Explainer: ಮರೆತು ಹೋಗುವ ಹಕ್ಕು ಉಲ್ಲೇಖಿಸಿ ಕೋರ್ಟ್ ಮೆಟ್ಟಿಲೇರಿದ ಬಿಗ್ ಬಾಸ್ ಸ್ಪರ್ಧಿ; ಏನಿದು ಹಕ್ಕು? ಕಾರಣವೇನು?

ಅಶುತೋಶ್ ಕೌಶಿಕ್ 2009ರ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ. ಅದರಂತೆ, ಕುಡಿದು ವಾಹನ ಚಲಾವಣೆ ಮಾಡಿರುವ ಕಾರಣಕ್ಕೆ ಮುಂಬೈ ಟ್ರಾಫಿಕ್ ಪೊಲೀಸರು ಅವರನ್ನು ಪ್ರಶ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆತನ ಬಂಧನವಾದ 10 ದಿನಗಳ ಬಳಿಕ, ನ್ಯಾಯಾಲಯ ಆತನಿಗೆ ಒಂದು ದಿನದ ಬಂಧನ ಹಾಗೂ 3,100 ರೂಪಾಯಿಗಳ ದಂಡ ವಿಧಿಸಿತ್ತು.

Explainer: ಮರೆತು ಹೋಗುವ ಹಕ್ಕು ಉಲ್ಲೇಖಿಸಿ ಕೋರ್ಟ್ ಮೆಟ್ಟಿಲೇರಿದ ಬಿಗ್ ಬಾಸ್ ಸ್ಪರ್ಧಿ; ಏನಿದು ಹಕ್ಕು? ಕಾರಣವೇನು?
ಬಿಗ್​ ಬಾಸ್​ ವಿನ್ನರ್​ಗೆ ಸಿಕ್ತು 75 ಲಕ್ಷದ ಮನೆ; 16 ವರ್ಷದ ಪರಿಶ್ರಮಕ್ಕೆ ಸಿಕ್ಕ ಫಲ ಇದು
Follow us
ganapathi bhat
|

Updated on:Jul 27, 2021 | 6:30 PM

ಹಕ್ಕುಗಳ ಬಗ್ಗೆ ನಾವು ಬಹಳಷ್ಟು ಕೇಳಿರುತ್ತೇವೆ. ಮಕ್ಕಳ ಹಕ್ಕು, ಮಹಿಳಾ ಹಕ್ಕು, ಸಮಾನತೆ, ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಇತ್ಯಾದಿ. ಆದರೆ, ಮರೆತುಹೋಗುವ ಹಕ್ಕಿನ ಬಗ್ಗೆ ನಿಮಗೆ ಗೊತ್ತೇ? ಬಿಗ್ ಬಾಸ್ ಹಾಗೂ ಎಂಟಿವಿ ರೋಡೀಸ್​ನಲ್ಲಿ ಭಾಗವಹಿಸಿದ್ದ ಸ್ಪರ್ಧಿಯೊಬ್ಬ ತನ್ನ ಮರೆತುಹೋಗುವ ಹಕ್ಕನ್ನು ಉಲ್ಲೇಖಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಆಶ್ಚರ್ಯವಾದರೂ ವಿಚಾರ ಸತ್ಯ. ಮರೆತುಹೋಗುವ ಹಕ್ಕಿನ ಬಗ್ಗೆ, ಆ ಬಿಗ್ ಬಾಸ್ ಸ್ಪರ್ಧಿ ಈ ಹಕ್ಕನ್ನು ಹಿಡಿದು ಕೋರ್ಟ್ ಮೊರೆ ಹೋಗಿದ್ದೇಕೆ ಎಂಬ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

