AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಟನ್ ತರಲು‌ ನಡೆದು ಹೋಗುತ್ತಿದ್ದ ವೃದ್ಧೆಯ ಕೊರಳಿಂದ ಚಿನ್ನದ ಸರ ಎಗರಿಸಿದ ಖದೀಮರು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ತಿಂಗಳಲ್ಲಿ ಮೂರು ಸರಗಳ್ಳತನ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರು ಇದರಿಂದ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ವಿಜಯಪುರ ಪೊಲೀಸರು, ಡಿವೈಎಸ್ಪಿ ರಂಗಪ್ಪ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಟನ್ ತರಲು‌ ನಡೆದು ಹೋಗುತ್ತಿದ್ದ ವೃದ್ಧೆಯ ಕೊರಳಿಂದ ಚಿನ್ನದ ಸರ ಎಗರಿಸಿದ ಖದೀಮರು
ಮಟನ್ ತರಲು‌ ನಡೆದು ಹೋಗುತ್ತಿದ್ದ ವೃದ್ಧೆಯ ಕೊರಳಿಂದ ಚಿನ್ನದ ಸರ ಎಗರಿಸಿದ ಖದೀಮರು
TV9 Web
| Edited By: |

Updated on: Jul 29, 2021 | 9:39 AM

Share

ದೇವನಹಳ್ಳಿ: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಲಾಕ್​​ಡೌನ್​ ತೆರವು ಬಳಿಕ ಹೆಚ್ಚಾಗುತ್ತಿರುವ ಚೈನ್​ ಸ್ನಾಚಿಂಗ್​ ಪ್ರಕರಣಗಳು ಇದೀಗ ಗ್ರಾಮಾಂತರ ಭಾಗದಲ್ಲೂ ಕಾಣಿಸಿಕೊಳ್ಳುತ್ತಿದೆ. ನಿನ್ನೆಯಷ್ಟೇ ಒಬ್ಬ ಕುಖ್ಯಾತ ಸರಗಳ್ಳನನ್ನು ಬಂಧಿಸಲು ಹೋದಾಗ ಅವನು ಸಯನೈಡ್​ ನುಂಗಿ ಪ್ರಾಣ ಬಿಟ್ಟಿದ್ದ ಘಟನೆ ಹೊಸಕೋಟೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಮಧ್ಯೆ, ನಿನ್ನೆ ಸಂಜೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಖದೀಮರು ವೃದ್ದೆಯನ್ನು ಯಾಮಾರಿಸಿ ಆಕೆಯ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದಾರೆ.

ಪಟ್ಟಣದ ರತ್ನಮ್ಮ ಎಂಬಾಕೆಯ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಇಬ್ಬರು ಖದೀಮರು ದೋಚಿಕೊಂಡು ಹೋಗಿದ್ದಾರೆ. ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದ ಬಳಿ ಮಟನ್ ತೆಗೆದುಕೊಂಡು ಬರಲು‌ ವೃದ್ಧೆ ನಡೆದುಕೊಂಡು ಹೋಗುತ್ತಿದ್ದಾಗ ಈ ಕುಕೃತ್ಯ ನಡೆಸಿದ್ದಾರೆ.

ವೃದ್ದ ಮಹಿಳೆಯ ಬಳಿ ಬೈಕ್ ನಿಲ್ಲಿಸಿದ ಇಬ್ಬರು ಅಪರಿಚಿತರು, ಅಜ್ಜಿ ಮುಂದೆ ಕಳ್ಳರಿದ್ದಾರೆ ಒಡವೆಗಳನ್ನ ಬಿಚ್ಚಿ ಕವರ್ ನಲ್ಲಿ ಹಾಕಿಕೊಂಡು‌ ಹೋಗು ಅಂತಾ ಚಿನ್ನದ‌ ಸರ ಬಿಚ್ಚಿಸಿದ್ದಾರೆ. ಬಳಿಕ ಅದನ್ನು ಕವರ್ ನಲ್ಲಿ ಹಾಕುತ್ತಿದ್ದಂತೆ, ಅಜ್ಜಿಯ ಕೈಯಲ್ಲಿ ಕಲ್ಲಿನ ಕವರ್ ಇಟ್ಟು 40 ಗ್ರಾಂ ಚಿನ್ನದ‌ ಸರ‌ ಕದ್ದುಹೋಗಿದ್ದಾರೆ ಖದೀಮರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿ ಒಂದು ತಿಂಗಳಲ್ಲಿ ಮೂರು ಸರಗಳ್ಳತನ ಪ್ರಕರಣಗಳು ನಡೆದಿದ್ದು, ಸಾರ್ವಜನಿಕರು ಇದರಿಂದ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ವಿಜಯಪುರ ಪೊಲೀಸರು, ಡಿವೈಎಸ್ಪಿ ರಂಗಪ್ಪ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

bike borne chain snatchers snatch gold chain from woman in vijayapura town in devanahalli 2

ಸ್ಥಳಕ್ಕೆ ವಿಜಯಪುರ ಪೊಲೀಸರು, ಡಿವೈಎಸ್ಪಿ ರಂಗಪ್ಪ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ

ಹೋಸಕೋಟೆ: ಪೊಲೀಸರು ಅರೆಸ್ಟ್ ಮಾಡಲು ತೆರಳಿದ್ದಾಗ ಸೈನೇಡ್ ತಿಂದು ಸಾವನಪ್ಪಿದ ಆರೋಪಿ ಸರಗಳ್ಳ (bike borne chain snatchers snatch gold chain from woman in vijayapura town in devanahalli)