Health Tips: ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ: ಇಲ್ಲಿದೆ ಮಾಹಿತಿ

ಖಾಲಿಹೊಟ್ಟೆಯಲ್ಲಿ ಅಥವಾ ಅತಿಯಾಗಿ ಹಸಿವೆಯಾದ ಸಂದರ್ಭದಲ್ಲಿ ಹಣ್ಣುಗಳನ್ನು ಸೇವಿಸಬೇಡಿ. ಕೆಲವು ಹಣ್ಣಗಳು ದೇಹಕ್ಕೆ ಎಷ್ಟು ಒಳಿತೋ ಖಾಲಿ ಹೊಟ್ಟೆಯಲ್ಲಿ ತಿಂದರೆ ಅಷ್ಟೇ ಅಪಾಯಕಾರಿ. ಹೀಗಾಗಿ ಹಸಿದ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.

Health Tips: ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಬೇಡಿ: ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
| Updated By: Pavitra Bhat Jigalemane

Updated on:Dec 21, 2021 | 10:20 AM

ಬೆಳಗ್ಗಿನ ಆಹಾರ ಯಾವಾಗಲೂ ದೇಹವನ್ನು ಆರೋಗ್ಯಯುತವಾಗಿಡುವಂತೆ ಮಾಡುತ್ತದೆ. ಹೀಗಾಗಿ ನೀವು ಸೇವಿಸುವ ಬೆಳಗ್ಗಿನ ಆಹಾರದ ಬಗ್ಗೆ ಹೆಚ್ಚು ಗಮನವಿರಲಿ. ಹೊಟ್ಟೆಯ ಸ್ವಾಸ್ಥ್ಯ ಕಾಪಾಡಿಕೊಂಡರೆ ದೇಹದ ಎಲ್ಲಾ ಚಯಾಪಚಯಗಳೂ ಸುಗಮವಾಗಿ ಸಾಗುತ್ತದೆ. ಆದ್ದರಿಂದ ಬೆಳಗ್ಗೆ ಆದಷ್ಟು ಬಿಸಿ ನೀರಿನ ಸೇವನೆ ಅಭ್ಯಾಸ ಮಾಡಿಕೊಳ್ಳಿ. ಕೆಲವರು ಬೆಳಗ್ಗೆ ಹಸಿದಾಗ ಹಣ್ಣುಗಳನ್ನ ತಿನ್ನಲು ಬಯಸುತ್ತಾರೆ. ಆದರೆ ಖಾಲಿಹೊಟ್ಟೆಯಲ್ಲಿ ಅಥವಾ ಅತಿಯಾಗಿ ಹಸಿವೆಯಾದ ಸಂದರ್ಭದಲ್ಲಿ ಹಣ್ಣುಗಳನ್ನು ಸೇವಿಸಬೇಡಿ. ಕೆಲವು ಹಣ್ಣಗಳು ದೇಹಕ್ಕೆ ಎಷ್ಟು ಒಳಿತೋ ಖಾಲಿ ಹೊಟ್ಟೆಯಲ್ಲಿ ತಿಂದರೆ ಅಷ್ಟೇ ಅಪಾಯಕಾರಿ. ಹೀಗಾಗಿ ಹಸಿದ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನುವುದರಿಂದ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾದರೆ ಹಸಿದಾಗ ಯಾವ ಹಣ್ಣುಗಳನ್ನು ಸೇವಿಸಬಾರದು ಎನ್ನುವುದು ನಿಮಗೆ ತಿಳಿದಿರಲಿ.

ಬಾಳೆಹಣ್ಣು ದೇಹಕ್ಕೆ ಯಥೇಚ್ಛವಾಗಿ ಬೇಕಾದ ಕಬ್ಬಿಣಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಬಾಳೆಹಣ್ಣು ಮುಂಚೂಣಿಯಲ್ಲಿ ಸಿಗುತ್ತದೆ. ಆದರೆ ಬಾಳೆಹಣ್ಣನ್ನು ಹಸಿದ ಹೊಟ್ಟೆಯಲ್ಲಿ ಸೇವಿಸಿದರೆ ಪಿತ್ತ ಉಂಟಾಗಬಹುದು. ಅಲ್ಲದೇ ಶ್ವಾಸಕೋಶದಲ್ಲಿ ಕಫ ಹೆಚ್ಚಾಗಬಹುದು. ಆದ್ದರಿಂದ ಹಸಿದ ಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆ ಉತ್ತಮವಲ್ಲ ಎನ್ನುತ್ತಾರೆ ತಜ್ಞರು.

ಮಾವಿನಹಣ್ಣು ಮಾವಿನಹಣ್ಣಿನಲ್ಲಿ ಅಧಿಕ ಸಕ್ಕರೆ ಅಂಶವಿರುತ್ತದೆ. ಹೀಗಾಗಿ ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ಮಾವಿನಹಣ್ಣನ್ನು ಸೇವಿಸುವುದರಿಂದ ರಕ್ತಕ್ಕೆ ಹೆಚ್ಚು ಸಕ್ಕರೆ ಪ್ರಮಾಣ ಸೇರಿ ಮಧುಮೇಹಕ್ಕೆ ಕಾರಣವಾಗುವ ಸಾದ್ಯತೆ ಇರುತ್ತದೆ. ಅಲ್ಲದೆ ಮಾವಿನಹಣ್ಣಿನಲ್ಲಿರುವ ನೀರಿನ ಅಂಶ ನಿಮಗೆ ಶೀತ, ನೆಗಡಿಯನ್ನು ತಂದೊಡ್ಡಬಹುದು. ಆದ್ದರಿಂದ ಬೆಳಗ್ಗಿನ ಖಾಲಿಹೊಟ್ಟೆಯಲ್ಲಿ ಮಾವಿನಹಣ್ಣನ್ನು ಸೇವಿಸುವ ಮುನ್ನ ಯೋಚಿಸಿ.

