AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರೆಗೆ ಜಾರುವ ಅವಸರದಲ್ಲಿ ತಪ್ಪಾದ ಮಾರ್ಗ ಅನುಸರಿಸಬೇಡಿ; ಮಲಗುವ ಕ್ರಮದ ಬಗ್ಗೆ ಇರಲಿ ಎಚ್ಚರ

ಇತ್ತೀಚಿನ ದಿನಗಳಲ್ಲಿ ಬೆನ್ನುನೋವು, ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳನ್ನು ಬಹಳ ಬೇಗ ಎದುರಿಸುತ್ತೇವೆ. ಇದಕ್ಕೆ ಒಂದು ಕಾರಣವೆಂದರೆ ತಪ್ಪಾದ ಕ್ರಮದಲ್ಲಿ ಮಲಗುವುದು. ನೀವು ಈಗಾಗಲೇ ಇಂತಹ ಸಮಸ್ಯೆಯನ್ನು ಹೊಂದಿದ್ದರೆ ಮತ್ತು ನಿಮ್ಮ ಮಲಗುವ ಕ್ರಮ ತಪ್ಪಾಗಿದ್ದರೆ, ಆಗ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು.

ನಿದ್ರೆಗೆ ಜಾರುವ ಅವಸರದಲ್ಲಿ ತಪ್ಪಾದ ಮಾರ್ಗ ಅನುಸರಿಸಬೇಡಿ; ಮಲಗುವ ಕ್ರಮದ ಬಗ್ಗೆ ಇರಲಿ ಎಚ್ಚರ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Dec 25, 2021 | 7:05 AM

Share

ಪ್ರತಿಯೊಬ್ಬ ವ್ಯಕ್ತಿಯ ಮಲಗುವ ಕ್ರಮ ವಿಭಿನ್ನವಾಗಿರುತ್ತದೆ. ಕೆಲವರು ತಮ್ಮ ಎಡಬದಿ ತಿರುಗಿ ಮಲಗಿದರೆ ಮತ್ತೆ ಕೆಲವರು ಬಲ ಬದಿಗೆ ತಿರುಗಿ ಮಲಗುತ್ತಾರೆ. ಇನ್ನೂ ಕೆಲವರು ನೇರವಾಗಿ ಮಲಗುತ್ತಾರೆ. ಇದಲ್ಲದೇ ಹೊಟ್ಟೆ ಕೆಳಗೆ ಮಾಡಿ ಮಲಗುವ ಅಭ್ಯಾಸವು ಅನೇಕರಲ್ಲಿ ಇದೆ. ಆದರೆ ಯಾವ ರೀತಿಯಲ್ಲಿ ನಿದ್ರೆ ಮಾಡುವುದು ಸರಿ ಎಂದು ಅರ್ಥಮಾಡಿಕೊಳ್ಳುವುದು ಅಗತ್ಯ. ಏಕೆಂದರೆ ಸರಿಯಾದ ಮಾರ್ಗ ಅನುಸರಿಸದಿದ್ದರೆ ಅನೇಕ ಕಾಯಿಲೆಗಳು ಎದುರಾಗುತ್ತದೆ. ಹೀಗಾಗಿ ತಜ್ಞರು ನಿದ್ರೆಗೆ (Sleeping) ಸಂಬಂಧಿಸಿದ ಸರಿಯಾದ ಕ್ರಮದ ಬಗ್ಗೆ ಮಾಹಿತಿ ನೀಡಿದ್ದಾರೆ ಗಮನಿಸಿ.

ಇತ್ತೀಚಿನ ದಿನಗಳಲ್ಲಿ ಬೆನ್ನುನೋವು, ಸ್ನಾಯು ಸೆಳೆತ ಮುಂತಾದ ಸಮಸ್ಯೆಗಳನ್ನು ಬಹಳ ಬೇಗ ಎದುರಿಸುತ್ತೇವೆ. ಇದಕ್ಕೆ ಒಂದು ಕಾರಣವೆಂದರೆ ತಪ್ಪಾದ ಭಂಗಿಯಲ್ಲಿ ಮಲಗುವುದು. ನೀವು ಈಗಾಗಲೇ ಇಂತಹ ಸಮಸ್ಯೆಯನ್ನು ಹೊಂದಿದ್ದರೆ ಮತ್ತು ನಿಮ್ಮ ಮಲಗುವ ಕ್ರಮ ತಪ್ಪಾಗಿದ್ದರೆ, ಆಗ ನಿಮ್ಮ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ನೀವು ಈ ಸಮಸ್ಯೆಗಳಿಂದ ದೂರ ಇರಲು ಬಯಸಿದರೆ, ಇಂದಿನಿಂದಲೇ ನಿದ್ರೆ ಮಾಡಲು ಸರಿಯಾದ ಮಾರ್ಗ ಯಾವುದು ಎಂದು ತಿಳಿಯಿರಿ.

