ಕೋವಿಡ್​ ಸೋಂಕಿತ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಕುಸಿತ: ಅಧ್ಯಯನದಲ್ಲಿ ಬಹಿರಂಗ

ಕೋವಿಡ್​ ಸೋಂಕಿಗೆ ಒಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆ  ಕಡಿಮೆಯಾಗಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.  ಇದು 35 ವರ್ಷದಿಂದ 52 ವರ್ಷದವರೆಗಿನ ಪುರುಷರಲ್ಲಿ ಈ ಬದಲಾವಣೆ ಕಾಣಿಸಿಕೊಂಡಿದೆ

ಕೋವಿಡ್​ ಸೋಂಕಿತ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಕುಸಿತ: ಅಧ್ಯಯನದಲ್ಲಿ ಬಹಿರಂಗ
ಪ್ರಾತಿನಿದಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Dec 24, 2021 | 10:12 AM

ಕೋವಿಡ್​ ಸೋಂಕಿಗೆ ಒಳಗಾದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆ  ಕಡಿಮೆಯಾಗಿದೆ ಎಂದು ಅಧ್ಯಯನದಿಂದ ಬಹಿರಂಗವಾಗಿದೆ.  ಇದು 35 ವರ್ಷದಿಂದ 52 ವರ್ಷದವರೆಗಿನ ಪುರುಷರಲ್ಲಿ ಈ ಬದಲಾವಣೆ ಕಾಣಿಸಿಕೊಂಡಿದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಆದರೆ ಕೊರೋನಾ ಸೋಂಕಿತ ವ್ಯಕ್ತಿಯ  ವೀರ್ಯವು ಯಾವುದೇ ಸೋಂಕನ್ನು ತರುವುದಿಲ್ಲ ಅಥವಾ ಬೇರೆಯವರಿಗೆ ಹರಡುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಕೋವಿಡ್​ ಸೋಂಕಿಗೆ ಒಳಗಾದ ಸರಾಸರಿ 35 ವರ್ಷದ ವ್ಯಕ್ತಿಗಳಲ್ಲಿ ಈ ಸಮಸ್ಯೆ ಕಾಣಿಸಕೊಳ್ಳುತ್ತಿದ್ದು, ಸೋಂಕು ತಗುಲಿ 52 ದಿನದ ಬಳಿಕ  ವೀರ್ಯದ ಚಲನಶೀಲತೆ ಕಡಿಮೆಯಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.

ಫರ್ಟಿಲಿಟಿ ಮತ್ತು ಸ್ಟೆರಿಲಿಟಿ ಜರ್ನಲ್​ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ವಿಷಯ ತಿಳಿದುಬಂದಿದೆ. ಕೊರೋನಾದಿಂದ ಗುಣಮುಖರಾಗಿ 52 ದಿನಗಳ ನಂತರ 35 ವರ್ಷ ವಯಸ್ಸಿನ 120 ಪುರುಷರಿಂದ ಮಾದರಿಗಳನ್ನು ಸಂಗ್ರಹಿಸಿ  ಬೆಲ್ಜಿಯಂ ಸಂಶೋಧಕರು ಅಧ್ಯಯನ ಕೈಗೊಂಡಿದ್ದರು.  ಕೊರೋನಾ ಬಳಿಕ ವೀರ್ಯದ ಗುಣಮಟ್ಟವು ಸುಧಾರಿಸಿದ್ದು ಕಂಡುಬಂದಿದೆ. ಆದರೆ 51 ದಿನಗಳ ಬಳಿಕ ವೀರ್ಯದ ಚಲನೆಯು 37 ಪ್ರತಿಶತದಷ್ಟು ಕಡಿಮೆಯಾಗಿರುವುದು ಕಂಡುಬಂದಿದೆ.  ಸಂತಾನಹೀನತೆಯನ್ನು ಆಧರಿಸಿದ ವರದಿ ಇದಾಗಿದೆ. ಕೋವಿಡ್ ಸೋಂಕಿಗೆ ಒಳಗಾದ ಒಂದು ತಿಂಗಳಲ್ಲಿ 31 ಪುರುಷರ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗಿತ್ತು. ವೀರ್ಯಾಣು‌ ಸಂಖ್ಯೆ ಹಾಗೂ ಚಲನಶೀಲತೆ ಒಬ್ಬೊಬ್ಬರಲ್ಲಿ ಒಂದೊಂದು ಬಗೆಯಲ್ಲಿ ವ್ಯತ್ಯಾಸವಾಗಿರುವುದು ಕಂಡುಬಂದಿದೆ. 52 ಜನರ ಪೈಕಿ 34 ಜನರ ವೀರ್ಯವನ್ನು ಎರಡು ತಿಂಗಳ‌ ಬಳಿಕ ಸಂಗ್ರಹಿಸಿ ಪರೀಕ್ಷಿಸಿದಾಗ ವೀರ್ಯಾಣುಗಳ ಸಂಖ್ಯೆ ಶೇ.6 ಹಾಗೂ ವೀರ್ಯಾಣು ಚಲನಶೀಲತೆ ಶೇ.28ರಷ್ಟು ನಾಶವಾಗಿರುವುದು ಕಂಡುಬಂದಿದೆ.

