Shocking News: ಹೆಂಡತಿ ಮಟನ್ ಕರಿ ಮಾಡದಿದ್ದಕ್ಕೆ 6 ಬಾರಿ ಪೊಲೀಸರಿಗೆ ಫೋನ್ ಮಾಡಿ ಕಾಟ ಕೊಟ್ಟ ಗಂಡ!

ತೆಲಂಗಾಣದ ವ್ಯಕ್ತಿಯೊಬ್ಬ ತನ್ನ ಹೆಂಡತಿ ತನಗೆ ಮಟನ್ ಕರಿ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಆಕೆಯ ಮೇಲೆ ದೂರು ನೀಡಲು 6 ಬಾರಿ 100 ನಂಬರ್​ಗೆ (ಪೊಲೀಸ್ ಕಂಟ್ರೋಲ್ ರೂಂ) ಕರೆ ಮಾಡಿದ್ದಾನೆ.

Shocking News: ಹೆಂಡತಿ ಮಟನ್ ಕರಿ ಮಾಡದಿದ್ದಕ್ಕೆ 6 ಬಾರಿ ಪೊಲೀಸರಿಗೆ ಫೋನ್ ಮಾಡಿ ಕಾಟ ಕೊಟ್ಟ ಗಂಡ!
ಮಟನ್ ಕರಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 22, 2022 | 2:24 PM

ನಲ್ಗೊಂಡ: ನಾನ್​ವೆಜ್ ಪ್ರಿಯರಿಗೆ ವಾರದಲ್ಲಿ ಮೂರ್ನಾಲ್ಕು ದಿನವಾದರೂ ನಾನ್​ವೆಜ್ ಊಟ ಮಾಡದಿದ್ದರೆ ಸಮಾಧಾನವೇ ಆಗುವುದಿಲ್ಲ. ಕುರಿಯ ಮಾಂಸದಿಂದ ತಯಾರಿಸಲಾಗುವ ಮಟನ್ ಕರಿ (Mutton Curry), ಮಟನ್ ಕಬಾಬ್ ಮುಂತಾದ ಅಡುಗೆಗಳನ್ನು ಮೆಚ್ಚದಿರುವ ನಾನ್​ವೆಜ್ ಪ್ರಿಯರೇ ಇಲ್ಲ ಎನ್ನಬಹುದು. ಆದರೆ, ಇದೇ ಮಟನ್ ಕಾರಣಕ್ಕೆ ಇದೀಗ ವ್ಯಕ್ತಿಯೊಬ್ಬ ಜೈಲು ಸೇರಿದ್ದಾನೆ. ಅಷ್ಟಕ್ಕೂ ಆತ ಮಾಡಿದ ತಪ್ಪಾದರೂ ಏನು? ಇಲ್ಲಿದೆ ಕುತೂಹಲಕಾರಿ ಸಂಗತಿ. ತೆಲಂಗಾಣದ ವ್ಯಕ್ತಿಯೊಬ್ಬ ತನ್ನ ಹೆಂಡತಿ ತನಗೆ ಮಟನ್ ಕರಿ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಆಕೆಯ ಮೇಲೆ ದೂರು ನೀಡಲು 6 ಬಾರಿ 100 ನಂಬರ್​ಗೆ (ಪೊಲೀಸ್ ಸಹಾಯವಾಣಿ) ಕರೆ ಮಾಡಿದ್ದಾನೆ. ಅನಗತ್ಯವಾಗಿ ಕ್ಷುಲ್ಲಕ ಕಾರಣಕ್ಕೆ ಪೊಲೀಸರಿಗೆ ಕರೆ ಮಾಡಿ, ತೊಂದರೆ ಕೊಟ್ಟ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವರದಿಗಳ ಪ್ರಕಾರ, ನವೀನ್ ಎಂಬ ವ್ಯಕ್ತಿ ತನ್ನ ಹೆಂಡತಿ ತನಗೆ ಮಟನ್ ಕರಿ ಮಾಡಿಕೊಟ್ಟಿಲ್ಲ ಎಂಬ ಕಾರಣಕ್ಕೆ ಅವಳೊಂದಿಗೆ ಜಗಳವಾಡಿದ್ದಾನೆ. ಇದರಿಂದ ಹೆಂಡತಿ ಮೇಲೆ ಕೋಪಗೊಂಡ ಆತ ತನ್ನ ಫೋನ್ ಎತ್ತಿಕೊಂಡು 100ಗೆ ಡಯಲ್ ಮಾಡಿದ್ದಾನೆ. ಪೊಲೀಸರು ಫೋನ್ ಎತ್ತಿ ಏನೆಂದು ಕೇಳಿದಾಗ ತನ್ನ ಹೆಂಡತಿ ತನಗೆ ಬೇಕಾದ ಅಡುಗೆ ಮಾಡಿಕೊಡುತ್ತಿಲ್ಲ ಎಂದು ತನ್ನ ಹೆಂಡತಿಯ ವಿರುದ್ಧ ದೂರಿದ್ದಾನೆ ಎಂದು ತೆಲಂಗಾಣ ಟುಡೇ ವರದಿ ಮಾಡಿದೆ.