ಆತನ ಹೆಸರು ಅಶುತೋಶ್ ಕೌಶಿಕ್. ಅಶುತೋಶ್ 2008ರಲ್ಲಿ ಹಿಂದಿ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದ. ಜೊತೆಗೆ, ಎಂಟಿವಿ ರೋಡೀಸ್ 5.0 ನಲ್ಲಿ ಕೂಡ ಸ್ಪರ್ಧಿಯಾಗಿದ್ದ. ಇದೀಗ ಆತ ತನ್ನ ವಿಡಿಯೋ, ಫೋಟೊಗಳು ಮತ್ತು ಲೇಖನಗಳನ್ನು ಇಂಟರ್​ನೆಟ್​ನಿಂದ ತೆಗೆಯಬೇಕು ಎಂದು ಮರೆತುಹೋಗುವ ಹಕ್ಕನ್ನು ಉಲ್ಲೇಖಿಸಿ ಕೋರ್ಟ್​ನ್ನು ಕೋರಿಕೊಂಡಿದ್ದಾನೆ.

ಹೀಗೆ ದೆಹಲಿ ಹೈಕೋರ್ಟ್​ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಅಶುತೋಶ್, ಗೌಪ್ಯತೆಯ ಹಕ್ಕು ಜೊತೆಗೆ ಮರೆತುಹೋಗುವ ಹಕ್ಕನ್ನು ಕೂಡ ಉಲ್ಲೇಖಿಸಿದ್ದಾನೆ. ಇದು ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ಬದುಕುವ ಹಕ್ಕಿನೊಂದಿಗೆ ಬರುತ್ತದೆ.

ಅಶುತೋಶ್ ಕೌಶಿಕ್ ಹೀಗೆ ಅರ್ಜಿ ಸಲ್ಲಿಸಲು ಕಾರಣವೇನು? ಅಶುತೋಶ್ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿರುವಂತೆ, ಆತನ ಬಗೆಗೆ ಅಂತರ್ಜಾಲದ ವಿವಿಧ ಕಡೆಗಳಲ್ಲಿ ಇರುವ ವಿಡಿಯೋಗಳು, ಫೊಟೊ, ಲೇಖನ ಅಥವಾ ಪೋಸ್ಟ್​ಗಳು ಆತನಿಗೆ ಮಾನಸಿಕ ನೋವು ನೀಡಿದೆ. ತಾನು ತಪ್ಪಾಗಿ ನಡೆದುಕೊಂಡ ಸಣ್ಣಪುಟ್ಟ ವಿಚಾರಗಳೂ ಆನ್​ಲೈನ್ ವೇದಿಕೆಗಳಲ್ಲಿ, ವಿವಿಧ ಸರ್ಚ್ ಎಂಜಿನ್​ಗಳಲ್ಲಿ ಈಗಲೂ ಕಾಣಸಿಗುತ್ತದೆ ಮತ್ತು ಹರಿದಾಡುತ್ತದೆ. ದಶಕದ ಹಿಂದಿನ ಈ ಘಟನೆಗಳು ತನಗೆ ಮಾನಸಿಕ ಹಿಂಸೆ ನೀಡಿದೆ ಎಂದು ಅಶುತೋಶ್ ಉಲ್ಲೇಖಿಸಿದ್ದಾನೆ.

ಅರ್ಜಿದಾರ ಅಶುತೋಶ್ ಕೌಶಿಕ್ ಅರ್ಜಿಯಲ್ಲಿ ಹೇಳಿರುವಂತೆ, ಆತನ ವೈಯಕ್ತಿಕ ಬದುಕಿನ ತೊಡಕುಗಳು ಸಾರ್ವಜನಿಕರ ಜ್ಞಾನವಾಗಿ ಹಾಗೂ ನೆನಪಾಗಿ ಮುಂದಿನ ತಲೆಮಾರಿಗೂ ಉಳಿದುಕೊಳ್ಳುತ್ತದೆ. ಜೊತೆಗೆ, ಸಂವಿಧಾನದ ಆರ್ಟಿಕಲ್ 21ರಲ್ಲಿ ಹೇಳಿರುವ ಅಂಶಗಳನ್ನು ಉಲ್ಲೇಖಿಸಲಾಗಿದೆ. ಹಾಗೂ ಮರೆತುಹೋಗುವ ಹಕ್ಕು ಈ ಪ್ರಕರಣದಲ್ಲಿ ಮುಖ್ಯವಾಗುತ್ತದೆ ಎಂದೂ ತಿಳಿಸಲಾಗಿದೆ.

