ತೀವ್ರ ಸ್ವರೂಪ ಪಡೆದ ಹಲ್ಲೆ ಕೇಸ್: ಅನಂತ್ ಕುಮಾರ್ ಹೆಗಡೆ ಬಂಧಿಸುವಂತೆ ಪ್ರತಿಭಟನೆ
ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಪುತ್ರ, ಗನ್‌ಮ್ಯಾನ್, ಚಾಲಕನನ ಹಲ್ಲೆ ಪ್ರಕರಣ ತೋವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅನಂತ್ ಕುಮಾರ್ ಹೆಗಡೆ ಚಾಲಕ ಕಾರು ನಿಲ್ಲಿಸಿ, ಮತ್ತೋರ್ವ ಕಾರಿನವರ ಮೇಲೆ ಹಲ್ಲೆ ನಡೆಸಿದ್ದಾರೆ.
ನೆಲಮಂಗಲ, (ಜೂನ್ 23): ಉತ್ತರ ಕನ್ನಡ ಕ್ಷೇತ್ರದ ಮಾಜಿ ಸಂಸದ ಅನಂತ ಕುಮಾರ್ ಹೆಗಡೆ ಪುತ್ರ, ಗನ್‌ಮ್ಯಾನ್, ಚಾಲಕನನ ಹಲ್ಲೆ ಪ್ರಕರಣ ತೋವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಕಾರು ಓವರ್ ಟೇಕ್ ಮಾಡಿದ್ದಕ್ಕೆ ಅನಂತ್ ಕುಮಾರ್ ಹೆಗಡೆ ಚಾಲಕ ಕಾರು ನಿಲ್ಲಿಸಿ, ಮತ್ತೋರ್ವ ಕಾರಿನವರ ಮೇಲೆ ಹಲ್ಲೆ ನಡೆಸಿದ್ದಾರೆ. ಚಾಲಕ ಹಾಗೂ ಗನ್ ಮ್ಯಾನ್ ಸೇರಿಕೊಂಡು ಹೊಡೆದಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂದ ಅನಂತ್ ಕುಮಾರ್ ಹೆಗಡೆ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಳಿಕ ಪೊಲೀಸ್ ಠಾಣೆಯಿಂದ ಅನಂತ ಕುಮಾರ್ ಹೆಗಡೆ ಅವರನ್ನು ಬಿಟ್ಟು ಕಳುಹಿಸಿದ್ದಕ್ಕೆ ಹಲ್ಲೆಗೊಳಗಾದ ಕುಟುಂಬದವರು ದಾಬಸ್‌ಪೇಟೆ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅನಂತ್‌ಕುಮಾರ್ ಹೆಗಡೆ ಬಂಧಿಸುವಂತೆ ಆಗ್ರಹಿಸಿ ಧರಣಿ ನಡೆಸುತ್ತಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ಮನವೊಲಿಸುತ್ತಿದ್ದಾರೆ.