ಭಾರತದಲ್ಲಿ ಮೊದಲ ಬಾರಿಗೆ ಐಷಾರಾಮಿ ಹೆಲಿಕಾಪ್ಟರ್ ಖರೀದಿಸಿದ ಆರ್‌ಪಿ ಸಮೂಹ ಸಂಸ್ಥೆ ಅಧ್ಯಕ್ಷ: ಇದರ ಮೌಲ್ಯ ಎಷ್ಟು ಗೊತ್ತಾ?
ಆರ್‌ಪಿ ಗ್ರೂಪ್ ಆಫ್ ಕಂಪನಿಗಳ ಅಧ್ಯಕ್ಷ ಬಿ.ರವಿ ಪಿಳ್ಳೈ ಅವರು 100 ಕೋಟಿ ರೂಪಾಯಿ ಮೌಲ್ಯದ ಏರ್‌ಬಸ್ ಹೆಚ್ 145 ಹೆಲಿಕಾಪ್ಟರ್ ಅನ್ನು ಖರೀದಿಸಿದ್ದಾರೆ. ಈ ಮೂಲಕ ಐಷಾರಾಮಿ ಚಾಪರ್ ಅನ್ನು ಹೊಂದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆರ್‌ಪಿ ಗ್ರೂಪ್ ಆಫ್ ಕಂಪನಿಗಳ (RP Group of companies) ಅಧ್ಯಕ್ಷ ಬಿ.ರವಿ ಪಿಳ್ಳೈ ಅವರು 100 ಕೋಟಿ ರೂಪಾಯಿ ಮೌಲ್ಯದ ಏರ್‌ಬಸ್ ಹೆಚ್ 145 ಹೆಲಿಕಾಪ್ಟರ್ (Helicopter)ಅನ್ನು ಖರೀದಿಸಿದ್ದಾರೆ. ಈ ಮೂಲಕ ಐಷಾರಾಮಿ ಚಾಪರ್ ಅನ್ನು ಹೊಂದಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ, ಕೇವಲ 1,500 H145 ವಿಮಾನಗಳು ಪ್ರಪಂಚದಾದ್ಯಂತ ಹಾರುತ್ತಿವೆ. ವರದಿಯ ಪ್ರಕಾರ, ಚಾಪರ್ ಭಾನುವಾರ RP ಗ್ರೂಪ್ ಉಪಾಧ್ಯಕ್ಷರೊಂದಿಗೆ ಕೋವಲಂನಿಂದ ದಿ ರವಿಜ್ ಅಷ್ಟಮುಡಿಗೆ ಹೆಲಿಕಾಪ್ಟರ್ ಅನ್ನು ಮೊದಲ ಬಾರಿಗೆ ಹಾರಿಸಲಾಗಿದೆ. ಸದ್ಯ ಈ ವಿಚಾರ ಎಲ್ಲೆಡೆ ವೈರಲ್ ಆಗಿದೆ.
68 ವರ್ಷದ ಬಿಲಿಯನೇರ್ ಪ್ರಸ್ತುತ 2.5 ಶತಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರ ವಿವಿಧ ಕಂಪನಿಯಲ್ಲಿ ಸುಮಾರು 70,000 ಉದ್ಯೋಗಿಗಳನ್ನು ಹೊಂದಿದ್ದಾರೆ. UAE ಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಎಲ್ಲಾ ಮಧ್ಯಪ್ರಾಚ್ಯ ದೇಶಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಈ ಹೆಲಿಕಾಪ್ಟರ್ನಿಂದ ಅವರ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ. ಏಕೆಂದರೆ ಅವರು ರಾಜ್ಯದಾದ್ಯಂತ ಐಷಾರಾಮಿ ಹೋಟೆಲ್‌ಗಳನ್ನು ಹೊಂದಿದ್ದಾರೆ. ಜತೆಗೆ ರಾಜ್ಯದ ಪ್ರವಾಸಿ ತಾಣಗಳಾದ್ಯಂತ ತಮ್ಮ ಅತಿಥಿಗಳನ್ನು ಸಾಗಿಸಲು ಬಳಸಲಾಗುವುದು ಎಂದು ಆರ್‌ಪಿ ಗ್ರೂಪ್‌ನ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರ್‌ಪಿ ಗ್ರೂಪ್ ಕೋಯಿಕ್ಕೋಡ್‌ನ ದಿ ರವಿಜ್ ಕಡವು, ಕೊಲ್ಲಂನ ದಿ ರವಿಜ್ ಅಷ್ಟಮುಡಿ ಮತ್ತು ತಿರುವನಂತಪುರಂನ ದಿ ರವಿಜ್ ಕೋವಲಂನಲ್ಲಿ ಹೆಲಿಪ್ಯಾಡ್‌ಗಳನ್ನು ಹೊಂದಿದೆ. ಪಿಳ್ಳೈ ಅವರು ತಮ್ಮ ಚಾರಿಟಿ ಚಟುವಟಿಕೆಗಳಿಗೆ ಮತ್ತು ರಾಜಕೀಯ ಪಕ್ಷಗಳಾದ್ಯಂತ ಉನ್ನತ ರಾಜಕೀಯ ನಾಯಕರೊಂದಿಗಿನ ನಿಕಟ ಸ್ನೇಹ ಹೊಂದಿದ್ದಾರೆ.
ಹೆಲಿಕಾಪ್ಟರ್ನ ವಿಶೇಷತೆಗಳೇನು:
- ಎಲ್ಲಾ ಇತ್ತೀಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಅತ್ಯಾಧುನಿಕ ಹೆಲಿಕಾಪ್ಟರ್ ಏಳು ಪ್ರಯಾಣಿಕರು ಮತ್ತು ಪೈಲಟ್ ಅನ್ನು ಸಾಗಿಸಲು ಸಾಧ್ಯವಾಗುತ್ತದೆ.
- ಹೆಲಿಕಾಪ್ಟರ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಿಂದಲೂ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಸಾಮರ್ಥ್ಯವನ್ನು ಹೊಂದಿದೆ.
- ಚಾಪರ್ ಶಕ್ತಿ ಹೀರಿಕೊಳ್ಳುವ ಆಸನಗಳನ್ನು ಹೊಂದಿದೆ, ಇದು ಅಪಘಾತದ ಸಂದರ್ಭದಲ್ಲಿ ಅದರ ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
- ಇದಲ್ಲದೆ H145 ಸುಧಾರಿತ ವೈರ್‌ಲೆಸ್ ಸಂವಹನ ವ್ಯವಸ್ಥೆಯನ್ನು ಸಹ ಹೊಂದಿದೆ.
ಇದನ್ನೂ ಓದಿ:
Shocking Video: ಬೆಂಜ್ ಕಾರ್ಖಾನೆಗೆ ಚಿರತೆ ಮರಿಯ ಸರ್ಪ್ರೈಸ್ ವಿಸಿಟ್!; 6 ಗಂಟೆ ಸತಾಯಿಸಿದ ಚಿರತೆಯ ವಿಡಿಯೋ ವೈರಲ್