ಬಂಗಾಳದ ಕಾಲಿಗಂಜ್‌ನಲ್ಲಿ ಮತಎಣಿಕೆ ವೇಳೆ ಬಾಂಬ್ ಸ್ಫೋಟ; 13 ವರ್ಷದ ಬಾಲಕಿ ಸಾವು
ಪಶ್ಚಿಮ ಬಂಗಾಳದ ಕಾಲಿಗಂಜ್‌ನಲ್ಲಿ ಉಪಚುನಾವಣೆಯ ಫಲಿತಾಂಶದ ದಿನವಾದ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಈ ವೇಳೆ 13 ವರ್ಷದ ಬಾಲಕಿ ತಮನ್ನಾ ಖಾತುನ್ ಸಾವನ್ನಪ್ಪಿದ್ದಾರೆ. ಇದು ರಾಜಕೀಯ ಆಕ್ರೋಶವನ್ನು ಹುಟ್ಟುಹಾಕಿದೆ. ಇದು ಚುನಾವಣೆಯ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಈ ಘಟನೆಯು ಪಶ್ಚಿಮ ಬಂಗಾಳದಲ್ಲಿ ಪದೇ ಪದೇ ಚುನಾವಣಾ ಅಶಾಂತಿ ಉಂಟಾಗುತ್ತಿರುವ ಬಗ್ಗೆ ಕಳವಳವನ್ನು ಹೆಚ್ಚಿಸಿದೆ. ಈ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆದಿದೆ.

ಕೊಲ್ಕತ್ತಾ, ಜೂನ್ 23: ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ಕಾಲಿಗಂಜ್ (Kaliganj) ವಿಧಾನಸಭಾ ಕ್ಷೇತ್ರದ ಪಲಾಶಿ ಬಳಿಯ ಮುಲುಂಡಿ ಗ್ರಾಮದಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು, ಇದರಿಂದಾಗಿ 13 ವರ್ಷದ ವಿದ್ಯಾರ್ಥಿನಿ ತಮನ್ನಾ ಖಾತುನ್ ಸಾವನ್ನಪ್ಪಿದ್ದಾಳೆ. ಕಾಲಿಗಂಜ್ ವಿಧಾನಸಭಾ ಉಪಚುನಾವಣೆಯ ಫಲಿತಾಂಶಗಳ ಘೋಷಣೆಯೊಂದಿಗೆ ಈ ಘಟನೆ ಹಗಲು ಹೊತ್ತಿನಲ್ಲಿ ಸಂಭವಿಸಿದೆ.
ಈ ಸ್ಫೋಟದ ನಂತರ ಜನರು ಭಯಭೀತರಾದರು. ಜೋರಾದ ಸ್ಫೋಟಗಳು ಕೇಳಿಬಂದವು ಎಂದು ನಿವಾಸಿಗಳು ಹೇಳಿದ್ದಾರೆ, ಇದು ಅವ್ಯವಸ್ಥೆ ಮತ್ತು ಭಯಕ್ಕೆ ಕಾರಣವಾಯಿತು. ಬಾಂಬ್ ಸ್ಫೋಟ ಸಂಭವಿಸಿದಾಗ ಮೃತ ಬಾಲಕಿ ಸ್ಫೋಟದ ಸ್ಥಳದ ಬಳಿಯಲ್ಲೇ ಇದ್ದಳು. ಇದರಿಂದಾಗಿ ಆಕೆಗೆ ಮಾರಣಾಂತಿಕ ಗಾಯಗಳಾಗಿವೆ.