ಮೂರು ತಿಂಗಳಲ್ಲಿ ವೀರ್ಯಾಣುಗಳ ಸಂಖ್ಯೆ ಹಾಗೂ ಚಲನಶೀಲತೆಯಲ್ಲಿ ಸಹಜ ಸ್ಥಿತಿಗೆ ಬರುತ್ತದೆ ಎಂದು ಹೇಳಲಾಗಿದ್ದರೂ, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯುತ್ತಿದ್ದು, ಸಮರ್ಪಕ‌ ಅಧ್ಯಯನದ ಬಳಿಕವಷ್ಟೇ ಈ ಬಗ್ಗೆ ಇನ್ನಷ್ಟು ಖಚಿತತೆ ಮೂಡಲಿದೆ ಎಂದು ತಜ್ಞರು ಹೇಳಿದ್ದಾರೆ. ವೀರ್ಯಾಣು ಸಂಖ್ಯೆ ಹಾಗೂ ಚಲನಶೀಲತೆಯಲ್ಲಿನ‌ ಕುಸಿತದಿಂದಾಗಿ ಗರ್ಭಧಾರಣೆ ಮೇಲೆ ಪರಿಣಾಮ ಬೀರಲಿದ್ದು, ಮಗು ಪಡೆಯಬಯಸುವ ದಂಪತಿಗಳು ಈ‌ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಬೇಕಿದೆ. ಅಲ್ಲದೆ ಸೂಕ್ತ ಪರೀಕ್ಷೆಯ ಬಳಿಕವೇ ಮಗು ಪಡೆಯುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ ಎಂದು ವರದಿ ಹೇಳಿದೆ.

ಕೋವಿಡ್‌ಗೆ ಒಳಗಾದವರಲ್ಲಿ ಅದರಲ್ಲೂ ರೆಮ್ಡಿಸಿವಿರ್ ಹಾಗೂ ಸ್ಟಿರಾಯ್ಡ್ ಪಡೆದ ಪುರುಷರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ ಎಂದು ಮತ್ತೊಂದು ಅಧ್ಯಯನ ಹೇಳಿದೆ. ಈ ಅಧ್ಯಯನದ ಪ್ರಕಾರ ಕೋವಿಡ್‌ಗೆ ಒಳಗಾದವರಲ್ಲಿ ಲೈಂಗಿಕ ಆಸಕ್ತಿಯೂ ಕುಂಠಿತವಾಗಿರುವುದು ಬೆಳಕಿಗೆ ಬಂದಿದೆ. ಶ್ವಾಸಕೋಶದ ಸಮಸ್ಯೆ ಅಂದರೆ ಕೊರೋನಾಕ್ಕೆ ತುತ್ತಾದ ವೇಳೆ ತೀವ್ರ ಉಸಿರಾಟದ ಸಮಸ್ಯೆ ಎದುರಾದವರಿಗೆ  ರೆಮ್ಡಿಸಿವಿರ್ ಹಾಗೂ ಸ್ಟಿರಾಯ್ಡ್ ಅನ್ನು ನೀಡಲಾಗಿತ್ತು.

ಇದನ್ನೂ ಓದಿ:

Delmicron ಒಮಿಕ್ರಾನ್ ನಂತರ ಬಂದಿದೆ ಹೊಸ ರೂಪಾಂತರಿ ಡೆಲ್ಮಿಕ್ರಾನ್; ರೋಗ ಲಕ್ಷಣಗಳೇನು? ಚಿಕಿತ್ಸೆ ಏನು?

Published On - 9:55 am, Fri, 24 December 21