Viral Video: ತನ್ನ ಮೇಲೆ ಮುತ್ತಿನ ಮಳೆ ಸುರಿಸಿದವನಿಗೆ ಬೆಕ್ಕಿನ ಮರಿ ಏನು ಮಾಡಿತು ಗೊತ್ತಾ?; ಕ್ಯೂಟ್ ವಿಡಿಯೋ ಇಲ್ಲಿದೆ

ರೆಡ್ಡಿಟ್​ನಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋ ನೋಡಿದರೆ ನಗು ಮೂಡುವುದು ಗ್ಯಾರಂಟಿ. ಒಬ್ಬ ವ್ಯಕ್ತಿ ತನ್ನ ಕೈಗಳಲ್ಲಿ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ಅದನ್ನು ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ತನ್ನ ಮೇಲೆ ಮುತ್ತಿನ ಮಳೆ ಸುರಿಸಿದವನಿಗೆ ಬೆಕ್ಕಿನ ಮರಿ ಏನು ಮಾಡಿತು ಗೊತ್ತಾ?; ಕ್ಯೂಟ್ ವಿಡಿಯೋ ಇಲ್ಲಿದೆ
ಬೆಕ್ಕಿನ ವಿಡಿಯೋ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 22, 2022 | 6:57 PM

ಬೆಕ್ಕು, ನಾಯಿ, ಕರು ಮುಂತಾದ ಸಾಕು ಪ್ರಾಣಿಗಳೆಂದರೆ ನಿಮಗೆ ಇಷ್ಟಾನಾ? ಹಾಗಾದರೆ ಇಂಟರ್ನೆಟ್​​ನಲ್ಲಿ ಸಾಕುಪ್ರಾಣಿಗಳ ಕ್ಯೂಟ್ ಕ್ಯೂಟ್ ಆದ ಸಾವಿರಾರು ವಿಡಿಯೋಗಳು ನಿಮಗೆ ಸಿಗುತ್ತವೆ. ಅವುಗಳನ್ನು ನೋಡುತ್ತಿದ್ದರೆ ಅವುಗಳ ಮೇಲೆ ಪ್ರೀತಿ ಉಕ್ಕಿ ಬರುವುದಂತೂ ಸುಳ್ಳಲ್ಲ. ನೀವೂ ಪೆಟ್ ಪ್ರಿಯರಾಗಿದ್ದರೆ ನಿಮಗೆ ಈ ವಿಡಿಯೋ ಕೂಡ ಇಷ್ಟವಾಗುವುದರಲ್ಲಿ ಅನುಮಾನವೇ ಇಲ್ಲ. ಮುದ್ದಾದ ಬೆಕ್ಕಿನ ಮರಿಯೊಂದನ್ನು (Cat) ಕೈಯಲ್ಲಿ ಹಿಡಿದುಕೊಂಡಿರುವ ವ್ಯಕ್ತಿ ಅದನ್ನು ಗಟ್ಟಿಯಾಗಿ ತಬ್ಬಿಕೊಂಡು ಮುತ್ತಿಡುತ್ತಿದ್ದಾನೆ. ಎರಡು ಬಾರಿ ಕಿಸ್ ಮಾಡಿದ ಮೇಲೆ ಆತನನ್ನು ತಡೆದ ಆ ಬೆಕ್ಕು ಏನು ಮಾಡಿತು ಗೊತ್ತಾ? ವೈರಲ್ (Viral Video) ಆಗಿರುವ ವಿಡಿಯೋ ಇಲ್ಲಿದೆ ನೋಡಿ.

ರೆಡ್ಡಿಟ್​ನಲ್ಲಿ ಶೇರ್ ಮಾಡಲಾಗಿರುವ ಈ ವಿಡಿಯೋ ನೋಡಿದರೆ ನಗು ಮೂಡುವುದು ಗ್ಯಾರಂಟಿ. ‘ಸೋ ಮೆನಿ ಕಿಸಸ್ (ಮುಖದ ತುಂಬ ಮುತ್ತುಗಳು)’ ಎಂಬ ಕ್ಯಾಪ್ಷನ್ ನೀಡಿ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಒಬ್ಬ ವ್ಯಕ್ತಿ ತನ್ನ ಕೈಗಳಲ್ಲಿ ಬೆಕ್ಕಿನ ಮರಿಯನ್ನು ಹಿಡಿದುಕೊಂಡು ಅದನ್ನು ಚುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ಬೆಕ್ಕು ಸ್ವಲ್ಪ ಸಮಯದವರೆಗೆ ಸುಮ್ಮನಿರುತ್ತದೆ. ಆದರೆ, ಆತ ಮುತ್ತು ಕೊಡುವುದನ್ನು ನಿಲ್ಲಿಸದಿದ್ದಾಗ ಆತನ ಬಾಯಿಯ ಮೇಲೆ ತನ್ನ ಕಾಲನ್ನು ಅಡ್ಡ ಹಿಡಿದು ಆತನ ಮೂಗನ್ನು ನೆಕ್ಕುತ್ತದೆ.

