಮಾಲ್ ಮಾತ್ರೆಗಳ ಸೇವನೆ ಎಷ್ಟಾಗಿದೆ ಎಂಬುದರ ಕುರಿತು ಇತ್ತೀಚಿನ ಅಂಕಿ-ಅಂಶಗಳ ಬಹಿರಂಗಪಡಿಸುವಿಕೆಯಿಂದ ಇದು ಸ್ಪಷ್ಟವಾಗಿದೆ. ಇತ್ತೀಚೆಗೆ, ಸಾಂಕ್ರಾಮಿಕ ರೋಗದ ಅಡ್ಡ ಪರಿಣಾಮವಾಗಿ, ಭಾರತದ ಜನರು 567 ಕೋಟಿ ರೂಪಾಯಿ ಮೌಲ್ಯದ ಈ ಔಷಧಿಯನ್ನು ಸೇವಿಸಿದ್ದಾರೆ ಎಂಬುದು ಬಹಿರಂಗವಾಗಿದೆ.
ತಜ್ಞರ ಪ್ರಕಾರ, ಔಷಧಿಗಳ ಮಿತಿಮೀರಿದ ಬಳಕೆಯು ನಿರ್ದಿಷ್ಟ ಅಂಗಗಳ ಮೇಲೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಂಭೀರ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಬೇಜವಾಬ್ದಾರಿಯಿಂದ ಮಾತ್ರೆಗಳನ್ನು ಸೇವಿಸುವುದರಿಂದ ಉಂಟಾಗುವ ಐದು ವಿಷಕಾರಿ ಪರಿಣಾಮಗಳು ಹೀಗಿವೆ…
1. ಮೂತ್ರಪಿಂಡದ ಹಾನಿ: ಮೂತ್ರಪಿಂಡಗಳು ರಕ್ತವನ್ನು ಫಿಲ್ಟರ್ ಮಾಡುವ ಮತ್ತು ಮೂತ್ರದ ಮೂಲಕ ದೇಹದಿಂದ ವಿಷವನ್ನು ತೆಗೆದುಹಾಕುವ ಹುರುಳಿ-ಆಕಾರದ ಅಂಗಗಳಾಗಿವೆ. ಆದರೆ, ಡ್ರಗ್ಸ್ ಮೂತ್ರಪಿಂಡಗಳಿಗೆ ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಇದು ಅಲರ್ಜಿಯನ್ನು ಉಂಟುಮಾಡಬಹುದು. ಒಂದು ಅಧ್ಯಯನದ ಪ್ರಕಾರ, ಶೇ. 20ರಷ್ಟು ಮೂತ್ರಪಿಂಡ ವೈಫಲ್ಯದ ಪ್ರಕರಣಗಳು ಔಷಧಿಗಳ ಮಿತಿಮೀರಿದ ಸೇವನೆಗೆ ಕಾರಣವಾಗಿವೆ.
2. ವ್ಯಸನದ ಅಪಾಯ: ಮಾದಕ ವ್ಯಸನವು ಗಾಂಜಾದಂತಹ ವಸ್ತುಗಳ ಅತಿಯಾದ ಬಳಕೆಗೆ ಸೀಮಿತವಾಗಿಲ್ಲ. ಇದು ನೋವು ನಿವಾರಕಗಳ ದುರುಪಯೋಗವನ್ನು ಸಹ ಸೂಚಿಸುತ್ತದೆ. ತಜ್ಞರ ಪ್ರಕಾರ, ನೋವು ನಿವಾರಕಗಳಿಗೆ ವ್ಯಸನಿಯಾಗಿರುವುದು ಚಿಕಿತ್ಸೆಗಾಗಿ ಮಾದಕ ವ್ಯಸನದ ಅತ್ಯಂತ ಸಂಕೀರ್ಣವಾದ ರೂಪಗಳಲ್ಲಿ ಒಂದಾಗಿದೆ.
3. ಪ್ರತಿಜೀವಕ ನಿರೋಧಕತೆಯ ಅಪಾಯ: ವ್ಯಕ್ತಿಯು ಯಾವುದೇ ರೀತಿಯ ಪ್ರತಿಜೀವಕಗಳ (ಆ್ಯಂಟಿಬಯೋಟಿಕ್) ಮೇಲೆ ಹೆಚ್ಚು ಅವಲಂಬಿತವಾಗಿದ್ದಾಗ, ನಮ್ಮ ದೇಹವು ಅದರ ಪರಿಣಾಮಗಳಿಗೆ ನಿರೋಧಕವಾಗಬಹುದು. ಅದರ ಪರಿಣಾಮವಾಗಿ ದೇಹವು ಔಷಧಿಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತದೆ. ಮೂತ್ರಪಿಂಡಗಳಿಗೆ ಮತ್ತಷ್ಟು ಹಾನಿಯನ್ನುಂಟುಮಾಡುವ ಬಲವಾದ ಪ್ರತಿಜೀವಕಗಳಿಗೆ ವ್ಯಕ್ತಿಯನ್ನು ಬದಲಾಯಿಸುವಂತೆ ಒತ್ತಾಯಿಸುತ್ತದೆ.
4. ಹೆಚ್ಚು ತೀವ್ರವಾದ ತಲೆನೋವಿನ ಅಪಾಯ: ಕೆಲವು ಜನರಿಗೆ ತಲೆನೋವು ಅಸ್ವಸ್ಥತೆಯ ಕೆಟ್ಟ ರೂಪವಾಗಿದೆ. ಏಕೆಂದರೆ ಈ ನೋವು ಏಕಾಗ್ರತೆ ಮತ್ತು ದೈನಂದಿನ ಕಾರ್ಯಗಳಿಗೆ ಅಡ್ಡಿಪಡಿಸುತ್ತದೆ. ಪರಿಹಾರವನ್ನು ಪಡೆಯಲು ಒಬ್ಬರು ಕಾಫಿ, ಚಹಾವನ್ನು ಅವಲಂಬಿಸಬಹುದು ಅಥವಾ ಸ್ವಲ್ಪ ನಿದ್ರೆ ಮಾಡಲು ಪ್ರಯತ್ನಿಸಬಹುದು. ಹೇಗಾದರೂ ಕೆಲವೊಮ್ಮೆ ಒಬ್ಬ ವ್ಯಕ್ತಿಯು ತಲೆನೋವು ಪ್ರಾರಂಭವಾದ ತಕ್ಷಣ ನೋವು ನಿವಾರಕಗಳನ್ನು ಸೇವಿಸುವುದನ್ನು ನೋಡಬಹುದು. ಕ್ರಮೇಣ ಈ ಔಷಧಿಗಳ ಹೆಚ್ಚಿನ ಬಳಕೆಯು ತಲೆನೋವನ್ನು ಉಲ್ಬಣಗೊಳಿಸುವ ಸಾಧ್ಯತೆಗಳಿರುತ್ತವೆ.
5. ಹೃದಯಾಘಾತದ ಅಪಾಯ: ಡೆಮಾರ್ಕ್‌ನ ಕೋಪನ್‌ಹೇಗನ್ ಯೂನಿವರ್ಸಿಟಿ ಆಸ್ಪತ್ರೆಯ ಸಂಶೋಧಕರು ನಡೆಸಿದ ಅಧ್ಯಯನದ ಪ್ರಕಾರ, ಐಬುಪ್ರೊಫೇನ್‌ನ ಅತಿಯಾದ ಬಳಕೆಯು ಹೃದಯಾಘಾತದಿಂದ ಬದುಕುಳಿದ ರೋಗಿಗಳ ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ.
(ಈ ಸಲಹೆಗಳು ನಿಮ್ಮ ಮಾಹಿತಿಗೆ ಮಾತ್ರ. ಈ ಬಗ್ಗೆ ವೈದ್ಯರ ಸಲಹೆ, ಸೂಚನೆ ಪಡೆದ ಬಳಿಕವೇ ನಿಮ್ಮ ಆಹಾರ ಕ್ರಮ, ಔಷಧಿ ಸೇವೆಯಲ್ಲಿ ಬದಲಾವಣೆ ಮಾಡಿಕೊಳ್ಳಿ)
ಇದನ್ನೂ ಓದಿ: Health Tips: ನೀವು ಕಾಫಿ, ಜ್ಯೂಸ್ ಪ್ರಿಯರಾ?; ಪಾನೀಯ ಸೇವಿಸುವಾಗ ಈ 5 ತಪ್ಪನ್ನು ಎಂದೂ ಮಾಡಬೇಡಿ!