ಅಶುತೋಶ್ ಕೌಶಿಕ್ 2009ರ ಘಟನೆಯೊಂದನ್ನು ಉಲ್ಲೇಖಿಸಿದ್ದಾರೆ. ಅದರಂತೆ, ಕುಡಿದು ವಾಹನ ಚಲಾವಣೆ ಮಾಡಿರುವ ಕಾರಣಕ್ಕೆ ಮುಂಬೈ ಟ್ರಾಫಿಕ್ ಪೊಲೀಸರು ಅವರನ್ನು ಪ್ರಶ್ನಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಆತನ ಬಂಧನವಾದ 10 ದಿನಗಳ ಬಳಿಕ, ನ್ಯಾಯಾಲಯ ಆತನಿಗೆ ಒಂದು ದಿನದ ಬಂಧನ ಹಾಗೂ 3,100 ರೂಪಾಯಿಗಳ ದಂಡ ವಿಧಿಸಿತ್ತು. ಅಲ್ಲದೆ ಎರಡು ವರ್ಷಗಳ ವರೆಗೆ ಆತನ ಡ್ರೈವಿಂಗ್ ಲೈಸೆನ್ಸ್ ಕೂಡ ರದ್ದುಪಡಿಸಲಾಗಿತ್ತು. ಡ್ರೈವಿಂಗ್ ಲೈಸನ್ಸ್ ಇಲ್ಲದಿರುವುದು, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿರುವುದು ಹಾಗೂ ಪೊಲೀಸರ ಮಾತು ಕೇಳದೆ ಅಸಮರ್ಪಕ ರೀತಿಯಿಂದ ವರ್ತಿಸಿರುವ ಪ್ರಕರಣ ಆಗ ದಾಖಲಾಗಿತ್ತು.

ಭಾರತದಲ್ಲಿ ಮರೆತುಹೋಗುವ ಹಕ್ಕು ಒಬ್ಬಾತನ ಗೌಪ್ಯತೆಯ ಹಕ್ಕಿನ ಅಡಿಯಲ್ಲಿ ಮರೆತುಹೋಗುವ ಹಕ್ಕು ಕೂಡ ಬರುತ್ತದೆ. ಅದನ್ನು ಸಂಸತ್ ಇನ್ನಷ್ಟೇ ಅನುಮೋದನೆ ಸೂಚಿಸಬೇಕಿರುವ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್ ನೋಡಿಕೊಳ್ಳಬೇಕಿದೆ. 2017ರಲ್ಲಿ, ಸುಪ್ರೀಂ ಕೋರ್ಟ್, ಗೌಪ್ಯತಾ ಹಕ್ಕನ್ನು ಮೂಲಭೂತ ಹಕ್ಕು ಎಂದು ಮಹತ್ವದ ತೀರ್ಪು ನೀಡಿತು. ಗೌಪ್ಯತೆಯ ಹಕ್ಕು ಎಂಬುದು ಬದುಕುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಆಂತರಿಕ ಭಾಗವಾಗಿ ಆರ್ಟಿಕಲ್ 21ರ ಅಡಿಯಲ್ಲಿ ಮತ್ತು ಸಂವಿಧಾನದ 3ನೇ ಪರಿಚ್ಛೇದದಲ್ಲಿ ನೀಡಿರುವ ಸ್ವಾತಂತ್ರ್ಯದ ಭಾಗವಾಗಿ ಸಂರಕ್ಷಿಸಲ್ಪಡುತ್ತದೆ ಎಂದು ಕೋರ್ಟ್ ಹೇಳಿತು.

ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆ ಏನು ಹೇಳುತ್ತದೆ? ವೈಯಕ್ತಿಕ ಮಾಹಿತಿ ಸಂರಕ್ಷಣಾ ಕಾಯ್ದೆಯು ಲೋಕಸಭೆಯಲ್ಲಿ 2019 ಡಿಸೆಂಬರ್ 11ರಂದು ಪರಿಚಯಿಸಲ್ಪಟ್ಟಿತು. ವೈಯಕ್ತಿಕ ಮಾಹಿತಿಯನ್ನು ರಕ್ಷಿಸುವ ಅವಕಾಶವನ್ನು ಅಳವಡಿಸಲು ಶ್ರಮಿಸುವುದು ಅದರ ಉದ್ದೇಶವಾಗಿದೆ.