ಈ ವಿಡಿಯೋ ಪೋಸ್ಟ್​ ಆ 1 ದಿನದೊಳಗೆ 62,000ಕ್ಕೂ ಹೆಚ್ಚು ಅಪ್‌ವೋಟ್‌ಗಳನ್ನು ಪಡೆದಿದೆ. ಈ ವಿಡಿಯೋಗೆ ಹಲವರು ಹಲವಾರು ರೀತಿಯ ಕಮೆಂಟ್​ಗಳನ್ನು ಮಾಡಿದ್ದಾರೆ. ಕೆಲವರು ತಮ್ಮ ಮನೆಯ ಬೆಕ್ಕು ಕೂಡ ಇದೇ ರೀತಿ ಮಾಡುತ್ತದೆ ಎಂದಿದ್ದಾರೆ. ಈ ಬೆಕ್ಕಿನ ಮರಿಯನ್ನು ನೋಡುತ್ತಿದ್ದರೆ ಹಿಡಿದು ಮುದ್ದು ಮಾಡಬೇಕೆನಿಸುತ್ತಿದೆ ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಮೊಟ್ಟ ಮೊದಲ ಬಾರಿಗೆ ಚಾಕೋಲೇಟ್ ರುಚಿ ನೋಡಿದ ಮಗುವಿನ ರಿಯಾಕ್ಷನ್ ಹೇಗಿತ್ತು ಗೊತ್ತಾ?

Viral Video: ಲೋಕದ ಚಿಂತೆ ನನಗ್ಯಾಕೆ!; ಬಸ್​ ಸ್ಟಾಪ್​ನಲ್ಲೇ ನಿಂತು ಡ್ಯಾನ್ಸ್​ ಮಾಡಿದ ವ್ಯಕ್ತಿಯ ವಿಡಿಯೋ ವೈರಲ್

Published On - 6:55 pm, Tue, 22 March 22

ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಗೆಳೆಯನನ್ನು ಕಚ್ಚಿ ಹಿಡಿದ ಸಿಂಹಕ್ಕೆ ಮನಬಂದಂತೆ ಥಳಿಸಿದ ವ್ಯಕ್ತಿ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಮಹಾರಾಷ್ಟ್ರದಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಸೋಮನಹಳ್ಳಿಯ ಚಿತಾಗಾರದಿಂದ ಭಾರವಾದ ಹೆಜ್ಜೆಹಾಕುತ್ತ ವಾಪಸ್ಸಾದರು ಪ್ರೇಮ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಒಕ್ಕಲಿಗ ಸಂಪ್ರದಾಯದಂತೆ ನಡೆದ ಅಂತಿಮ ಸಂಸ್ಕಾರದಲ್ಲಿ ಅನೇಕ ಗಣ್ಯರು ಭಾಗಿ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಉಗ್ರಂ ಮಂಜು ನಿಜವಾದ ಮುಖ ಬಯಲು ಮಾಡಿದ ಗೌತಮಿ; ಬದಲಾಯ್ತು ಆಟ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ಮಗಳು ಮತ್ತು ಮೊಮ್ಮಗನೊಂದಿಗೆ ಆಗಮಿಸಿ ತಿರಂಗ ಸ್ವೀಕರಿಸಿದ ಪ್ರೇಮ ಕೃಷ್ಣ
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ವಿಡಿಯೋ: ರಾಜಕೀಯ ಗುರುವಿಗೆ ಹೆಗಲು ಕೊಟ್ಟು ವಿದಾಯ ಹೇಳಿದ ಡಿಕೆ ಬ್ರದರ್ಸ್
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಾಜ್ಯ ಮತ್ತು ರಾಷ್ಟ್ರದ ಹಲವಾರು ನಾಯಕರು ಕೃಷ್ಣರ ಅಂತ್ಯಕ್ರಿಯೆಯಲ್ಲಿ ಭಾಗಿ
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ರಜತ್ ವಿರುದ್ಧ ಮುಗಿಬಿದ್ದ ಮಂಜು, ತ್ರಿವಿಕ್ರಮ್
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ
ಅಂತ್ಯಕ್ರಿಯೆ ಉಸ್ತುವಾರಿ ವಹಿಸಿಕೊಂಡ ಡಿಕೆ ಶಿವಕುಮಾರ್​ರಿಂದ ಚುರುಕು ಓಡಾಟ