ಕಾನ್ಸ್‌ಟೇಬಲ್ ಪತಿ ಜೊತೆ ಅಡುಗೆ ಮಾಡುವ ವಿಷಯವಾಗಿ ಭಿನ್ನಾಭಿಪ್ರಾಯ; ನವ ವಿವಾಹಿತ ಮಹಿಳಾ ಕಾನ್ಸ್‌ಟೆಬಲ್​ ಆತ್ಮಹತ್ಯೆ

TV9 Digital Desk

| Edited By: preethi shettigar

Updated on:Jul 28, 2021 | 12:49 PM

ಮಂಜುನಾಥ್ ಮತ್ತು ನೇತ್ರಾ ಇಬ್ಬರು ಕೂಡ ತುಮಕೂರು ಜಿಲ್ಲೆಯವರು. ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ ನಡೆದು ನೇತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದಾಗಿ ಮೂಲಗಳು ಹೇಳಿವೆ.

ಕಾನ್ಸ್‌ಟೇಬಲ್ ಪತಿ ಜೊತೆ ಅಡುಗೆ ಮಾಡುವ ವಿಷಯವಾಗಿ ಭಿನ್ನಾಭಿಪ್ರಾಯ; ನವ ವಿವಾಹಿತ ಮಹಿಳಾ ಕಾನ್ಸ್‌ಟೆಬಲ್​ ಆತ್ಮಹತ್ಯೆ
ನೇತ್ರಾ ಮತ್ತು ಮಂಜುನಾಥ್

Follow us on

ಬೆಂಗಳೂರು: ನವವಿವಾಹಿತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಗೊಲ್ಲರಹಟ್ಟಿಯಲ್ಲಿ ನಡೆದಿದೆ. ಮನೆಯಲ್ಲಿ ನೇಣುಬಿಗಿದುಕೊಂಡು ನೇತ್ರಾ(27) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ನೇತ್ರಾ, ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯ ಪಿಸಿ ಆಗಿ ಕಾರ್ಯನಿರ್ವಹಿಸುತ್ತಿದ್ದರು. ತಿಂಗಳ ಹಿಂದೆಯಷ್ಟೇ ಪೀಣ್ಯ ಸಂಚಾರಿ ಠಾಣೆಯ ಕಾನ್ಸ್‌ಟೇಬಲ್ ಮಂಜುನಾಥ್ ಜತೆಗೆ ವಿವಾಹವಾಗಿತ್ತು.

ಮಂಜುನಾಥ್ ಮತ್ತು ನೇತ್ರಾ ಇಬ್ಬರು ಕೂಡ ತುಮಕೂರು ಜಿಲ್ಲೆಯವರು. ಇಬ್ಬರು ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಸದ್ಯಕ್ಕೆ ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ ನಡೆದು ನೇತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುವುದಾಗಿ ಮೂಲಗಳು ಹೇಳಿವೆ. ಆದರೆ ಆತ್ಮಹತ್ಯೆಗೆ ಪೊಲೀಸರು ಇನ್ನೂ ನಿಖರ ಕಾರಣ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ 10 ಮಂದಿ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಉತ್ತರಪ್ರದೇಶದ ಬಾಗಪತ್​ ಜಿಲ್ಲೆಯ ಕೊವಿಡ್​ 19 ಲಸಿಕಾ ಕೇಂದ್ರದಲ್ಲಿ ಯುವಕ ಮತ್ತು ಪೊಲೀಸರ ಮಧ್ಯೆ ಜಗಳ ನಡೆದಿತ್ತು. ಹೀಗೆ ಪೊಲೀಸರೊಂದಿಗೆ ಸಂಘರ್ಷ ನಡೆದ ದಿನ ಸಂಜೆ ಆ ಯುವಕ ತಮ್ಮ ಮನೆಯ ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.

ಲಸಿಕಾ ಕೇಂದ್ರದಲ್ಲಿ ಯುವಕನೊಂದಿಗೆ ಬೈದು, ಗಲಾಟೆ ಮಾಡಿದ್ದ ಆರೋಪದಡ 10 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲ ಅವರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣವೂ ದಾಖಲಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕೊವಿಡ್​ 19 ಲಸಿಕಾ ಕೇಂದ್ರದಲ್ಲಿದ್ದ ಪೊಲೀಸರೇ ಕಾರಣ ಎಂದು ಆತನ ಸಂಬಂಧಿಕರು ಆರೋಪ ಮಾಡಿದ್ದಾರೆ. ಕಾರಣವೇ ಇಲ್ಲದೆ ಯುವಕ ಮತ್ತು ಆತನ ತಾಯಿಗೆ ಹೊಡೆದಿದ್ದರು. ಅದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂದೂ ದೂರು ನೀಡಿದ್ದಾರೆ.

ಇದನ್ನೂ ಓದಿ: ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ; 10 ಪೊಲಿಸರು ಅಮಾನತು-ಅಂಥದ್ದೇನಾಯ್ತು?

ಭಾವಿ ಪತ್ನಿ 3 ದಿನದಿಂದ ಫೋನ್​ ಮಾಡಿಲ್ಲ ಎಂದು ಕಾನ್ಸ್​ಟೇಬಲ್​ ಆತ್ಮಹತ್ಯೆ

ತಾಜಾ ಸುದ್ದಿ

Related Stories

Click on your DTH Provider to Add TV9 Kannada