Eye Care Tips: ಕಣ್ಣುಗಳ ಬಗ್ಗೆ ಇರಲಿ ಕಾಳಜಿ; ನಿಮಗೇ ಗೊತ್ತಿಲ್ಲದೆ ಮಾಡುವ ಈ ತಪ್ಪುಗಳು ಕಣ್ಣುಗಳಿಗೆ ಹಾನಿ

Health Tips: ತೂಕ ಇಳಿಸಿಕೊಳ್ಳಲು ಅಥವಾ ದೈಹಿಕ ಆರೋಗ್ಯದ ದೃಷ್ಟಿಯಿಂದ ನೀವು ಅಳವಡಿಸಿಕೊಳ್ಳುವ ಕೆಲವು ಡಯಟ್​ಗಳು ಕಣ್ಣಿನ ಆರೋಗ್ಯ ಕೆಡಿಸುತ್ತವೆ.

Eye Care Tips: ಕಣ್ಣುಗಳ ಬಗ್ಗೆ ಇರಲಿ ಕಾಳಜಿ; ನಿಮಗೇ ಗೊತ್ತಿಲ್ಲದೆ ಮಾಡುವ ಈ ತಪ್ಪುಗಳು ಕಣ್ಣುಗಳಿಗೆ ಹಾನಿ
ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Dec 23, 2021 | 5:23 PM

ಕಣ್ಣುಗಳು ದೇವರು ನಮಗೆ ಕೊಟ್ಟ ಒಂದು ಸುಂದರ ಅಂಗ. ಆದರೆ ನಾವು ನಮ್ಮ ಕಣ್ಣುಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವುದು ಸಾಮಾನ್ಯವಾಗಿಬಿಟ್ಟಿದೆ. ಅದರಲ್ಲೂ ಈಗ ಮೊಬೈಲ್​, ಕಂಪ್ಯೂಟರ್​ ಯುಗ. ಬಹುಪಾಲು ಜನರು ದಿನದಲ್ಲಿ ಅರ್ಧ ಭಾಗ ಮೊಬೈಲ್​, ಕಂಪ್ಯೂಟರ್​ ಮುಂದೆ ಕುಳಿತಿರುತ್ತಾರೆ. ಹೀಗಾಗಿ ಸಹಜವಾಗಿಯೇ ಕಣ್ಣಿನ ಆರೋಗ್ಯ ಹದಗೆಡುತ್ತಿದೆ. ಕಣ್ಣು ಉರಿ, ನೋವು, ದೃಷ್ಟಿ ಮಂದವಾಗುವುದು ಈಗೀಗ ಜಾಸ್ತಿಯಾಗಿದೆ.  ಆದರೆ ಈ ಮೊಬೈಲ್​ ಮತ್ತು ಕಂಪ್ಯೂಟರ್​, ಲ್ಯಾಪ್​ಟಾಪ್​ ಸ್ಕ್ರೀನ್​ ನೋಡುವುದರಿಂದ ಮಾತ್ರವಲ್ಲ, ನಿಮಗೆ ಗೊತ್ತಿಲ್ಲದೆ ನೀವು ಮಾಡುವ ಕೆಲವು ತಪ್ಪುಗಳು ಕೂಡ ನಿಮ್ಮ ಕಣ್ಣಿಗೆ ಹಾನಿಯನ್ನುಂಟು ಮಾಡುತ್ತವೆ.  ಅವು ಯಾವವು? ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಏನನ್ನು ಮಾಡಬಾರದು ಎಂಬುದನ್ನು ನಾವಿಲ್ಲಿ ಹೇಳಿದ್ದೇವೆ ನೋಡಿ..

