ವಂಚನೆ ಪ್ರಕರಣದಲ್ಲಿ ಯಾರೆಲ್ಲ ಭಾಗಿ ಅಂತ ಗೊತ್ತಿಲ್ಲ, ಈಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದೇನೆ: ಡಿಕೆ ಸುರೇಶ್
ಕಾನೂನನ್ನು ಗೌರವಿಸುವುದು ಮತ್ತು ಅದರ ಪಾಲನೆ ತಮ್ಮ ಕರ್ತವ್ಯವಾಗಿದೆ, ಜಾರಿ ನಿರ್ದೇಶನಾಲಯ ನಡೆಸುವ ವಿಚಾರಣೆ ಮತ್ತು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದ ಸುರೇಶ್ ತನ್ನನ್ನು ಟಾರ್ಗೆಟ್ ಮಾಡಲಾಗಿದೆಯೇ ಅಥವಾ ತನ್ನ ವಿಚಾರಣೆ ಒಂದು ರಾಜಕೀಯ ಪಿತೂರಿಯ ಭಾಗವೇ ಮೊದಲಾದ ಸಂಗತಿಗಳ ಬಗ್ಗೆ ಈಗಲೇ ಮಾತಾಡೋದಿಲ್ಲ ಎಂದರು.
ಬೆಂಗಳೂರು, ಜೂನ್ 23: ಐಶ್ವರ್ಯ ಗೌಡ ವಂಚನೆ ಪ್ರಕರಣದಲ್ಲಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ವಿಚಾರಣೆಗೊಳಗಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಮುಲ್ ಅಧ್ಯಕ್ಷ ಡಿಕೆ ಸುರೇಶ್, ಐಶ್ವರ್ಯ ಗೌಡ ವಂಚನೆ (Aishwarya Gowda fraud case) ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಗೊತ್ತಿಲ್ಲ, ಈಡಿಯವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ ಎಂದು ಹೇಳಿದರು. ಐಶ್ವರ್ಯ ಗೌಡ ತಮ್ಮ ಕ್ಷೇತ್ರದವರು ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಭೇಟಿಯಾಗಿದ್ದರು, ಅದರ ನಂತರವೂ ತಾನು ಭಾಗಿಯಾದ ಒಂದೆರಡು ಕಾರ್ಯಕ್ರಮಗಳಲ್ಲಿ ಅವರಿದ್ದರು, ಅವರ ಬ್ಯಾಂಕ್ ವ್ಯವಹಾರ ಮತ್ತು ಆದಾಯ ತೆರಿಗೆ ವಂಚನೆ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಸುರೇಶ್ ಹೇಳಿದರು.
ಇದನ್ನೂ ಓದಿ: ಚಿನ್ನ ವಂಚನೆ ಕೇಸ್! ಐಶ್ವರ್ಯಾ ಗೌಡ ವಿರುದ್ಧ ಪೊಲೀಸ್ ಆಯುಕ್ತರಿಗೆ ಡಿಕೆ ಸುರೇಶ್ ದೂರು
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