Relationship Tips: ಸಂಗಾತಿಯೊಂದಿಗಿನ ಜಗಳ ಉತ್ತಮ; ಆದರೆ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ

ಸಂಗಾತಿಯೊಂದಿಗೆ ಜಗಳವನ್ನು  ಮಾಡಿದಾಗ ಅದನ್ನು ಅಲ್ಲಿಯೇ ಬಿಟ್ಟು ಬಿಡಿ ಇನ್ಯಾವುದೋ ಸಂದರ್ಭದಲ್ಲಿ ಅದನ್ನು ಪ್ರಸ್ತಾಪಿಸಿ ಮನಸ್ತಾಪ ಉಂಟಾಗುವಂತೆ ಮಾಡಿಕೊಳ್ಳಬೇಡಿ.

Relationship Tips: ಸಂಗಾತಿಯೊಂದಿಗಿನ ಜಗಳ ಉತ್ತಮ; ಆದರೆ ಈ ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಿ
ಸಾಂಕೇತಿಕ ಚಿತ್ರ
Follow us
|

Updated on:Jan 30, 2022 | 10:46 AM

ಸಂಬಂಧಗಳಲ್ಲಿ (Relationship) ಜಗಳ, ಮನಸ್ತಾಪ, ಮುನಿಸು ಎಲ್ಲವೂ ಸಹಜ. ಆದರೆ ಅದನ್ನು ಯಾವ ರೀತಿ ನಿರ್ವಹಣೆ ಮಾಡುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ತಾಳ್ಮೆಯಿದ್ದಷ್ಟೂ ಸಂಬಂಧಗಳು ಗಟ್ಟಿಯಾಗಿರುತ್ತದೆ. ಯಾವುದೇ ಮಾತು ಜಗಳಕ್ಕೆ ತಿರುಗುತ್ತಿದೆ ಎಂದರೆ ಅದನ್ನು ಅಲ್ಲಿಗೆ ನಿಲ್ಲಿಸಿ ಪ್ರೀತಿಯ ವಾತಾವರಣವನ್ನು ನಿರ್ಮಾಣ ಮಾಡುವಷ್ಟು ಚಾಕಚಕ್ಯತೆ ಸಂಬಂಧದಲ್ಲಿ ಇರಬೇಕು. ಸಂಗಾತಿಯೊಂದಿಗೆ ಜಗಳ ಆಡುವುದು ಸಾಮಾನ್ಯ. ಕೆಲವೊಮ್ಮೆ ಚಿಕ್ಕಪುಟ್ಟ ವಿಷಯಗಳಲ್ಲೂ ನಿಮ್ಮ ಸಂಗಾಂತಿ (Partner) ಮುನಿಸಿಕೊಳ್ಳಬಹುದು. ಆದರೆ ಅದು ಹುಸಿ ಮುನಿಸಿರಬಹುದು. ಆದ್ದರಿಂದ ಮಾತು ಮುಂದುವರೆಸಿ ಮುನಿಸನ್ನು ತಿಳಿಗೊಳಿಸುವುದು ನಿಮಗೆ ತಿಳಿದಿರಬೇಕು. ಸಂಗಾತಿಯೊಂದಿಗೆ ಜಗಳ ಒಳ್ಳೆಯದು. ಇದರಿಂದ ಅವರ ಭಾವನೆಗಳು, ಅವರ ಉದ್ವೇಗ, ನೋವು, ಒತ್ತಡ ಎಲ್ಲವೂ ಹೊರಬರುತ್ತದೆ. ನೀವು ಅವರನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಅನುಕೂಲವೂ ಆಗುತ್ತದೆ. ಆದರೆ ಜಗಳವಾದಾಗ(Fight) ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎನ್ನುವುದು ಮುಖ್ಯವಾಗಿರುತ್ತದೆ. ನೆನಪಿಡಿ ಕೋಪದಲ್ಲಿ ಮೌನವಾಗಿರುವುದು ಅಥವಾ ಅತಿಯಾಗಿ ರಿಯಾಕ್ಟ್​ ಮಾಡುವುದು ಎರಡೂ ಒಳಿತಲ್ಲ. ಆದ್ದರಿಂದ ನೀವು ನಿಮ್ಮ ಸಂಗಾತಿಯೊಂದಿಗೆ ಜಗಳವಾಡಿ ಆದರೆ ಈ ಅಂಶಗಳನ್ನು ನೆನಪಿಡಿ ಆಗ ಸಂಬಂದದಲ್ಲಿ ಜಗಳವೂ ಸಿಹಿಯಾಗಿಯೇ ಕಾಣುತ್ತದೆ.

