ಪ್ರಾಣಿಗಳ (Animal) ನಡುವಿನ ಕಾದಾಟದ ವಿಡಿಯೋ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇಲ್ಲೊಂದು ವಿಡಿಯೋ ನೆಟ್ಟಿಗರನ್ನೂ ದಂಗಾಗಿಸಿದೆ. ಕರಡಿ (Bear) ಮತ್ತು ಎರಡು ಹಂದಿಗಳ (Pigs) ನಡುವಿನ ಕಿತ್ತಾಟದ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಕನೆಕ್ಟಿಕಟ್‌ನ ನ್ಯೂ ಮೈಲ್ಡ್‌ಫೋರ್ಡ್‌ನಲ್ಲಿ ಈ ಘಟನೆ ನಡೆದಿದೆ. ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, 7 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಬೃಹತ್ ಕಪ್ಪು ಕರಡಿ ಹಂದಿಗಳಿರುವ ಗೂಡಿಗೆ ಜಿಗಿಯುವುದನ್ನು ಕಾಣಬಹುದು. ಕರಡಿ ಒಳಗೆ ಜಿಗಿದ ಕೆಲವು ಸೆಕೆಂಡುಗಳ ನಂತರ, ಮೇರಿ ಎಂಬ ಬಿಳಿ ಹಂದಿ ತನ್ನ ಎಲ್ಲಾ ಶಕ್ತಿ ಬಳಸಿ ಕರಡಿಯ ಮೇಲೆ ದಾಳಿ ಮಾಡಿತು. ತಕ್ಷಣವೇ, ಹಮ್ಮಿ ಎಂಬ ಹೆಸರಿನ ಇನ್ನೊಂದು ಹಂದಿ ಕರಡಿಯ ಕಡೆಗೆ ಓಡಿ ಬಂದು ಗುದ್ದುವುದನ್ನು ಕಾಣಬಹುದು. ನಂತರ ಕರಡಿಯನ್ನು ಮೂಲೆಗುಂಪು ಮಾಡುವುದನ್ನು ಕಾಣಬಹುದು. ಹಂದಿಗಳು ಕರಡಿಯ ಮೇಲೆ ದಾಳಿ ನಡೆಸಿ ತಮ್ಮ ಗೂಡಿರುವ ಜಾಗದಿಂದ ತಳ್ಳುತ್ತವೆ. ಗಾಬರಿಗೊಂಡ ಕರಡಿ ಬೇಲಿಹಾರಿ ಹೊರನಡೆಯುತ್ತದೆ.
ವೈರಲ್ ಆದ ವಿಡಿಯೋಗೆ ನ್ಯೂ ಮಿಲ್ಫೋರ್ಡ್ನಲ್ಲಿ ಹಂದಿಗಳು ಕರಡಿಯೊಂದಿಗೆ ಹೋರಾಡುತ್ತವೆ ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ವೀಡಿಯೊ ನೆಟಿಜನ್‌ಗಳು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಹಂದಿಗಳನ್ನು ಧೈರ್ಯಶಾಲಿ ಎಂದೂ ಹೇಳಿದ್ದಾರೆ. ಸದ್ಯ ವಿಡಿಯೋ ನೆಟ್ಟಿಗರನ್ನು ಸೆಳೆದಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಇದನ್ನೂ ಓದಿ:
ಆಪಲ್ ಐಫೋನ್ನಲ್ಲಿ ಗರ್ಭಿಣಿ ಪುರುಷನ ರೀತಿ ಕಾಣುವ ಎಮೋಜಿ ನೋಡಿ ಸಿಟ್ಟಿಗೆದ್ದ ಬಳಕೆದಾರರು