ಡಯಟ್​​ ಬಗ್ಗೆ ಸರಿಯಾಗಿ ಕಾಳಜಿ ವಹಿಸದೆ ಇರುವುದು ತೂಕ ಇಳಿಸಿಕೊಳ್ಳಲು ಅಥವಾ ದೈಹಿಕ ಆರೋಗ್ಯದ ದೃಷ್ಟಿಯಿಂದ ನೀವು ಅಳವಡಿಸಿಕೊಳ್ಳುವ ಕೆಲವು ಡಯಟ್​ಗಳು ಕಣ್ಣಿನ ಆರೋಗ್ಯ ಕೆಡಿಸುತ್ತವೆ. ನಮ್ಮ ಕಣ್ಣುಗಳ ಆರೋಗ್ಯಕ್ಕೆ ಸೂಕ್ಷ್ಮ ಪೋಷಕಾಂಶಗಳು ಬೇಕಾಗುತ್ತವೆ. ವಿಟಮಿನ್​ ಸಿ, ಲ್ಯುಟೆನ್​, ಒಮೆಗಾ 3 ಫ್ಯಾಟಿ ಆ್ಯಸಿಡ್​, ಜಿನ್​ ಅಂಶಗಳ ಆಹಾರಗಳು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತವೆ. ಸಿಟ್ರಸ್​ ಹಣ್ಣುಗಳು, ಹಸಿರು ಸೊಪ್ಪು, ತರಕಾರಿಗಳು, ನಟ್​ಗಳು ಅಗತ್ಯ.  ಹೆಚ್ಚಿನ ನೀರು ಕುಡಿಯಬೇಕಾಗುತ್ತದೆ. ಹಾಗಾಗಿ ಡಯಟ್​ ಮಾಡುವಾಗ ಕಣ್ಣಿನ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಕಣ್ಣಿಗೆ ಹಾನಿ ತಪ್ಪಿದ್ದಲ್ಲ

ಕಣ್ಣು ರಕ್ಷಣಾ ಕವಚ ಧರಿಸದೆ ಇರುವುದು ಪ್ರತಿದಿನ ಕಣ್ಣುಗಳು ಅನೇಕ ಹಾನಿಕಾರಕ ಅಂಶಗಳಿಗೆ ಒಡ್ಡಿಕೊಳ್ಳುತ್ತವೆ. ಅದರಲ್ಲೂ ಈಜುವವರು, ಆಟವಾಡುವವರು, ವೆಲ್ಡಿಂಗ್​ ಮಾಡುವವರು ಇನ್ನೂ ಹೆಚ್ಚಿನ ಎಚ್ಚರಿಕೆಯಿಂದ ಇರಬೇಕು. ಇಂಥದ್ದನ್ನೆಲ್ಲ ಮಾಡುವಾಗ ಕಣ್ಣಿಗೆ ರಕ್ಷಣಾ ಕವಚ ಹಾಕಿಕೊಳ್ಳಬೇಕು. ಸುರಕ್ಷತಾ ಗ್ಲಾಸ್​ಗಳು, ಗಾಗಲ್​ಗಳ ಬಳಕೆ ಮಾಡಬೇಕು.

ಕಣ್ಣುಗಳನ್ನು ಉಜ್ಜುವುದು ಇದು ಅನೇಕರು ಮಾಡುವ ತಪ್ಪು. ಕಣ್ಣು ತುರಿಸುತ್ತಿದೆ ಎಂದಾಕ್ಷಣ ಒಂದೇ ಸಮ ಉಜ್ಜುತ್ತಾರೆ. ಆದರೆ ಹೀಗೆ ಕಣ್ಣುಗಳನ್ನು ಉಜ್ಜುವುದು ತುಂಬ ಅಪಾಯಕಾರಿ. ಕಾರ್ನಿಯಾಕ್ಕೆ ಹಾನಿಯಾಗುತ್ತದೆ. ಅಷ್ಟೇ ಅಲ್ಲ, ಕಣ್ಣಿನ ಚರ್ಮದಡಿಯಲ್ಲಿ ಇರುವ ರಕ್ತನಾಳಗಳಿಗೂ ಇದು ಹಾನಿಯುಂಟುಮಾಡುತ್ತದೆ.

ಕಣ್ಣುಗಳಿಗೆ ವಿಶ್ರಾಂತಿ ಕೊಡದೆ ಇರುವುದು ಸದಾ ಮೊಬೈಲ್​, ಕಂಪ್ಯೂಟರ್​ ನೋಡುವವರು ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆಗಾಗ ಕಣ್ಣುಗಳಿಗೆ ವಿಶ್ರಾಂತಿ ಕೊಡಬೇಕು. ಇಲ್ಲದಿದ್ದರೆ ಕಣ್ಣುಗಳಲ್ಲಿ ನೀರಿನ ಅಂಶ ಕಡಿಮೆ ಆಗಿ, ತುರಿಕೆ ಬರುವುದು, ಉರಿಯುವ ಸಮಸ್ಯೆ ಎದುರಾಗುತ್ತದೆ. ದೃಷ್ಟಿಯೂ ಕೂಡ ಬ್ಲರ್​ ಆಗಲು ತೊಡಗುತ್ತದೆ.

ಇದನ್ನೂ ಓದಿ: Health Tips: ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ: ಇಲ್ಲಿದೆ ಮಾಹಿತಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್