ಜಗಳವನ್ನು ಮುಂದುವರೆಸಬೇಡಿ ಕೆಲವೊಮ್ಮೆ ಸಂಗಾತಿಯಿಂದಾದ ಸಣ್ಣ ನೋವು ಕೂಡ ಸಂಬಂಧದಲ್ಲಿ ದೊಡ್ಡ ಹೊಡೆತ ನೀಡಬಹುದು.ಆಗ ಜಗಳವಾಗುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ನಿಮ್ಮ ಭಾವನೆಗಳನ್ನು ಹೇಳಿಬಿಡಿ. ಇದರಿಂದ ನೀವು ಅಂದಕೊಂಡಿರುವುದು, ನಿಮ್ಮ ಭಾವನೆಗಳು ಅವರಿಗೂ ಅರ್ಥವಾಗುತ್ತದೆ.  ನೆನಪಿಡಿ ಯಾವುದೇ ಜಗಳವನ್ನು ಮರುದಿನಕ್ಕೆ ಮುಂದುವರೆಸಬೇಡಿ. ಇದು ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ನೀಡಬಹುದು. ಎಂತಹ ಸಂಗಾತಿಯನ್ನು ಆಯ್ಕೆಬಿಟ್ಟೆ ಎನ್ನುವ ನೋವು ಅವರಲ್ಲಿ ಕಾಣದಂತೆ ಎಚ್ಚರವಹಿಸಿ. ಸಂಗಾತಿಯೊಂದಿಗೆ ಜಗಳವನ್ನು  ಮಾಡಿದಾಗ ಅದನ್ನು ಅಲ್ಲಿಯೇ ಬಿಟ್ಟು ಬಿಡಿ ಇನ್ಯಾವುದೋ ಸಂದರ್ಭದಲ್ಲಿ ಅದನ್ನು ಪ್ರಸ್ತಾಪಿಸಿ ಮನಸ್ತಾಪ ಉಂಟಾಗುವಂತೆ ಮಾಡಿಕೊಳ್ಳಬೇಡಿ.

ಮೌನವಾಗಿರಬೇಡಿ ಮೌನ ಸಾವಿರ ಅರ್ಥವನ್ನು ನೀಡುತ್ತದೆ. ನೀವು ಮಾತನಾಡಿದರೆ ಮಾತ್ರ ನಿಮ್ಮೊಳಗಿನ ನೋವು ಎದುರಿಗಿರುವವರಿಗೆ ಅರ್ಥವಾಗಲು ಸಾಧ್ಯ. ಹೀಗಾಗಿ ಸಂಗಾತಿಯೊಂದಿಗೆ ಜಗಳವಾದಾಗ  ಮುನಿಸಿಕೊಂಡು ಮೌನವಾಗಿರಬೇಡಿ. ಜೀವನ ಒಂದು ದಿನದ್ದಲ್ಲ, ಹೀಗಾಗಿ ಜಗಳವಾಡಿದ ಮೇಲೆ ಮುನಿಸಿಕೊಂಡು ಕೂರುವ ಬದಲು ಸಮಸ್ಯೆಯನ್ನು ಬಿಡಿಸಿ ಮಾತನಾಡಿ. ನೆನಪಿಡಿ ಜಗಳದ ನಂತರ ನಿಮ್ಮ ಮೌನ ಸಂಗಾತಿಯನ್ನು ಇನ್ನಷ್ಟು ಘಾಸಿಗೊಳಿಸಬಹುದು. ಸಂಬಂಧ ಚಕ್ಕಡಿಗಾಡಿಯ ಎತ್ತಿನಂತೆ ಜತೆಯಾಗಿ ನಡೆದರೆ ಮಾತ್ರ ಬದುಕಿನ ಪಯಣದ ಗುರಿ ಸೇರಲು ಸಾಧ್ಯ.

