Gujarat Plane Crash: ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಅಪ್ಪಳಿಸಿದ್ದರಿಂದ ಬಾಂಬ್ ಸ್ಫೋಟಿಸಿದಂಥ ಸದ್ದು
ಡಿಜಿಸಿಎ ಅಧಿಕಾರಿಗಳು ಇವತ್ತು ಕೂಡ ತಪಾಸಣೆ ಮುಂದುವರಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ್ದರು ಮತ್ತು ಅಧಿಕಾರಿ ಹಾಗೂ ಸಚಿವರೊಂದಿಗೆ ಸಭೆ ಕೂಡ ನಡೆಸಿದ್ದರು. ಈಗಾಗಲೇ ವರದಿಯಾಗಿರುವಂತೆ ವಿಮಾನದ ಬ್ಲ್ಯಾಕ್ ಬಾಕ್ಸ್ ಸಿಕ್ಕಿದೆ, ಅದರ ಮೂಲಕ ದುರಂತಕ್ಕೆ ನಿಖರವಾದ ಕಾರಣಗಳ್ಯಾವು ಅನ್ನೋದು ಗೊತ್ತಾಗುತ್ತದೆ. ಆದರೆ ಮಾಹಿತಿಯನ್ನೆಲ್ಲ ಸಂಗ್ರಹಿಸಲು ಕನಿಷ್ಠ 30 ದಿನ ಬೇಕಾಗುತ್ತದೆ.
ಅಹಮದಾಬಾದ್, ಜೂನ್ 14: ಗುರುವಾರ ಮಧ್ಯಾಹ್ನ ನಗರದಲ್ಲಿರುವ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್ (BJ Medical College Hostel) ಮೇಲೆ ಏರ್ ಇಂಡಿಯ ಬೋಯಿಂಗ್ 787 ಡ್ರೀಮ್ಲೈನರ್ ವಿಮಾನ ಅಪ್ಪಳಿಸಿ ಸಂಭವಿಸಿದ ದುರಂತದಲ್ಲಿ ಸಾಕಷ್ಟು ಸಾವುನೋವು ಉಂಟಾಗಿವೆ. ನಮ್ಮ ವರದಿಗಾರ ದುರ್ಘಟನೆ ನಡೆದ ಸ್ಥಳದ ತೀರಹತ್ತಿರದಿಂದ ಮಾಹಿತಿ ನೀಡುತ್ತಿದ್ದಾರೆ. ವಿಮಾನ ಅಪ್ಪಳಿಸಿದ್ದರಿಂದ ಹಾಸ್ಟೆಲ್ ಕಟ್ಟಡ ಧ್ವಂಸಗೊಂಡಿದೆ ಮತ್ತು ವಿಮಾನದ ಹಿಂಭಾಗ ಟೆರೇಸ್ ಮೇಲಿರುವುದನ್ನು ನೋಡಬಹುದು. ವರದಿಗಾರ ಹೇಳುವಂತೆ ಲಂಚ್ ಸಮಯವಾಗಿದ್ದರಿಂದ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಊಟ ಮಾಡುತ್ತಿದ್ದರು. ದುರಂತದಲ್ಲಿ ಸುಮಾರು 20 ವಿದ್ಯಾರ್ಥಿಗಳು ಸಾವನಪ್ಪಿರಬಹುದೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಏರ್ ಇಂಡಿಯಾದ ಬೋಯಿಂಗ್ ವಿಮಾನದಲ್ಲಿ ಸುರಕ್ಷತಾ ಕ್ರಮ ಹೆಚ್ಚಿಸಲು ಡಿಜಿಸಿಎ ಆದೇಶ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