ನಿಮ್ಮ ಎಡಭಾಗಕ್ಕೆ ಮುಖ ಮಾಡಿ ಮಲಗಿ ಸಾಮಾನ್ಯವಾಗಿ ಜನರು ಯಾವಾಗಲೂ ಎಡಭಾಗದಲ್ಲಿ ಮಲಗಬೇಕು. ಎಡ ಬದಿಗೆ ತಿರುಗಿ ಮಲಗುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ ಮತ್ತು ಗ್ಯಾಸ್, ಅಸಿಡಿಟಿ, ಸ್ಲಿಪ್ ಡಿಸ್ಕ್, ಬೆನ್ನುನೋವು, ಗರ್ಭಕಂಠ, ಕುತ್ತಿಗೆ ನೋವು, ಅಧಿಕ ಬಿಪಿ, ಹೃದ್ರೋಗದಂತಹ ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಆದರೆ, ಇಡೀ ರಾತ್ರಿ ಒಂದೇ ಕಡೆ ಮಲಗಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಬೆನ್ನಿನ ಮೇಲೆ ಮಲಗಬಹುದು. ಅಂದರೆ ನೇರವಾಗಿ ಮಲಗಬಹುದು. ಇದು ಬೆನ್ನುಹುರಿ, ಬೆನ್ನು, ಭುಜ ಮತ್ತು ಕುತ್ತಿಗೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಆದರೆ ಹೊಟ್ಟೆಯನ್ನು ಅಡಿ ಮಾಡಿ ಎಂದೂ ಮಲಗಬೇಡಿ. ಇದರಿಂದಾಗಿ ಬೆನ್ನು ನೋವು, ನರ ಸಂಬಂಧಿ ಮತ್ತು ಬೆನ್ನುಮೂಳೆ ಸಂಬಂಧಿತ ಸಮಸ್ಯೆಗಳು ಬರುವ ಸಾಧ್ಯತೆ ಇದೆ.

ಗರ್ಭಿಣಿಯರು ಬೆನ್ನು ಅಡಿಯಾಗಿ ನೇರವಾಗಿ ಮಲಗುವುದು ಉತ್ತಮ ಸಮಸ್ಯೆಗಳ ದೃಷ್ಟಿಯಿಂದ ಅನೇಕ ಬಾರಿ ಮಲಗುವ ಸ್ಥಾನವನ್ನು ಬದಲಾಯಿಸಬಹುದು. ಗರ್ಭಿಣಿಯರು ಎಡ ಅಥವಾ ಬಲ ಬದಿಗೆ ತಿರುಗಿ ಮಲಗುವುದಕ್ಕಿಂತ ಅವರು ತಮ್ಮ ಬೆನ್ನಿನ ಮೇಲೆ ಬಲ ಹಾಕಿ ಮಲಗುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದು ಗರ್ಭಾವಸ್ಥೆಯಲ್ಲಿ ಉಂಟಾಗುವ ಆಸಿಡ್ ರಿಫ್ಲಕ್ಸ್ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಬೆನ್ನು ನೋವು ಮತ್ತು ಭುಜದ ನೋವಿಗೂ ಮುಕ್ತಿ ಸಿಗುತ್ತದೆ.

ಮಲಗುವಾಗ ದಿಂಬಿನ ದಪ್ಪದ ಬಗ್ಗೆ ಕಾಳಜಿ ವಹಿಸುವುದು ಮುಖ್ಯ ಜನರು ದಿಂಬು ಹಾಕಬೇಕೆ ಅಥವಾ ಬೇಡವೇ ಎಂಬ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಆದರೆ ತಜ್ಞರ ಪ್ರಕಾರ, ದೇಹದ ಸರಿಯಾದ ಸ್ಥಾನಕ್ಕೆ ದಿಂಬು ಅಗತ್ಯ. ಆದರೆ ದಿಂಬನ್ನು ಬಳಸುವಾಗ ಅದರ ದಪ್ಪದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕು. ದಿಂಬಿನ ದಪ್ಪವು ನಿಮ್ಮ ಭುಜ, ತಲೆ ಮತ್ತು ಕತ್ತಿನ ನಡುವಿನ ಜಾಗವನ್ನು ತುಂಬುವಂತಿರಬೇಕು. ಮೊಣಕಾಲು ಅಥವಾ ಪಾದಗಳಲ್ಲಿ ನೋವು ಇರುವವರು ಕಾಲುಗಳ ನಡುವೆ ದಿಂಬನ್ನು ಇಟ್ಟು ಮಲಗುವುದು ಉತ್ತಮ.

ಇದನ್ನೂ ಓದಿ: ಚೆನ್ನಾಗಿ ನಿದ್ರೆ ಮಾಡಬೇಕಾದರೆ, ಹಾಸಿಗೆಗೆ ತೆರಳುವ 4-5 ಗಂಟೆ ಮೊದಲು ರಾತ್ರಿಯೂಟ ಸೇವಿಸಬೇಕು: ಡಾ ಸೌಜನ್ಯ ವಶಿಷ್ಠ

Brinjal Benefits: ಬದನೆಕಾಯಿ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಒಮ್ಮೆ ಗಮನಿಸಿ

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