Acidity: ಹಿಂಸೆ ನೀಡುವ ಆಸಿಡಿಟಿಯಿಂದ ಪಾರಾಗಲು ಈ ಕ್ರಮಗಳನ್ನು ಪಾಲಿಸಿ
ಆಮ್ಲೀಯತೆ ಎಂದು ಕರೆಯಲ್ಪಡುವ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ದ್ರವವು ನಿಮ್ಮ ಹೊಟ್ಟೆಯಲ್ಲಿ ಉರಿಯೂತ, ವಾಕರಿಕೆ, ವಾಂತಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ.
ಪ್ರತಿದಿನ ಆಹಾರ ಸೇವಿಸಿದ ಮೇಲೆ ಹೊಟ್ಟೆಯಲ್ಲಿ ತೊಂದರೆಯಾಗುತ್ತಿದ್ದರೆ ನಿಮಗೆ ಆಸಿಡಿಟಿ ಸಮಸ್ಯೆಯಾಗಿದೆ ಎಂದರ್ಥ. ಹೀಗಾಗಿ ಆಹಾರ ಸೇವಿಸುವ ಮುನ್ನ ಎಚ್ಚರವಿರಲಿ. ನಿಮ್ಮ ದೇಹಕ್ಕೆ ಒಗ್ಗುವ ಆಸಿಡಿ ಸಮಸ್ಯೆಯಾಗದ ರೀತಿಯ ಆಹಾರ ಸೇವಿಸಿ. ಆಮ್ಲೀಯತೆ ಎಂದು ಕರೆಯಲ್ಪಡುವ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ದ್ರವವು ನಿಮ್ಮ ಹೊಟ್ಟೆಯಲ್ಲಿ ಉರಿಯೂತ, ವಾಕರಿಕೆ, ವಾಂತಿಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಅನ್ನನಾಳದ ಸ್ಪಿಂಕ್ಟರ್ ಗ್ಯಾಸ್ಟ್ರಿಕ್ ದ್ರವವನ್ನು ತಡೆಯುತ್ತದೆ. ಅದರ ಹರಿವು ಹೆಚ್ಚಾದರೆ ಅಥವಾ ಆಸಿಡ್ ರಿಫ್ಲಕ್ಸ್ ಆದರೆ ಅನ್ನನಾಳ ತೆರೆದುಕೊಳ್ಳುತ್ತದೆ. ಆಗ ಖಾಲಿ ಇರುವ ಹೊಟ್ಟೆಯಲ್ಲಿ ಗಾಳಿ ತುಂಬಿಕೊಂಡು ಆಹಾರ ಸೇವಿಸಿದಾಗ ನೋವು ಕಾಣಿಸಿಕೊಳ್ಳುತ್ತದೆ.
ಸಾಮಾನ್ಯವಾಗಿ ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿ ಸಮಸ್ಯೆಯಾದಾಗ ವಾಕರಿಕೆ, ವಾಂತಿ, ಹೊಟ್ಟೆನೋವು, ಎದೆಉರಿ, ತಲೆನೋವಿನಂತಹ ಅಸ್ವಸ್ಥತೆ ಕಾಣಿಸಿಕೊಳ್ಳುತ್ತದೆ. ಆಸಿಡಿಯನ್ನು ಆಹಾರಕ್ರಮದಲ್ಲೇ ನಿಯಂತ್ರಣಕ್ಕೆ ತಂದುಕೊಳ್ಳಬಹುದು. ಅಥವಾ ಈ ಕ್ರಮಗಳನ್ನು ಅನುಸರಿಸಿದರೆ ನಿಮ್ಮ ಆಸಿಡಿ ಸಮಸ್ಯೆಗೆ ಪರಿಹಾರ ದೊರೆಯಲಿದೆ.
ದೇಹದ ತೂಕದ ಬಗ್ಗೆ ಎಚ್ಚರವಿರಲಿ ದೇಹದ ತೂಕದ ನಿರ್ವಹಣೆಯಿಂದ ನಿಮ್ಮ ಹೃದಯ, ಮೂಳೆಗಳನ್ನೂ ಕೂಡ ಆರೋಗ್ಯಯುತವಾಗಿರುತ್ತದೆ. ಆದ್ದರಿಂದ ಸರಿಯಾದ ದೇಹ ತೂಕ ಕಾಪಾಡಿಕೊಂಡರೆ ಆಸಿಡಿಟಿ ಅಥವಾ ಇತರ ಕಾಯಿಲೆಗಳಿಂದಲೂ ದೂರವಿರಬಹುದು.
