ಆಪಲ್ ಐಫೋನ್ನಲ್ಲಿ ಗರ್ಭಿಣಿ ಪುರುಷನ ರೀತಿ ಕಾಣುವ ಎಮೋಜಿ ನೋಡಿ ಸಿಟ್ಟಿಗೆದ್ದ ಬಳಕೆದಾರರು
ಆಪಲ್ ಐಫೋನ್ ಕಳೆದ ತಿಂಗಳು ಗರ್ಭಿಣಿ ಪುರುಷನ ಎಮೋಜಿ ಬಿಡುಗಡೆ ಮಾಡಿದೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ.
ವಾಟ್ಸಾಪ್ (WhatsApp) ಸೇರದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎಮೋಜಿ (Emoji)ಗಳನ್ನು ಬಳಸಿ ಚಾಟಿಂಗ್ ಮಾಡುವುದು ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಮಾತಿನಿಗಿಂತ ಹೆಚ್ಚು ಎಮೋಜಿಗಳನ್ನೇ ಬಳಸಲಾಗುತ್ತದೆ. ಆಗಾಗ ಬರುವ ಹೊಸ ಅಪ್ಡೇಟ್ಗಳು ಬಳಕೆದಾರರನ್ನು ಆಕರ್ಷಿಸುತ್ತವೆ. ಇದೀಗ ಆಪಲ್ ಐಒಎಸ್ ಹೊಸದೊಂದು ಎಮೋಜಿ ಬಿಡುಗಡೆ ಮಾಡಿದೆ. ಹೌದು, ಆಪಲ್ ಐಫೋನ್ ಕಳೆದ ತಿಂಗಳು ಗರ್ಭಿಣಿ ಪುರುಷನ ರೀತಿ ಕಾಣುವ ಎಮೋಜಿ ಬಿಡುಗಡೆ ಮಾಡಿದೆ. ಸದ್ಯ ಇದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಕಾರಣವಾಗಿದೆ. ಕಳೆದ ವಾರ ಬಿಡುಗಡೆಯಾದ ಬಹು ನಿರೀಕ್ಷಿತ iOS 15.4 ನವೀಕರಣಗಳು ಕೆಲವು ಆಸಕ್ತಿದಾಯಕ ಸೇರ್ಪಡೆಗಳನ್ನು ಒಳಗೊಂಡಿವೆ ಮತ್ತು ಇಂಟರ್ನೆಟ್‌ನಲ್ಲಿ ಚರ್ಚೆಯಾಗಿವೆ.
@Apple You really need to rethink your pregnant man emoji. If this is not removed, I will no longer be using apple products. I have three in my house that I will be happy to trash in a heartbeat. And if you think I am the only one, think again.
— Samie James (@Volcanicus72x) March 18, 2022
37 ಹೊಸ ಎಮೋಜಿಗಳಲ್ಲಿ ಮೋಟಾರ್‌ಸೈಕಲ್ ಟೈರ್, ಸ್ಲೈಡ್, ಡಿಸ್ಕೋ ಬಾಲ್, ಕ್ಲಬ್‌ನೊಂದಿಗೆ ಟ್ರೋಲ್, ಹವಳ, ಕಿಡ್ನಿ ಬೀನ್ಸ್ ಮತ್ತು ಕಡಿಮೆ ಬ್ಯಾಟರಿ ಸೇರಿವೆ. ಅಲ್ಲದೆ ಬಳಕೆದಾರರಿಗೆ ರೆಕಾರ್ಡ್ ಮಾಡಲಾದ ‘ಕ್ವಿನ್’ ಎಂಬ ಹೊಸ ಧ್ವನಿ ರೆಕಾರ್ಡ್ ಆಯ್ಕೆಯನ್ನೂ ನೀಡಿದೆ. ಫೇಸ್ ಮಾಸ್ಕ್ ಧರಿಸಿರುವಾಗ ಬಳಕೆದಾರರು ತಮ್ಮ ಫೋನ್ ತೆರೆಯಲು ಸಹ ಇದು ಅನುವು ಮಾಡಿಕೊಡುತ್ತದೆ. ಹೊಸ ನವೀಕರಣವು iPhone 6s ಅಥವಾ ನಂತರದ ಆವೃತ್ತಿಗಳಿಗೆ ಲಭ್ಯವಿದೆ.
ಸಾಮಾಜಿಕ ಜಾಲತಾಣದಲ್ಲಿ ಎಮೋಜಿ ಬಗ್ಗೆ ಭಾರೀ ವಿರೋದ ವ್ಯಕ್ತವಾಗಿದೆ. ಈ ರೀತಿಯ ಅಸಹಜ ಎಮೋಜಿಗಳನ್ನು ಬಳಸಲು ಇಷ್ಟಪಡುವುದಿಲ್ಲ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಆಪಲ್ ಈ ರೀತಿಯ ಎಮೋಜಿಗಳನ್ನು ತರುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ:
10 ನಿಮಿಷಗಳಲ್ಲಿ ಫುಡ್ ಡೆಲಿವರಿ ನೀಡುವುದಾಗಿ ಘೋಷಿಸಿದ ಜೊಮೆಟೋ: ಸಾಮಾಜಿಕ ಜಾಲತಾಣದಲ್ಲಿ ಜೋರಾದ ಚರ್ಚೆ
Published On - 4:27 pm, Tue, 22 March 22