ಇತರರೊಂದಿಗೆ ಹೋಲಿಕೆ ಬೇಡ ಜಗಳವಾಡುವ ವೇಳೆ ತಪ್ಪಿಯೂ ಬೇರೆಯವರೊಂದಿಗೆ ನಿಮ್ಮ ಸಂಗಾತಿಯನ್ನು ಹೋಲಿಸಬೇಡಿ. ಇದು ಇನ್ನಷ್ಟು ಅನರ್ಥಕ್ಕೆ ದಾರಿಯಾಗುತ್ತದೆ. ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಹಂಬಲಕ್ಕೆ ಬೆನ್ನೆಲುಬಾಗಿರಿ. ಯಾವುದೋ ಇಂದು ಕೆಲಸದಲ್ಲಿ ಸೋಲು ಕಂಡಮಾತ್ರಕ್ಕೆ ಅದೇ ವಿಷಯಕ್ಕೆ ಜಗಳವಾಡಿ ಎಂದಿಗೂ ಚುಚ್ಚಿ ಮಾತನಾಡಬೇಡಿ. ಸಂಗಾತಿ ಎಂದಿಗೂ ಹೊಸ ಕೆಲಸಕ್ಕೆ ಕೈಜೋಡಿಸಲು ಸಿದ್ಧ ಎನ್ನುವುದನ್ನು  ಅರ್ಥಮಾಡಿಸಿ. ಇತರರೊಂದಿಗೆ ಹೋಲಿಕೆ ಮಾಡಿದಾಗ ಅವರಿಗೂ ಹಿಂಸೆಯಾಗುತ್ತದೆ.

ಕುಳಿತು ಮಾತನಾಡಿ ತಾಳ್ಮೆಯಿಂದ ಕುಳಿತು ಮಾತನಾಡಿದರೆ ದೇಶದ ಸಮಸ್ಯೆಗೆ ಪರಿಹಾರ ಸಿಗುವುದಂತೆ ಇನ್ನು ಸಂಬಂಧಗಳ ನಡುವಿನ ಕೋಳಿ ಜಗಳಕ್ಕೆ ಪರಿಹಾರ ಸಿಗದೆ ಇರಲು ಸಾಧ್ಯವೇ? ಹೀಗಾಗಿ ಎಷ್ಟೇ ದೊಡ್ಡ ಜಗಳವಾಡಿದರೂ ಕೋಪ ತಣಿದ ಮೇಲೆ ಕುಳಿತು ಮಾತನಾಡಿ. ತಪ್ಪು ತಿಳಿವಳಿಕೆ ಬಂದಿದ್ದಾರೂ ಯಾಕೆ ಎನ್ನುವುದನ್ನು ಪರಾಮರ್ಶಿಸಿಕೊಳ್ಳಿ. ಸಂಗಾತಿಯ ಬಳಿ ಎಂದಿಗೂ ಮುಚ್ಚುಮರೆ ಬೇಡ. ನಿಜ ವಿಷಯವನ್ನು ಓಪನ್​ ಆಗಿ ಹಂಚಿಕೊಳ್ಳಿ. ಅದೇ ರೀತಿ ಜಗಳವನ್ನು ಅತಿರೇಕಕ್ಕೆ ಹೋಗಲು ಬಿಡದಿರಿ.

ಇದನ್ನೂ ಓದಿ;

ಲವ್ ಶುರುವಾದ ಆರಂಭದ ದಿನಗಳಲ್ಲಿ ಗೆಳೆಯನ ಬಳಿ ಇವುಗಳ ಬಗ್ಗೆ ಮಾತನಾಡಲೇಬೇಡಿ

Published On - 11:18 am, Sat, 29 January 22

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