ದ್ರಾಕ್ಷಿ ದ್ರಾಕ್ಷಿ ಹಣ್ಣಿನಲ್ಲಿ ಸಿಟ್ರಿಕ್​ ಆಮ್ಲವಿರುತ್ತದೆ. ಇದು ನಿಮ್ಮ ದೇಹದ ಸ್ವಾಸ್ಥ್ಯ ಹದಗೆಡಲು ಕಾರಣವಾಗಬಹುದು. ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ  ಹಣ್ಣಿನ ಸೇವನೆಯಿಂದ ದೇಹದಲ್ಲಿ ಪಿತ್ತ ಉಂಟಾಗುತ್ತದೆ. ಜತೆಗೆ ನಿಮಗೆ ಗ್ಯಾಸ್ಟ್ರಿಕ್​ ಸಮಸ್ಯೆಯೂ ಕಾಡಬಹುದು. ಹೀಗಾಗಿ ಆದಷ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇರುವಾಗ ದ್ರಾಕ್ಷಿ ಸೇವನೆಯನ್ನು ನಿರ್ಭಂಧಿಸಿ.

ಪೇರಲೆ ಹಣ್ಣು ಸೀಬೆಹಣ್ಣು ಅಥವಾ ಪೇರಲೆ ಹಣ್ಣು ಬೆಳಗ್ಗಿನ  ಸೇವನೆಗೆ ಉತ್ತಮವಾದುದಲ್ಲ. ಖಾಲಿ ಹೊಟ್ಟೆಯಲ್ಲಿ ಪೇರಲೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸೂಕ್ಷ್ಮ ಪದರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜತೆಗೆ ಜೀರ್ಣಾಂಗ ವ್ಯವಸ್ಥೆ ಹದಗೆಡಬಹುದು. ಗಂಟಲಿನ ಸಮಸ್ಯೆ ಇರುವವರು ಪೇರಲೆ ಹಣ್ಣನ್ನು ಸೇವಿಸುವುದು ಒಳಿತು. ಆದರೆ ಬೆಳಗ್ಗಿನ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಒಳ್ಳೆಯದಲ್ಲ.

ಲಿಚ್ಚಿ ಹಣ್ಣು ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ಲಿಚ್ಚಿ ಹಣ್ಣಿನ ಸೇವನೆ ನಿಜಕ್ಕೂ ಅಪಾಯಕಾರಿ. ಇದು ನಿಮಗೆ ವಾಂತಿ, ವಾಕರಿಕೆ, ಹೊಟ್ಟೆನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಈ ಹಣ್ಣು ಮೆದುಳುಗೂ ಅಪಾಯಕಾರಿಯಾಗಿದೆ.  ಆದ್ದರಿಂದ ಲಚ್ಚಿ ಹಣ್ಣಗಳನ್ನು ಬೆಳಗ್ಗೆ ತಿನ್ನುವ ಅಭ್ಯಾಸವಿದ್ದರೆ ಅದರಿಂದ ದೂರವಿರಿ. ಅತಿಯಾದ ಲಿಚ್ಚಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಅಪಾಯ ಎನ್ನಲು 2019ರಲ್ಲಿ ಬಿಹಾರದಲ್ಲಿ 100ಕ್ಕೂ ಹೆಚ್ಚು ಮಕ್ಕಳು ಮೆದುಳು ಜ್ವರಕ್ಕೆ ತುತ್ತಾಗಿದ್ದರು. ಇದಕ್ಕೆ ಲಿಚ್ಚಿ ಹಣ್ಣಿನ ಸೇವನೆಯೇ ಮುಖ್ಯ ಕಾರಣ ಎಂದು ಕೆಲವು ದಿನಗಳ ನಂತರ ಸಂಶೋಧನೆಯಲ್ಲಿ ದೃಢಪಟ್ಟಿತ್ತು. ಆದ್ದರಿಂದ ಲಿಚ್ಚಿ ಹಣ್ಣು ತಿನ್ನುವ ಮುನ್ನ ಕೊಂಚ ಎಚ್ಚರವಹಿಸಿ.

ಇದನ್ನೂ ಓದಿ:

ಬಾಳೆಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇದನ್ನು ಬಳಸುವ ಕ್ರಮ ಹೀಗಿದೆ ನೋಡಿ

ಪೋಷಕರ ಅತೀ ಮೊಬೈಲ್ ಬಳಕೆ ಮಗುವಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಗೊತ್ತಾ?; ಅಧ್ಯಯನವೊಂದರ ವರದಿ ಇಲ್ಲಿದೆ

Published On - 9:59 am, Tue, 21 December 21