ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಒದೆಯಲು ಬಂದರು ಎಂದು ಕಿರುಚಾಡಿದ ವ್ಯಕ್ತಿ
ಆ ವ್ಯಕ್ತಿ ಯಾಕೆ ಕೂಗಾಡಿದರು ಅನ್ನೋದು ಬಹಳ ಮುಖ್ಯ. ಪೊಲೀಸ್ ಭದ್ರತೆಯುಳ್ಳ ಡಿಸಿ ಕಚೇರಿಯಲ್ಲಿ ಯಾರೂ ಹಾಗೆ ಸುಖಾಸುಮ್ಮನೆ ಕಿರುಚಾಡಲ್ಲ. ಅಧಿಕಾರಿ ಒದೆಯಲು ಬಂದರು ಎಂದು ವ್ಯಕ್ತಿ ಮಾಡುತ್ತಿರುವ ಆರೋಪ ನಿಜವೇ ಅಗಿದ್ದರೆ ಅದು ಗುರುತರವಾದ ಅರೋಪ. ಎಲ್ಲರೂ ವ್ಯಕ್ತಿಯ ಬಾಯಿ ಮುಚ್ಚಿಸಲು ನೋಡುತ್ತಾರೆಯೇ ಹೊರತು ಯಾರೂ ಅವರ ಪರವಾಗಿ ನಿಂತು ಧ್ವನಿಯೆತ್ತಲ್ಲ.
ಬೆಂಗಳೂರು, ಜೂನ್ 23: ಇದೊಂದು ಅಸಾಮಾನ್ಯ ಘಟನೆ. ಬೆಂಗಳೂರು ನಗರ ಜಿಲ್ಲಾಧಿಕಾರಿ (Bengaluru Urban DC office) ಕಚೇರಿಗೆ ಯಾವುದೋ ಕೆಲಸದ ನಿಮಿತ್ತ ಬಂದಿದ್ದ ವ್ಯಕ್ತಿಯೊಬ್ಬರು ಕಚೇರಿ ಆವರಣದಲ್ಲಿ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಮನಬಂದಂತೆ ಕಿರುಚಾಡಿದ ಪ್ರಸಂಗ ಇಂದು ಮಧ್ಯಾಹ್ನ ನಡೆಯಿತು. ಭಯಂಕರ ಕೋಪದಲ್ಲಿರುವ ವ್ಯಕ್ತಿ ಮಾಡುತ್ತಿರುವ ಅರೋಪವೆಂದರೆ, ಅವರು ಮೊಬೈಲ್ ನಲ್ಲಿ ದೇಶಭಕ್ತಿ ಕೇಳುತ್ತಾ ಕುಳಿತಿದ್ದಾಗ ಅಧಿಕಾರಿಯೊಬ್ಬರು ತನ್ನನ್ನು ಬೂಟುಗಾಲಲ್ಲಿ ಒದೆಯಲು ಬಂದರು ಅನ್ನೋದು. ಒದೆಯಲು ಬಂದ ಅಧಿಕಾರಿ ಯಾರು, ಅವರಿಬ್ಬರ ನಡುವೆ ವಾಗ್ವಾದವೇನಾದರೂ ನಡೆಯಿತೇ ಅನ್ನೋದನ್ನು ವ್ಯಕ್ತಿ ಹೇಳುವುದಿಲ್ಲ. ತಮ್ಮನ್ನು ಆಚೆ ಕಳಿಸಲು ಬಂದ ಪೊಲೀಸರಿಗೆ ಅವರು ನನ್ನನ್ನು ಯಾಕೆ ತಳ್ಳುತ್ತೀರಿ, ಅಧಿಕಾರಿಯನ್ನು ಹೊರ ಕರೆತಂದು ಅವನನ್ನೇ ಕೇಳಿ ಎಂದು ಜೋರಾಗಿ ಕೂಗಾಡುತ್ತಾರೆ.
ಇದನ್ನೂ ಓದಿ: ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