ಮಿಯಾಮಿಯಾ ನೆಲದಲ್ಲಿ ಸಿಖ್​ ವ್ಯಕ್ತಿಯ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​

ದಕ್ಷಿಣ ಪ್ಲೋರಿಡಾದ ಮಿಯಾಮಿಯಾ ನಗರದಲ್ಲಿ ಸಿಖ್​ ವ್ಯಕ್ತಿಯೊಬ್ಬ ಡ್ಯಾನ್ಸ್​ ಮಾಡಿದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ.

ಮಿಯಾಮಿಯಾ ನೆಲದಲ್ಲಿ ಸಿಖ್​ ವ್ಯಕ್ತಿಯ ಬಿಂದಾಸ್​ ಡ್ಯಾನ್ಸ್​; ವಿಡಿಯೋ ವೈರಲ್​
ಡ್ಯಾನ್ಸ್​ ಮಾಡಿದ ಸಿಖ್​ ವ್ಯಕ್ತಿ
Follow us
TV9 Web
| Updated By: Pavitra Bhat Jigalemane

Updated on: Mar 23, 2022 | 11:34 AM

ಸಾಮಾಜಿಕ ಜಾಲತಾಣದಲ್ಲಿ ಆಗಾಗ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ಅದರಲ್ಲೂ ಟಿಕ್​ ಟಾಕ್​, ರೀಲ್ಸ್​ ಬಂದ ಮೇಲೆ ಡ್ಯಾನ್ಸ್​​ ವಿಡಿಯೋಗಳ ಅಬ್ಬರ ಹೆಚ್ಚಾಗಿದೆ. ಈ ಹಿಂದೆ ಕಚ್ಚಾ ಬಾದಾಮ್​, ಶ್ರೀವಲ್ಲಿ ಹಾಡಿಗೆ  ಊಹೆಗೂ ನಿಲುಕದ ರೀತಿಯ ಡ್ಯಾನ್ಸ್​ ವಿಡಿಯೋಗಳು ನೆಟ್ಟಿಗರನ್ನು ಸೆಳೆದಿದ್ದವು. ಭಾರತದ ಹಾಡುಗಳು ವಿದೇಶಿ ನೆಲಗಳಲ್ಲಿನ ಜನರ ಹೆಜ್ಜೆಗೆ ಕಾರಣವಾಗಿದ್ದವು. ಇದೀಗ ದಕ್ಷಿಣ ಪ್ಲೋರಿಡಾದ ಮಿಯಾಮಿಯಾ ನಗರದಲ್ಲಿ ಸಿಖ್​ ವ್ಯಕ್ತಿಯೊಬ್ಬ ಡ್ಯಾನ್ಸ್​ ಮಾಡಿದ ವಿಡಿಯೋ ಸಾಮಾಜಿಕ ಜಾಲತಾನದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಟರ್ಬನ್​ ಮ್ಯಾಜಿಕ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ವಿಡಿಯೋ ಹಂಚಿಕೊಂಡಿದೆ.

ವಿಡಿಯೋದಲ್ಲಿಸಮುದ್ರದ ದಡದಲ್ಲಿ ಒಂದಷ್ಟು ಹುಡುಗರು ಡ್ಯಾನ್ಸ್​ ಮಾಡುತ್ತಿದ್ದರು. ಇದನ್ನು ನೋಡಿ ಈ ಸಿಖ್​ ವ್ಯಕ್ತಿಗೂ ಡ್ಯಾನ್ಸ್​ ಮಾಡಬೇಕೆನಿಸಿ ಅವರೊಂದಿಗೆ ಹೆಜ್ಜೆ ಹಾಕಲು ಮುಂದೆ ಹೋಗುತ್ತಾನೆ. ಇದೇ ವೇಳೆ ಅಲ್ಲಿದ್ದ 4 ಜನ ಹುಡುಗರ ಗುಂಪು ವ್ಯಕ್ತಿಯನ್ನು ಪ್ರೋತ್ಸಾಹಿಸುತ್ತಾರೆ. ಆಗ ಅವನೂ ಕೂಡ ಅವರೊಂದಿಗೆ ಸಖತ್​ ಸ್ಟೆಪ್​ ಹಾಕಿದ್ದಾನ್. ಪೂರ್ವ ತಯಾರಿಯೇ ಇಲ್ಲದೆ ಬಿಂದಾಸ್​ ಆಗಿ ಸ್ಟೆಪ್​ ಹಾಕಿದ ವ್ಯಕ್ಇಯನ್ನು ನೋಡಿ ನೆಟ್ಟಿಗರು  ಮೆಚ್ಚಿಕೊಂಡಿದ್ದಾರೆ.  ಡ್ಯಾನ್ಸ್​ ಮಾಡಿದ ವ್ಯಕ್ತಿಯನ್ನು ಸಮಿಂದರ್​ ಎಂದು ಗುರುತಿಸಲಾಗಿದೆ.

ಸದ್ಯ ವೈರಲ್​ ಆದ ವಿಡಿಯೋ 65 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ವಿಡಿಯೋ ನೋಡಿ ನೆಟ್ಟಿಗರು ಲವ್​ ಇಟ್​ ಎಂದು ಕಾಮೆಂಟ್ ಮಾಡಿದ್ದಾರೆ. ಡ್ಯಾನ್ಸ್​​ನಲ್ಲಿ ಪ್ರತೀ ಹೆಜ್ಜೆಯೂ ಅದ್ಭುತವಾಗಿದೆ ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ.

ಇದನ್ನೂ ಓದಿ: Viral Video: ತನ್ನ ಮೇಲೆ ಮುತ್ತಿನ ಮಳೆ ಸುರಿಸಿದವನಿಗೆ ಬೆಕ್ಕಿನ ಮರಿ ಏನು ಮಾಡಿತು ಗೊತ್ತಾ?; ಕ್ಯೂಟ್ ವಿಡಿಯೋ ಇಲ್ಲಿದೆ