mutton cook

ಆರೋಪಿ ನವೀನ್

ಆತನ ಕರೆ ಸ್ವೀಕರಿಸಿದ ಪೊಲೀಸ್ ನಿಯಂತ್ರಣ ಕೊಠಡಿ ನಿರ್ವಾಹಕರು ಆತ ತಮಾಷೆಗಾಗಿ ಈ ರೀತಿ ಕರೆ ಮಾಡಿದ್ದಾನೆ ಎಂದು ಸುಮ್ಮನಾಗಿದ್ದಾರೆ. ಆದರೆ, ಮತ್ತೆ 5 ಬಾರಿ ಇದೇ ವಿಷಯಕ್ಕೆ ಆತ ಫೋನ್ ಮಾಡಿದ್ದರಿಂದ ಕೋಪಗೊಂಡ ಪೊಲೀಸರು ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದಾರೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 290 ಮತ್ತು 510ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ. ಕುಡಿದ ಮತ್ತಿನಲ್ಲಿ ಹೆಂಡತಿಯ ಮೇಲೆ ದೂರು ನೀಡಲು ಪೊಲೀಸ್ ಕಂಟ್ರೋಲ್ ರೂಂ ನಂಬರ್​ಗೆ ಫೋನ್ ಮಾಡಿ ತೊಂದರೆ ಕೊಟ್ಟಿದ್ದಕ್ಕೆ ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಪೊಲೀಸರ ಪ್ರಕಾರ, ನವೀನ್ ಶುಕ್ರವಾರ ರಾತ್ರಿ ಮದ್ಯದ ಅಮಲಿನಲ್ಲಿ ಮನೆಗೆ ಮರಳಿದ್ದ. ತನಗಾಗಿ ಮಟನ್ ಕರಿ ಮಾಡಲು ಆತ ತನ್ನ ಹೆಂಡತಿಗೆ ಆದೇಶಿಸಿದ್ದ. ಅವಳು ಅದಕ್ಕೆ ಒಪ್ಪದಿದ್ದಾಗ ಪೊಲೀಸರಿಗೆ ದೂರು ನೀಡಲು 100 (ಪೊಲೀಸ್ ಕಂಟ್ರೋಲ್ ರೂಂ) ಡಯಲ್ ಮಾಡಿದನು. ಈ ಘಟನೆಯ ನಂತರ ಸಂಕಷ್ಟದಲ್ಲಿರುವ ಮತ್ತು ತುರ್ತು ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ಇರುವ 100 ಅನ್ನು ದುರುಪಯೋಗಪಡಿಸಿಕೊಳ್ಳದಂತೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ‘ಮೀನು..ಮಟನ್​ಗಿಂತ ಜಾಸ್ತಿ ಗೋಮಾಂಸವನ್ನೇ ತಿನ್ನಿ’-ವಿವಾದಾತ್ಮಕ ಹೇಳಿಕೆ ನೀಡಿ, ಟೀಕೆಗೆ ಗುರಿಯಾದ ಬಿಜೆಪಿ ಸಚಿವ

ಮದುವೆಯನ್ನೇ ಮುರಿದ ಮಟನ್​​; ಮನೆಗೆ ಹೋಗುವ ಮೊದಲು ಬೇರೆ ಯುವತಿಗೆ ತಾಳಿ ಕಟ್ಟಿ, ಕರೆದುಕೊಂಡು ಹೋದ ವರ

Published On - 2:17 pm, Tue, 22 March 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್