Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ; 10 ಪೊಲಿಸರು ಅಮಾನತು-ಅಂಥದ್ದೇನಾಯ್ತು?

ಸಂಜೆ ಹೊತ್ತಿಗೆ ಪೊಲೀಸರು ನಮ್ಮ ಮನೆಗೇ ಬಂದರು. ಪತ್ನಿಗೂ ಹೊಡೆಯಲು ಪ್ರಾರಂಭಿಸಿದರು. ಇದರಿಂದ ಭಯಗೊಂಡ ನನ್ನ ಮಗ ಓಡಿಹೋದ ಎಂದು ಯುವಕನ ತಂದೆ ತಿಳಿಸಿದ್ದಾರೆ.

ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಯುವಕ; 10 ಪೊಲಿಸರು ಅಮಾನತು-ಅಂಥದ್ದೇನಾಯ್ತು?
ಉತ್ತರಪ್ರದೇಶದ ಕೊವಿಡ್​ 19 ಲಸಿಕಾ ಕೇಂದ್ರದಲ್ಲಿ ಗಲಾಟೆ
Follow us
TV9 Web
| Updated By: Lakshmi Hegde

Updated on: Jul 27, 2021 | 5:29 PM

ಲಖನೌ: ಯುವಕನೊಬ್ಬ ಆತ್ಮಹತ್ಯೆ(Suicide) ಮಾಡಿಕೊಂಡ ಬೆನ್ನಲ್ಲೇ 10 ಮಂದಿ ಪೊಲೀಸರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ಉತ್ತರಪ್ರದೇಶ (Uttar Pradesh)ದ ಬಾಗಪತ್​ ಜಿಲ್ಲೆಯ ಕೊವಿಡ್​ 19 ಲಸಿಕಾ ಕೇಂದ್ರದಲ್ಲಿ ಯುವಕ ಮತ್ತು ಪೊಲೀಸರ ಮಧ್ಯೆ ಜಗಳ ನಡೆದಿತ್ತು. ಹೀಗೆ ಪೊಲೀಸ(Cops)ರೊಂದಿಗೆ ಸಂಘರ್ಷ ನಡೆದ ದಿನ ಸಂಜೆ ಆ ಯುವಕ ತಮ್ಮ ಮನೆಯ ಬಳಿ ಇರುವ ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.

ಲಸಿಕಾ ಕೇಂದ್ರದಲ್ಲಿ ಯುವಕನೊಂದಿಗೆ ಬೈದು, ಗಲಾಟೆ ಮಾಡಿದ್ದ ಆರೋಪದಡ 10 ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲ ಅವರ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಪ್ರಕರಣವೂ ದಾಖಲಾಗಿದೆ. ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕೊವಿಡ್​ 19 ಲಸಿಕಾ ಕೇಂದ್ರದಲ್ಲಿದ್ದ ಪೊಲೀಸರೇ ಕಾರಣ ಎಂದು ಆತನ ಸಂಬಂಧಿಕರು ಆರೋಪ ಮಾಡಿದ್ದಾರೆ. ಕಾರಣವೇ ಇಲ್ಲದೆ ಯುವಕ ಮತ್ತು ಆತನ ತಾಯಿಗೆ ಹೊಡೆದಿದ್ದರು. ಅದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂದೂ ದೂರು ನೀಡಿದ್ದಾರೆ.

ಇನ್ನು ಕೊವಿಡ್​ 19 ಲಸಿಕಾ ಕೇಂದ್ರದಲ್ಲಿ ಈ ಯುವಕನಿಗೆ ಪೊಲೀಸರು ಹೊಡೆದ 90 ಸೆಕೆಂಡ್​ಗಳ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ಯುವಕನ ತಂದೆ, ನಾವೆಲ್ಲ ಕೊರೊನಾ ಲಸಿಕೆ ಪಡೆಯಲು ಹೋಗಿದ್ದೆವು. ಅಲ್ಲಿ ವೈದ್ಯಕೀಯ ಸಿಬ್ಬಂದಿ ಈತನ ಹೆಸರು ಕರೆದರೂ ಪೊಲೀಸರು ಒಳಗೆ ಬಿಡಲಿಲ್ಲ. ಅದರ ಬದಲು ಲಾಠಿಯಲ್ಲಿ ಹೊಡೆಯತೊಡಗಿದರು. ಅದು ಹೇಗೋ ಆತನನ್ನು ತಪ್ಪಿಸಿಕೊಂಡು ಕರೆದುಕೊಂಡು ಬಂದೆವು. ಆದರೆ ಸಂಜೆ ಹೊತ್ತಿಗೆ ಪೊಲೀಸರು ನಮ್ಮ ಮನೆಗೇ ಬಂದರು. ಪತ್ನಿಗೂ ಹೊಡೆಯಲು ಪ್ರಾರಂಭಿಸಿದರು. ಇದರಿಂದ ಭಯಗೊಂಡ ನನ್ನ ಮಗ ಓಡಿಹೋದ. ಆದರೆ ಕೊನೆಗೆ ಸಿಕ್ಕಿದ್ದು ಅವನ ಮೃತದೇಹ ಎಂದು ಕಣ್ಣಲ್ಲಿ ನೀರು ಹಾಕಿದ್ದಾರೆ.

ಇದನ್ನೂ ಓದಿ: ಜಯಪ್ರದಾ ಕುಟುಂಬದಿಂದ ಅನ್ಯಾಯವಾಗಿದೆ, ದಯವಿಟ್ಟು ನ್ಯಾಯ ಕೊಡಿಸಿ: ಸಂಸದೆ ಸುಮಲತಾ ಬಳಿ ಮನವಿ ಮಾಡಿದ ವಿಜಯಲಕ್ಷ್ಮಿ

Ten policemen Suspended from duty after a man commit Suicide In Uttar Pradesh

‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಫಿನಾಲೆ; ಗೆಲ್ಲೋದು ಯಾರು?
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮೌಢ್ಯಗಳನ್ನು ಅನುಸರಿಸಲ್ಲ ಅಂತ ಮತ್ತೊಮ್ಮೆ ಸಾಬೀತು ಮಾಡಿದ ಸಿದ್ದರಾಮಯ್ಯ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮಂತ್ರಾಲಯ ರಾಯರ ಮಠದ ಹುಂಡಿಯಲ್ಲಿ 4 ಕೋಟಿ ರೂಪಾಯಿಗೂ ಅಧಿಕ ಹಣ ಸಂಗ್ರಹ
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
ನಿಮ್ಮಲ್ಲಿನ ದುಶ್ಚಟಗಳನ್ನು ಇನ್ನೊಬ್ಬರಿಗೆ ಕಲಿಸಿದರೆ ಉಂಟಾಗುವ ಪರಿಣಾಮವೇನು?
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು