10 ನಿಮಿಷಗಳಲ್ಲಿ ಫುಡ್ ಡೆಲಿವರಿ ನೀಡುವುದಾಗಿ ಘೋಷಿಸಿದ ಜೊಮೆಟೋ: ಸಾಮಾಜಿಕ ಜಾಲತಾಣದಲ್ಲಿ ಜೋರಾದ ಚರ್ಚೆ
ಜೊಮಾಟೊ ಆಹಾರ ಪ್ರಿಯರಿಗೆ ಬಂಪರ್ ಆಫರ್ ನೀಡಿದೆ. 10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ನೀಡುವುದಾಗಿ ಘೋಷಿಸಿದೆ.
ಜೊಮಾಟೊ (Zomato) ಆಹಾರ ಪ್ರಿಯರಿಗೆ ಬಂಪರ್ ಆಫರ್ ನೀಡಿದೆ. 10 ನಿಮಿಷಗಳ ಆಹಾರ ವಿತರಣಾ ಸೇವೆಯನ್ನು ನೀಡುವುದಾಗಿ ಘೋಷಿಸಿದೆ. ಜೊಮಾಟೊ ಸಂಸ್ಥಾಪಕರಾದ ದೀಪಿಂದರ್ ಗೋಯಲ್ (Deepinder Goyal) ಟ್ವಿಟರ್ನಲ್ಲಿ ಈ ಹೊಸ ವೈಶಿಷ್ಟ್ಯವನ್ನು ಹಂಚಿಕೊಂಡಿದ್ದಾರೆ. ಜೊಮಾಟೊದಲ್ಲಿ 10 ನಿಮಿಷಗಳ ಆಹಾರ ವಿತರಣೆ ಶೀಘ್ರದಲ್ಲೇ ಬರಲಿದೆ ಎಂದು ಅವರ ಟ್ವೀಟ್ ಮಾಡಿದ್ದಾರೆ. ದೀಪಿಂದರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
Announcement: 10 minute food delivery is coming soon on Zomato.
Food quality – 10/10 Delivery partner safety – 10/10 Delivery time – 10 minutes
Here’s how Zomato Instant will achieve the impossible while ensuring delivery partner safety – https://t.co/oKs3UylPHh pic.twitter.com/JYCNFgMRQz
— Deepinder Goyal (@deepigoyal) March 21, 2022
ಆಹಾರವನ್ನು ವೇಗವಾಗಿ ತಲುಪಿಸಲು ನಾವು ವಿತರಣಾ ವ್ಯಕ್ತಿಗಳಿಗೆ ಮೇಲೆ ಯಾವುದೇ ಒತ್ತಡವನ್ನು ಹಾಕುವುದಿಲ್ಲ. ತಡವಾಗಿ ಡೆಲಿವರಿ ಮಾಡುವ ವಿತರಣಾ ಪಾಲುದಾರರಿಗೆ ನಾವು ದಂಡ ವಿಧಿಸುವುದಿಲ್ಲ. ವಿತರಣಾ ಪಾಲುದಾರರಿಗೆ ವಿತರಣಾ ಭರವಸೆಯ ಸಮಯದ ಬಗ್ಗೆ ತಿಳಿಸಲಾಗುವುದಿಲ್ಲ. ಸಮಯ ಆಪ್ಟಿಮೈಸೇಶನ್ ರಸ್ತೆಯಲ್ಲಿ ಸಂಭವಿಸುವುದಿಲ್ಲ. ಉತ್ತಮ ಮಟ್ಟದ ಆಹಾರವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಘೋಷಣೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ತಮ್ಮ ಆಹಾರವು ಕೆಲವೇ ಸಮಯದಲ್ಲಿ ಡೆಲಿವರಿ ಆಗಲಿದೆ ಎಂದು ಬಳಕೆದಾರರ ಒಂದಷ್ಟು ಜನ ಖುಷಿ ವ್ಯಕ್ತಪಡಿಸಿದ್ದರೆ, ಇತರ ಟ್ವಿಟರ್ ಬಳಕೆದಾರರು ಡೆಲಿವರಿ ಬಾಯ್‌ಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಿ, ಜೊಮೆಟೋ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: