IND vs ENG: ಗವಾಸ್ಕರ್ ಬೇಡಿಕೆಯನ್ನು ಈಡೇರಿಸದ ರಿಷಭ್ ಪಂತ್; ವಿಡಿಯೋ ನೋಡಿ
Rishabh Pant: ಲೀಡ್ಸ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಮತ್ತೊಂದು ಶತಕ ಬಾರಿಸಿ ಇತಿಹಾಸ ನಿರ್ಮಿಸಿದರು. 130 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಆದರೆ ಅವರ ಸಾಮಾನ್ಯವಾದ ಪಲ್ಟಿ ಸಂಭ್ರಮ ಇರಲಿಲ್ಲ. ಹೀಗಾಗಿ ಸುನಿಲ್ ಗವಾಸ್ಕರ್ ಪಲ್ಟಿ ಹೊಡೆಯುವಂತೆ ಮನವಿ ಮಾಡಿದರು. ಆದರೆ ಪಂತ್ ನಂತರ ಪಲ್ಟಿ ಹೊಡೆಯುವುದಾಗಿ ಭರವಸೆ ನೀಡಿದರು. ಈ ಘಟನೆಯ ವಿಡಿಯೋ ವೈರಲ್ ಆಗಿದೆ.
ಲೀಡ್ಸ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ರಿಷಭ್ ಪಂತ್ ಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ, ಪಂತ್ ಕೇವಲ 130 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ತಮ್ಮ ಹೆಸರಿನಲ್ಲಿ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಆದಾಗ್ಯೂ ಪಂತ್ ಅವರ ಈ ಶತಕದ ನಂತರ ಯಾರೂ ನಿರೀಕ್ಷಿಸದ ಘಟನೆಯೊಂದು ನಡೆಯಿತು. ವಾಸ್ತವವಾಗಿ ಶತಕ ಬಾರಿಸಿದ ನಂತರ, ರಿಷಭ್ ಪಂತ್ ತಮ್ಮದೇ ಆದ ಶೈಲಿಯಲ್ಲಿ ಪಲ್ಟಿ ಹೊಡೆದು ಸಂಭ್ರಮಿಸುತ್ತಾರೆ. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ನಂತರ ಅವರು ಹಾಗೆ ಮಾಡಲಿಲ್ಲ. ಇಲ್ಲಿ ಇನ್ನೊಂದು ಸಂಗತಿಯೆಂದರೆ ತಂಡದ ಮಾಜಿ ಲೆಜೆಂಡರಿ ಆಟಗಾರ ಸುನಿಲ್ ಗವಾಸ್ಕರ್, ಪಂತ್ರನ್ನು ಪಲ್ಟಿ ಹೊಡೆಯುವಂತೆ ಹಲವು ಬಾರಿ ಕೇಳಿಕೊಂಡರು. ಆದರೆ ಶತಕದ ಇನ್ನಿಂಗ್ಸ್‌ನಲ್ಲಿ ತುಂಬಾ ಸುಸ್ತಾದವರಂತೆ ಕಾಣುತ್ತಿದ್ದ ಪಂತ್, ಆ ನಂತರ ಪಲ್ಟಿ ಹೊಡೆಯುವುದಾಗಿ ಗವಾಸ್ಕರ್ ಕಡೆಗೆ ಸನ್ನೆ ಮಾಡಿ ಹೇಳಿದರು. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದೆ.

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ

ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು

ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