#WATCH | Kolkata, West Bengal | BJP holds protest against the death of a 13-year-old girl in an explosion during the TMC-held celebrations after winning the Kaliganj assembly bye-elections pic.twitter.com/8LFdqNqbGS
— ANI (@ANI) June 23, 2025
ಎಡಪಂಥೀಯ ಬೆಂಬಲಿಗರೊಂದಿಗೆ ಕುಟುಂಬ ಸಂಬಂಧ ಹೊಂದಿದೆ ಎಂದು ಸಿಪಿಐ(ಎಂ) ಹೇಳಿಕೊಂಡಿದೆ. ಸಂತ್ರಸ್ತರು ತಮ್ಮ ಪಕ್ಷದ ಕಾರ್ಯಕರ್ತರೊಬ್ಬರ ಕುಟುಂಬಕ್ಕೆ ಸೇರಿದವರು ಎಂದು ಎಡಪಂಥೀಯ ನಾಯಕರು, ವಿಶೇಷವಾಗಿ ಸಿಪಿಐ(ಎಂ) ಆರೋಪಿಸಿದ್ದಾರೆ. ಕುಟುಂಬದ ರಾಜಕೀಯ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲವಾದರೂ, ಈ ಆರೋಪವು ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಭಾರತದ ಪ್ರಮುಖ ಆಸ್ತಿ; ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ಶಶಿ ತರೂರ್
ಮಮತಾ ಬ್ಯಾನರ್ಜಿ ಸಂತಾಪ:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್)ನಲ್ಲಿ ಈ ಘಟನೆಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. “ಕೃಷ್ಣನಗರ ಪೊಲೀಸ್ ಜಿಲ್ಲೆಯ ಬರೋಚಂದ್‌ಗರ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಬಾಲಕಿಯೊಬ್ಬಳು ಸಾವನ್ನಪ್ಪಿದ್ದರಿಂದ ನನಗೆ ಆಘಾತವಾಗಿದೆ ಮತ್ತು ತೀವ್ರ ದುಃಖವಾಗಿದೆ. ಅವರ ದುಃಖದ ಸಮಯದಲ್ಲಿ ನನ್ನ ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ. ಪೊಲೀಸರು ಆದಷ್ಟು ಬೇಗ ಅಪರಾಧಿಗಳ ವಿರುದ್ಧ ಬಲವಾದ ಮತ್ತು ನಿರ್ಣಾಯಕ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
TMC’s celebration ends with blood on its hands. Again.
From TMC’s victory rally in Muslim-majority Kaliganj bypoll, bombs were hurled, and in the chaos, a little girl—Tamanna Khatun, a Class 4 student—was killed.
Let that sink in.
A child. Murdered. While TMC danced to the… https://t.co/AC7ghPNti2
— Amit Malviya (@amitmalviya) June 23, 2025
ಇದಕ್ಕೆ ಕಾರಣವಾದವರನ್ನು ಗುರುತಿಸಲು ಮತ್ತು ಕಠಿಣ ಶಿಕ್ಷೆಯನ್ನು ನೀಡಲು ಸಿಎಂ ಮಮತಾ ಬ್ಯಾನರ್ಜಿ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ. ಬಾಂಬ್ ಸ್ಫೋಟದ ಕಾರಣ ಮತ್ತು ಚುನಾವಣಾ ನಂತರದ ಹಿಂಸಾಚಾರದ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ತೃಣಮೂಲ ಕಾಂಗ್ರೆಸ್ ಮೇಲೆ ತೀವ್ರ ದಾಳಿ ನಡೆಸಿದ್ದಾರೆ. ಬಾಲಕಿಯ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಟಿಎಂಸಿಯನ್ನೇ ನೇರವಾಗಿ ದೂಷಿಸಿದ್ದಾರೆ. “ಟಿಎಂಸಿಯ ಆಚರಣೆಯು ಕೈಯಲ್ಲಿ ರಕ್ತದೊಂದಿಗೆ ಕೊನೆಗೊಳ್ಳುತ್ತದೆ. ಮುಸ್ಲಿಂ ಬಹುಸಂಖ್ಯಾತ ಕಾಲಿಗಂಜ್ ಉಪಚುನಾವಣೆಯಲ್ಲಿ ಟಿಎಂಸಿಯ ವಿಜಯೋತ್ಸವದ ರ್ಯಾಲಿಯಲ್ಲಿ ಬಾಂಬ್‌ಗಳನ್ನು ಎಸೆಯಲಾಯಿತು. 13 ವರ್ಷದ ವಿದ್ಯಾರ್ಥಿನಿ ತಮನ್ನಾ ಖಾತುನ್ ಎಂಬ ಪುಟ್ಟ ಹುಡುಗಿಯನ್ನು ಕೊಲ್ಲಲಾಯಿತು. ಟಿಎಂಸಿ ರಾಜಕೀಯ ಪಕ್ಷವಲ್ಲ. ಅದು ರಣಹದ್ದುಗಳ ಗುಂಪಾಗಿದೆ. ಅವರು ರಕ್ತ ಸುರಿಸದೆ ಉಪಚುನಾವಣೆಯನ್ನು ಸಹ ಗೆಲ್ಲಲು ಸಾಧ್ಯವಿಲ್ಲ” ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:32 pm, Mon, 23 June 25








