Relationship Tips: ನಿಮ್ಮ ಸಂಗಾತಿಯೊಂದಿಗೆ ಆಗಾಗ ಮನಸ್ತಾಪವಾಗುತ್ತಿದೆಯೇ? ಇಲ್ಲಿದೆ ಅದಕ್ಕೆ ಪರಿಹಾರ
ಸಂಬಂಧಗಳು ಸಣ್ಣಪುಟ್ಟ ವಿವಾದ ಮತ್ತು ತಪ್ಪು ತಿಳುವಳಿಕೆಯಿಂದ ಹಾಳಾಗಬಹುದು. ಆದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಈ ಸರಳ ವಿಧಾನವನ್ನು ಅನುಸರಿಸಿ. ಇದು ನಿಮ್ಮ ಸಂಗಾತಿಯೊಂದಿಗೆ ನಿಮ್ಮನ್ನು ಖುಷಿಯಾಗಿರಿಸುತ್ತದೆ.
Updated on: Dec 23, 2021 | 7:05 AM

adopt these inspiration tips to maintain the good relationship with partner

ನಿರ್ಲಕ್ಷಿಸುವ ಬದಲು ಕಾಳಜಿ ವಹಿಸಿ. ನಿಮ್ಮ ಸಂಗಾತಿಗೆ ಎದುರಾಗುವ ಸಣ್ಣಪುಟ್ಟ ಸಮಸ್ಯೆಯಾಗಿರಬಹುದು ಅಥವಾ ದೊಡ್ಡ ಸವಾಲಾಗಿರಬಹುದು. ಅದರಿಂದ ಹೊರಬರಲು ಸಹಾಯ ಮಾಡಿ. ನಿಮ್ಮ ಪ್ರೀತಿಪಾತ್ರರನ್ನು ಸದಾ ಖುಷಿಯಾಗಿಟ್ಟುಕೊಳ್ಳುವ ಪ್ರಯತ್ನ ಮಾಡಿ.

do not discuss with these things with your husband

ಒಟ್ಟಿಗೆ ಇರಲು ಸಾಧ್ಯವಾಗದಿದ್ದಾಗ ಸಂದೇಶ ಕಳುಹಿಸುವ ಅಥವಾ ಕರೆ ಮಾಡಿ ಮಾತನಾಡುವ ಮೂಲಕ ಸದಾ ನಿಮ್ಮ ಇರುವಿಕೆಯನ್ನು ನಿಮ್ಮ ಸಂಗಾತಿಗೆ ಗೊತ್ತಾಗುವಂತೆ ಮಾಡಿ. ಸಮಯ ಸಿಕ್ಕಾಗೆಲ್ಲಾ ನಿಮ್ಮ ದಿನನಿತ್ಯದ ಆಗು ಹೋಗುಗಳ ಬಗ್ಗೆ ಮಾಹಿತಿ ನೀಡುತ್ತಿರಿ ಮತ್ತು ಅವರ ಬಗ್ಗೆಯೂ ವಿಚಾರಿಸಿ.

ಸಂಬಂಧಗಳಲ್ಲಿ ಗುಟ್ಟು ಮಾಡುವುದು ಅಥವಾ ಸುಳ್ಳು ಹೇಳುವುದು ಒಳ್ಳೆಯದಲ್ಲ. ನೀವು ಹಿಂದೆ ಯಾವುದೋ ಕಾರಣಕ್ಕೆ ಹೇಳಿದ ಸುಳ್ಳು ಕೊನೆಗೆ ನಿಮ್ಮ ಸಂಬಂಧವನ್ನು ಮುರಿಯುವ ಹಂತಕ್ಕೆ ಬರಬಹುದು. ಹೀಗಾಗಿ ಸಂಗಾತಿಯೊಂದಿಗೆ ತೆರೆದ ಪುಸ್ತಕವಾಗಿರುವುದಕ್ಕೆ ಪ್ರಯತ್ನಿಸಿ.



















