ಡಯಟ್​ ನೆಪದಲ್ಲಿ ಅನ್ನ ಸೇವಿಸುವುದನ್ನು ಕಡಿಮೆ ಮಾಡಿದ್ದೀರಾ? ಇಂದೇ ಈ ತಪ್ಪು ಕಲ್ಪನೆಯನ್ನು ದೂರ ಮಾಡಿ

Benefits of Eating Rice: ಅನ್ನದ ಸೇವನೆಯ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಅನ್ನ ನಿಜವಾಗಿಯೂ ಆರೋಗ್ಯಕ್ಕೆ ಹಾನಿಕಾರಕವೇ? ಅಥವಾ ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಡಯಟ್​ ನೆಪದಲ್ಲಿ ಅನ್ನ ಸೇವಿಸುವುದನ್ನು ಕಡಿಮೆ ಮಾಡಿದ್ದೀರಾ? ಇಂದೇ ಈ ತಪ್ಪು ಕಲ್ಪನೆಯನ್ನು ದೂರ ಮಾಡಿ
ಸಾಂಕೇತಿಕ ಚಿತ್ರ
Follow us
TV9 Web
| Updated By: preethi shettigar

Updated on:Dec 25, 2021 | 8:10 AM

ಜನರು ಹೆಚ್ಚಾಗಿ ಅನ್ನವನ್ನು ತಿನ್ನಲು ಇಷ್ಟಪಡುತ್ತಾರೆ. ಹೀಗಾಗಿ ಪ್ರತಿನಿತ್ಯ ಅನ್ನವನ್ನು (Rice) ಹೆಚ್ಚು ಸೇವಿಸುತ್ತಾರೆ. ಅನ್ನವನ್ನು ವಿವಿಧ ಪದಾರ್ಥಗಳೊಂದಿಗೆ ತಿನ್ನಲಾಗುತ್ತದೆ. ಇನ್ನೂ ಅನ್ನದಿಂದ ಅನೇಕ ವಿಶೇಷ ತಿನಿಸುಗಳನ್ನು ಕೂಡ ತಯಾರಿಸಲಾಗುತ್ತದೆ. ಡಯಟ್ ಮಾಡುವವರು ಸಾಮಾನ್ಯವಾಗಿ ಅನ್ನ ತಿನ್ನುವುದನ್ನು ಕಡಿಮೆ ಮಾಡುತ್ತಾರೆ. ಆದರೆ ಅನ್ನವನ್ನು ತಿನ್ನುವುದು ಸಹ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಅನ್ನದ ಬಗ್ಗೆ ಜನರಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಇಂತಹ ಪರಿಸ್ಥಿತಿಯಲ್ಲಿ, ಅನ್ನ ನಿಜವಾಗಿಯೂ ಆರೋಗ್ಯಕ್ಕೆ ಹಾನಿಕಾರಕವೇ? ಅಥವಾ ಅನ್ನ ತಿನ್ನುವುದರಿಂದ ತೂಕ ಹೆಚ್ಚುತ್ತದೆಯೇ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರ್ಬೋಹೈಡ್ರೇಟ್​ಗಳಿಂದ ಸಮೃದ್ಧವಾಗಿದೆ ಅಕ್ಕಿಯು ಉತ್ತಮ ಆಹಾರ ಪದಾರ್ಥವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೇರಳವಾಗಿ ಕಂಡುಬರುತ್ತವೆ. ಅನ್ನದ ಸೇವನೆಯಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಈ ಶಕ್ತಿ ದೇಹದ ಪ್ರತಿಯೊಂದು ಭಾಗಕ್ಕೂ ಬೇಕು.

ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮಧುಮೇಹ ಇರುವ ರೋಗಿಗಳು ಯಾವಾಗಲೂ ಅನ್ನದಿಂದ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜನರು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ಅಕ್ಕಿಯ ಮೋಡ್ ಅನ್ನು ತೆಗೆದುಹಾಕಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದಲ್ಲದೇ ಅನ್ನಕ್ಕೆ ತುಪ್ಪ, ಮೊಸರು, ಬೀನ್ಸ್ ಇತ್ಯಾದಿ ತರಕಾರಿಗಳನ್ನು ಸೇರಿಸಿ ತಿಂದರೆ ದೇಹದಲ್ಲಿನ ಸಕ್ಕರೆ ಮಟ್ಟ ಕಡಿಮೆ.

ಸುಲಭವಾಗಿ ಜೀರ್ಣವಾಗುತ್ತದೆ ಅನ್ನ ತಿನ್ನಲು ತುಂಬಾ ರುಚಿಯಾಗಿರುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಅನ್ನ ಸೇವನೆಯಿಂದ ಒಳ್ಳೆಯ ನಿದ್ದೆ ಬರುತ್ತದೆ ಎಂದು ಹೇಳಲಾಗುತ್ತದೆ. ಪ್ರಾಚೀನ ಕಾಲದಲ್ಲಿ, ಅಕ್ಕಿಯನ್ನು ಔಷಧಿಯಾಗಿ ಬಳಸಲಾಗುತ್ತಿತ್ತು. ಇಂದಿಗೂ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಸಂದರ್ಭದಲ್ಲಿ ಅನ್ನವನ್ನು ಸೇವಿಸಲಾಗುತ್ತದೆ.

ಚರ್ಮದ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಚರ್ಮಕ್ಕೆ ಸಂಬಂಧಿಸಿದ ಅನೇಕ ಕಾಯಿಲೆಗಳನ್ನು ತೊಡೆದುಹಾಕಲು ಅಕ್ಕಿ ಪರಿಣಾಮಕಾರಿಯಾಗಿದೆ. ಇದು ಸೌಂದರ್ಯವನ್ನು ತರುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕವು ಮುಖದ ಸುಕ್ಕುಗಳನ್ನು ನಿವಾರಿಸುತ್ತದೆ ಮತ್ತು ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಅಕ್ಕಿ ಕೂದಲನ್ನು ಬಲಗೊಳಿಸುತ್ತದೆ ಕೂದಲನ್ನು ಉದ್ದವಾಗಿ, ದಪ್ಪವಾಗಿ ಮತ್ತು ಬಲವಾಗಿ ಮಾಡಲು ಅಕ್ಕಿಯು ವಿಶೇಷ ಕೊಡುಗೆ ನೀಡುತ್ತದೆ. ನೀವು ಉದ್ದವಾದ, ದಪ್ಪ ಕೂದಲು ಬಯಸಿದರೆ ಆಹಾರ ಕ್ರಮದಲ್ಲಿ ಅನ್ನವನ್ನು ಸೇರಿಸಿಕೊಳ್ಳಬಹುದು.

ಸೋಡಿಯಂ ಪ್ರಮಾಣ ಅಕ್ಕಿಯಲ್ಲಿನ ಸೋಡಿಯಂ ಪ್ರಮಾಣ ಅತ್ಯಲ್ಪ ಎಂದು ಹೇಳಲಾಗುತ್ತದೆ. ಇದರಿಂದಾಗಿ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ರೋಗಿಗಳು ಇದನ್ನು ಪ್ರತಿದಿನ ಸೇವಿಸಬಹುದು. ಆದರೆ ಈ ಬಗ್ಗೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನೂ ಓದಿ: Brinjal Benefits: ಬದನೆಕಾಯಿ ಸೇವಿಸುವ ಅಭ್ಯಾಸ ಇದೆಯೇ? ಆರೋಗ್ಯಕರ ಬದಲಾವಣೆಯ ಬಗ್ಗೆ ಒಮ್ಮೆ ಗಮನಿಸಿ

ಬಾಳೆಹಣ್ಣಿನ ಸಿಪ್ಪೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ? ಇದನ್ನು ಬಳಸುವ ಕ್ರಮ ಹೀಗಿದೆ ನೋಡಿ

Published On - 8:00 am, Sat, 25 December 21