AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಳಿದ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಪರಿಹಾರ

Weight Loss: ಸ್ವಲ್ಪ ದೇಹದ ತೂಕ ಇಳಿಯಿತು ಎಂದರೆ ಮೊದಲ ಚಾಳಿ ಮುಂದುವರೆಯುತ್ತದೆ. ಹೀಗೆ ಮಾಡುವುದರಿಂದ ದೇಹದ ತೂಕ ಮತ್ತೆ ಹೆಚ್ಚಾಗುತ್ತದೆ.

ಇಳಿದ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಪರಿಹಾರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Dec 24, 2021 | 11:03 AM

ಹೊಟ್ಟೆ ತುಂಬಾ ತಿನ್ನಬೇಕು ಅನಿಸುತ್ತೆ. ಆದರೆ ದಪ್ಪ ಆಗುತ್ತೀವಿ ಅನ್ನೊ ಭಯ ಅಲ್ವಾ? ಹೊಟ್ಟೆ ತುಂಬಾ ತಿಂದ ತಕ್ಷಣ ದಪ್ಪ ಆಗಲ್ಲ. ಆದ್ರೆ ಯಾವ ಆಹಾರ ತಿನ್ನುತ್ತೀವಿ ಅನ್ನೋದು ಮುಖ್ಯ ಆಗುತ್ತೆ. ವಿಪರೀತ ದಪ್ಪ ಸೌಂದರ್ಯವನ್ನು ಕಡಿಮೆ ಮಾಡುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಸಣ್ಣ ಆಗಲು ನಾನಾ ರೀತಿಯ ಸರ್ಕಸ್ ನಡೆಸುತ್ತಾರೆ. ಸ್ವಲ್ಪ ದೇಹದ ತೂಕ ಇಳಿಯಿತು ಎಂದರೆ ಮೊದಲ ಚಾಳಿ ಮುಂದುವರೆಯುತ್ತದೆ. ಹೀಗೆ ಮಾಡುವುದರಿಂದ ದೇಹದ ತೂಕ ಮತ್ತೆ ಹೆಚ್ಚಾಗುತ್ತದೆ. ಹಾಗಾದರೆ ಇಳಿಸಿದ ದೇಹದ ತೂಕ ಮತ್ತೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ? ಚಿಂತೆ ಬಿಡಿ. ಅದಕ್ಕೂ ಪರಿಹಾರವಿದೆ.

* ನಿರಂತರ ವ್ಯಾಯಾಮ ಹೇಗೋ ಕಷ್ಟಪಟ್ಟು ದೇಹದ ತೂಕ ಕಡಿಮೆಯಾಗಿರುತ್ತದೆ. ತೂಕ ಕಡಿಮೆಯಾಗುತ್ತಿದ್ದಂತೆ ಮತ್ತೆ ಹಳೇ ಅಭ್ಯಾಸ ಶುರುವಾಗುತ್ತದೆ. ಹೀಗೆ ಮಾಡುವುದು ಸರಿಯಲ್ಲ. ಹೀಗಾಗಿ ಪ್ರತಿದಿನ ವ್ಯಾಯಾಮ ಮಾಡಬೇಕು. ಬೆಳಿಗ್ಗೆ ಅಥವಾ ಸಂಜೆ ಕನಿಷ್ಠ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ಕಾಲ ವ್ಯಾಯಾಮ ಮಾಡಬೇಕು. ದೇಹದ ತೂಕ ಇಳಿಸಲು ಇರುವ ವ್ಯಾಯಾಮವನ್ನೇ ಮಾಡಿದರೆ ಸೂಕ್ತ.

* ಉತ್ತಮ ಆಹಾರ ಸೇವಿಸಿ ದೇಹದ ತೂಕ ಇಳಿಸುವವರು ಮತ್ತು ಇಳಿಸಿಕೊಂಡ ದೇಹದ ತೂಕವನ್ನು ಮೇಂಟೇನ್ ಮಾಡುವವರು ಉತ್ತಮ ಆಹಾರ ಸೇವಿಸಬೇಕು. ಜಂಕ್ ಫುಡ್ಗಳಿಂದ ಆದಷ್ಟೂ ದೂರವಿರಬೇಕು. ಊಟದ ತಟ್ಟೆಯಲ್ಲಿ ತರಕಾರಿ ಮತ್ತು ಹಣ್ಣಿನ ಪ್ರಮಾಣ ಜಾಸ್ತಿ ಇರಬೇಕು. ಮದ್ಯ ಮದ್ಯ ಹಸಿವಾದಗಲೆಲ್ಲ ಹಣ್ಣು ಅಥವಾ ಹಣ್ಣಿನ ರಸ ಸೇವಿಸಿ.

* ಹೆಚ್ಚು ನೀರು ಕುಡಿಯಿರಿ ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ನೀರು ದೇಹಕ್ಕೆ ಅಗತ್ಯವಿದೆ. ಇನ್ನು ಡಯೇಟ್ ಮಾಡುವವರು ನೀರನ್ನ ಹೆಚ್ಚು ಕುಡಿಯಬೇಕು. ಊಟದ ಮೊದಲು ನೀರು ಕುಡಿದರೆ ಹೆಚ್ಚು ಊಟ ಸೇವಿಸುವ ಅಗತ್ಯವಿರಲ್ಲ. ಹೀಗಾಗಿ ಹಸಿವಾದಾಗಲೆಲ್ಲ ನೀರು ಕುಡಿಯುವ ಅಭ್ಯಾಸ ನಿರಂತರವಾಗಿರಬೇಕು.

* ಬೆಳಿಗ್ಗೆಯ ತಿಂಡಿ ಬಿಡಬಾರದು ಬೆಳಿಗ್ಗೆ ತಿಂಡಿ ಬಿಡುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ ಅಂತ ಹಲವರು ಅಂದುಕೊಂಡಿದ್ದಾರೆ. ಆದರೆ ಅದು ತಪ್ಪು. ಬೆಳಿಗ್ಗೆ ತಿಂಡಿಯನ್ನು ಸ್ಕಿಪ್ ಮಾಡಬಾರದು. ರಾತ್ರಿ ಊಟ ಹಣ್ಣು ಅಥವಾ ತರಕಾರಿಯಿಂದ ಕೂಡಿರಲಿ. ಉಪಹಾರ ಸೇವಿಸದೆ ಇದ್ದಾಗ ದೇಹಕ್ಕೆ ಸುಸ್ತಾಗುತ್ತದೆ. ಕೆಲಸ ಮಾಡಲು ಮನಸ್ಸು ಇರಲ್ಲ. ಅಲ್ಲದೇ ಗ್ಯಾಸ್ಟ್ರಿಕ್ಗೆ ಕಾರಣವಾಗುತ್ತದೆ.

ಇದನ್ನೂ ಓದಿ

Beauty Tips: ಮಾಸ್ಕ್ ಧರಿಸಿದಾಗಲೂ ಲಿಪ್​ ಸ್ಟಿಕ್​ ಹೆಚ್ಚು ಕಾಲ ಉಳಿಯಲು ಹೀಗೆ ಮಾಡಿ

Relationship Tips: ನಿಮ್ಮ ಸಂಗಾತಿಯೊಂದಿಗೆ ಆಗಾಗ ಮನಸ್ತಾಪವಾಗುತ್ತಿದೆಯೇ? ಇಲ್ಲಿದೆ ಅದಕ್ಕೆ ಪರಿಹಾರ

Published On - 8:00 am, Fri, 24 December 21

ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಜಿಂಕೆಯನ್ನ ಬೇಟೆಯಾಡಿ ಬಾಯಲ್ಲಿ ಹಿಡಿದ ಹುಲಿಯ ಅಪರೂಪದ ದೃಶ್ಯ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಅಖ್ನೂರ್​ ಬಳಿ ಬರಿದಾದ ಚೆನಾಬ್ ನದಿ, ಖಾಲಿ ನದಿಯಲ್ಲಿ ಸ್ಥಳೀಯರ ಓಡಾಟ
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಹರೀಶ್ ಪೂಂಜಾ ಸೀರಿಯಲ್ ಅಫೆಂಡರ್ ಹಾಗೆ ಗೋಚರಿಸಸುತ್ತಾರೆ: ದಿನೇಶ್ ಗುಂಡೂರಾವ್
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಭದ್ರತಾ ಸಿಬ್ಬಂದಿ ಮೇಲೆ ಕಾರು ಹತ್ತಿಸಿದ ಚಾಲಕ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಪೆಟ್ರೋಲ್​ ಹಾಕುವ ವಿಚಾರಕ್ಕೆ ಗಲಾಟೆ: ಅಟ್ಟಾಡಿಸಿ ಕೆಲಸಗಾರರ ಮೇಲೆ ಹಲ್ಲೆ
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಸದಾನಂದಗೌಡರು ಬುಲ್ಡೋಜರ್ ಬಳಸುವ ಬಗ್ಗೆ ಹೇಳಿದ್ದು ಗೊತ್ತಿಲ್ಲ: ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಕರ್ನಾಟಕದಿಂದ ಎಷ್ಟು ಪಾಕಿಸ್ತಾನೀಯರು ವಾಪಸ್? ಮಾಹಿತಿ ನೀಡಿದ ಪರಮೇಶ್ವರ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಶಿವಾನಂದ ರಾಜೀನಾಮೆ ಸಲ್ಲಿಸಿರುವುದು ಕೇವಲ ನಾಟಕ ಮಾತ್ರ: ವಿಶ್ವನಾಥ್
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಡಿಎಂಕೆ ಸಂಸದ ರಾಜಾ ಭಾಷಣ ಮಾಡುವಾಗ ಬಿದ್ದ ಫೆಡ್​ಲೈಟ್ ಕಂಬ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ
ಉಗ್ರರಿಗೆ ಸಹಾಯ ಮಾಡಿದ್ದ ಇಮ್ತಿಯಾಜ್ ನದಿಗೆ ಹಾರಿ ಪ್ರಾಣ ಬಿಟ್ಟ