ಕಾಯ್ದೆಯ ಕರಡು ಪ್ರತಿಯ 4ನೇ ವಿಭಾಗ ಅನುಚ್ಛೇದ 20ರಂತೆ ಮಾಹಿತಿ ನೀತಿಗಳ ಹಕ್ಕು ಮರೆತುಹೋಗುವ ಹಕ್ಕಿನ ಬಗ್ಗೆಯೂ ಉಲ್ಲೇಖಿಸುತ್ತದೆ. ಅದರಂತೆ, ಯಾವೊಬ್ಬ ವ್ಯಕ್ತಿಯ ಡಾಟಾ ಅಲ್ಲಿದೆಯೋ ಅವರಿಗೆ ತಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಆಗದಂತೆ ತಡೆಯುವ ಅಥವಾ ಹೆಚ್ಚು ಬಹಿರಂಗವಾಗದಂತೆ ನಿಬಂಧನೆಗಳನ್ನು ಹೇಳುವ ಹಕ್ಕಿದೆ.

ಹಾಗೆಂದರೆ, ಮರೆತುಹೋಗುವ ಹಕ್ಕಿನ ಮೂಲಕ, ಬಳಕೆದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ನಿರ್ಬಂಧ, ಡಿಲೀಟ್, ನಿಬಂಧನೆ ಅಥವಾ ಸರಿಪಡಿಸಲೂ ಬಹುದು. ಇದು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸಿ ಪ್ರದರ್ಶಿಸುವ ವೇದಿಕೆಗಾದರೂ ಅನ್ವಯವಾಗುತ್ತದೆ.

ಇಷ್ಟಾದರೂ ಕೂಡ ವೈಯಕ್ತಿಕ ಮಾಹಿತಿಯನ್ನು ಸ್ವತಂತ್ರವಾಗಿ ಆ ವ್ಯಕ್ತಿಯೇ ನಿರ್ಧರಿಸುವುದು ಸಾಧ್ಯವಿಲ್ಲ. ಡಾಟಾ ಪ್ರೊಟೆಕ್ಷನ್ ಅಥಾರಿಟಿ (Data Protection Authority- DPA) ಅದನ್ನು ನೋಡಿಕೊಳ್ಳುತ್ತದೆ. ಅಂದರೆ ಒಬ್ಬನ ಕೋರಿಕೆ ಅಥವಾ ಆಕ್ಷೇಪದ ಮೇರೆಗೆ ಡಿಪಿಎ ಡಾಟಾ ತೆಗೆಯುವ ಬಗ್ಗೆ ಅಧಿಕೃತವಾಗಿ ಸೂಚಿಸಬಹುದಷ್ಟೆ.

ಇದನ್ನೂ ಓದಿ: Explainer: ಸಿಡಿಲು, ಮಿಂಚು ಎಂದರೇನು? ಸಿಡಿಲು ಬಡಿದು ಸಾವು ಸಂಭವಿಸುವ ಸಾಧ್ಯತೆ ಎಷ್ಟಿರುತ್ತದೆ? ಇಲ್ಲಿದೆ ವಿವರ

Explainer ಅಸ್ಸಾಂ- ಮಿಜೋರಾಂ ಗಡಿ ಸಂಘರ್ಷದಲ್ಲಿ 6 ಪೊಲೀಸರು ಬಲಿ, 80ಕ್ಕೂ ಹೆಚ್ಚು ಮಂದಿಗೆ ಗಾಯ; ಏನಿದು ಗಡಿ ವಿವಾದ?

(What is Right to be Forgotten in Indian Context Why Bigg Boss Ashutosh Kaushik seeking for it Explained)

Published On - 6:12 pm, Tue, 27 July 21

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