ಆಹಾರ ಪದ್ಧತಿ ಸರಿಯಾಗಿರಲಿ ನೀವು ಸೇವಿಸುವ ಜಂಕ್ ಫುಡ್ ಹಾಗೂ ಅನಾರೋಗ್ಯಕರ ಆಹಾರವು ಆಸಿಡಿಟಿ ರಿಫ್ಲೆಕ್ಸ್ಗೆ ಕಾರಣವಾಗುತ್ತದೆ. ಜತೆಗೆ ಆತುರದಿಂದ ಊಟಮಾಬೇಡಿ. ಅದೇ ರಿತಿ ಊಟ ಮಾಡಿದ ತಕ್ಷಣ ಮಲಗಬೇಡಿ ಮತ್ತು ದೇಹಕ್ಕೆ ಶ್ರಮವಾಗುವ ಯಾವುದೇ ಕೆಲಸಗಳನ್ನು ಮಾಡಬೇಡಿ.
ಪಾನೀಯಗಳೆಡೆಗೆ ಗಮನವಿರಲಿ ನೀವು ಸೇವಿಸುವ ಪಾನೀಯಗಳೂ ಕೂಡ ಆಸಿಡಿಟಿ ರಿಫ್ಲೆಕ್ಸ್ ಗೆ ಕಾರಣವಾಗುತ್ತದೆ. ಹೀಗಾಗಿ ಆಲ್ಕೋಹಾಲ್ ಅಥವಾ ಕಾಫಿ ಸೇವನೆಯ ವೇಳೆ ಎಚ್ಚರವಹಿಸಿ. ಹಸಿದ ಹೊಟ್ಟೆಯಲ್ಲಿ ಎಂದಿಗೂ ಕಾಫಿಯನ್ನು ಸೇವಿಸಬೇಡಿ ಇದು ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಉಂಟು ಮಾಡಬಹುದು.
ಧೂಮಪಾನದಿಂದ ದೂರವಿರಿ ಕ್ಯಾನ್ಸರ್ಗೆ ಕಾರಣವಾಗುವ ಸಿಗರೇಟ್ನಂತಹ ಧೂಮಪಾನ ಆಸಿಡಿಟಿ ಸಮಸ್ಯೆಯನ್ನು ತಂದೊಡ್ಡುತ್ತದೆ. ಅಲ್ಲದೆ ನಿಮ್ಮ ಅನ್ನನಾಳದಲ್ಲಿ ನಿಕೋಟಿನ್ ಅಂಶಗಳು ಸೇರಿ ಆಸಿಡಿಟಿ ರಿಫ್ಲೆಕ್ಸ್ ಗೆ ಕಾರಣವಾಗುತ್ತದೆ.
ನಿಯಮಿತ ಔಷಧಗಳನ್ನು ಪರೀಕ್ಷಿಸಿಕೊಳ್ಳಿ ನೀವು ಸೇವಿಸುವ ಮಾತ್ರೆ ಹಾಗೂ ಇನ್ನಿತರ ಔಷಧಗಳು ನಿಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಕಾರಣವಾಗಬಹುದು. ಸಾಮಾನ್ಯವಾಗಿ ಮೂಳೆಯ ಸಾಂದ್ರತೆಯನ್ನು ಹೆಚ್ಚಿಸುವ ಕೆಲವು ಮಾತ್ರೆಗಳು ಆಸಿಡಿಯನ್ನು ಉಂಟುಮಾಡುತ್ತವೆ ಎಂದು ಸಂಶೋಧನೆಯಲ್ಲಿಯೂ ಸಾಬೀತಾಗಿದೆ. ಹೀಗಾಗಿ ಕೆಲವೊಮ್ಮೆ ವೈದ್ಯರು ನಿಮಗೆ ಊಟದ ಮೊದಲು ತೆಗೆದುಕೊಳ್ಳುವಂತೆ ಆಸಿಡಿ ಮಾತ್ರೆಗಳನ್ನು ನೀಡುತ್ತಾರೆ.
ಇದನ್ನೂ ಓದಿ:
ಇಳಿದ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿದೆ ಪರಿಹಾರ
Published On - 3:19 pm, Fri, 24 December 21