AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shradhanjali Scheme: ಅಸ್ಸಾಮಿಗಳು ರಾಜ್ಯದ ಹೊರಗೆ ಮೃತಪಟ್ಟರೆ ಶವವನ್ನು ಮನೆಗೆ ತಲುಪಿಸುವ ಯೋಜನೆ ‘ಶ್ರದ್ಧಾಂಜಲಿ’

ಅಸ್ಸಾಂ ಸರ್ಕಾರವು ವಿಶೇಷ ಯೋಜನೆಯೊಂದಕ್ಕೆ ಅನುಮೋದನೆ ನೀಡಿದೆ. ಅದುವೇ ‘ಶ್ರದ್ಧಾಂಜಲಿ’. ಈ ಯೋಜನೆಯು ಕಡಿಮೆ ಸಂಬಳಕ್ಕೆ ರಾಜ್ಯದ ಹೊರಗೆ ದುಡಿಯುತ್ತಿದ್ದು, ಅಕಾಲಿಕವಾಗಿ ಮರಣಹೊಂದಿದರೆ ಅವರ ಶವವನ್ನು ಉಚಿತವಾಗಿ ಅವರ ಮನೆಗೆ ಕಳುಹಿಸುವ ಯೋಜನೆಯಾಗಿದೆ. ರಾಜ್ಯದ ಹೊರಗೆ ಚಿಕಿತ್ಸೆ ಪಡೆಯುತ್ತಿರುವವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದರೆ ಈ ಯೋಜನೆಯು ಅವರಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಚಾನಕ್ಕಾಗಿ ಸಾವು ಸಂಭವಿಸಿದರೆ ಮಾತ್ರ ವಿಮೆ ಅನ್ವಯವಾಗುತ್ತದೆ.

Shradhanjali Scheme: ಅಸ್ಸಾಮಿಗಳು ರಾಜ್ಯದ ಹೊರಗೆ ಮೃತಪಟ್ಟರೆ ಶವವನ್ನು ಮನೆಗೆ ತಲುಪಿಸುವ ಯೋಜನೆ ‘ಶ್ರದ್ಧಾಂಜಲಿ’
ಹಿಮಂತ ಬಿಸ್ವಾ ಶರ್ಮಾ
ನಯನಾ ರಾಜೀವ್
|

Updated on:Jun 23, 2025 | 2:28 PM

Share

ಗುವಾಹಟಿ, ಜೂನ್ 23: ಅಸ್ಸಾಂ(Assam) ಸರ್ಕಾರವು ವಿಶೇಷ ಯೋಜನೆಯೊಂದಕ್ಕೆ ಅನುಮೋದನೆ ನೀಡಿದೆ. ಅದುವೇ ‘ಶ್ರದ್ಧಾಂಜಲಿ’. ಈ ಯೋಜನೆಯು ಕಡಿಮೆ ಸಂಬಳಕ್ಕೆ ರಾಜ್ಯದ ಹೊರಗೆ ದುಡಿಯುತ್ತಿರುವ ಕಾರ್ಮಿಕ, ಅಕಾಲಿಕವಾಗಿ ಮರಣಹೊಂದಿದರೆ ಅವರ ಶವವನ್ನು ಉಚಿತವಾಗಿ ಅವರ ಮನೆಗೆ ಕಳುಹಿಸುವ ಯೋಜನೆ ಇದಾಗಿದೆ.

ರಾಜ್ಯದ ಹೊರಗೆ ಚಿಕಿತ್ಸೆ ಪಡೆಯುತ್ತಿರುವವರು ಚಿಕಿತ್ಸೆ ಸಮಯದಲ್ಲಿ ಸಾವನ್ನಪ್ಪಿದ್ದರೆ ಈ ಯೋಜನೆಯು ಅವರಿಗೆ ಅನ್ವಯವಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಅಚಾನಕ್ಕಾಗಿ ಸಾವು ಸಂಭವಿಸಿದರೆ ಮಾತ್ರ ವಿಮೆ ಅನ್ವಯವಾಗುತ್ತದೆ.

ಈ ನಿಟ್ಟಿನಲ್ಲಿ ಅಸ್ಸಾಂ ಪೊಲೀಸರ ವಿಶೇಷ ತಂಡವು ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದ್ದು, ಡಿಐಜಿ ಮಟ್ಟದ ಪೊಲೀಸ್ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಸಾವನ್ನಪ್ಪಿದವರ ಕುಟುಂಬ ಸದಸ್ಯರು ಪೊಲೀಸರಿಗೆ ಕರೆ ಮಾಡುವ ಮೂಲಕ ಘಟನೆ ಬಗ್ಗೆ ಮಾಹಿತಿ ನೀಡಬಹುದು. ಈ ಕಾರಣಕ್ಕಾಗಿಯೇ ಸಾಮಾಜಿಕ ಮಾಧ್ಯಮದಲ್ಲಿ ವಿಶೇಷ ಖಾತೆಯನ್ನು ತೆರೆಯಲಾಗಿದೆ ಎಂದು ಸಚಿವ ಸಂಪುಟ ಹೇಳಿದೆ. ಈ ಯೋಜನೆ ಅಕ್ಟೋಬರ್​​ನಿಂದ ಜಾರಿಗೆ ಬರಲಿದೆ.

ಮತ್ತಷ್ಟು ಓದಿ: Travel Insurance: ಅಂತರರಾಷ್ಟ್ರೀಯ ಪ್ರಯಾಣ ವಿಮೆ: ಸಂಪೂರ್ಣ ಮಾರ್ಗದರ್ಶಿ ಮತ್ತು ಸಲಹೆಗಳು

ಹಿಂದೆ ಅನಿರೀಕ್ಷಿತ ಕಾರಣಗಳಿಂದ ಸಾವನ್ನಪ್ಪಿದ ಹಲವು ನಿರ್ದಶನಗಳಿವೆ. ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಶವವನ್ನು ಸರಿಯಾದ ಸಮಯಕ್ಕೆ ಮನೆಗೆ ಕರೆ ತರಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಸಾಕಷ್ಟು ಮಂದಿ ಸರ್ಕಾರದ ಸಹಾಯವನ್ನು ಪಡೆಯುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು ಅಸ್ಸಾಂ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದು, ನಮ್ಮ ಸಾವಿರಾರು ಯುವಕರು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಇತರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಕನಿಷ್ಠ ಆದಾಯ ಅವರಿಗಿರುತ್ತದೆ. ಅಚಾನಕ್ಕಾಗಿ ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆ ನಡೆಸುವುದು ಅವರ ಕುಟುಂಬ ಸದಸ್ಯರಿಗೆ ಹೊರೆಯಾಗುತ್ತದೆ.

ಶ್ರದ್ಧಾಂಜಲಿ ಯೋಜನೆಯು ಈ ಕುಟುಂಬಗಳಿಗೆ ಸಹಾಯ ಮಾಡಲಿದೆ. ಯಾವ ರಾಜ್ಯದಲ್ಲಿ ಅವರು ಮೃತಪಟ್ಟಿದ್ದರೂ ಕೂಡ ಸರ್ಕಾರವು ತಮ್ಮ ದುಡ್ಡಿನಲ್ಲಿಯೇ ಅವರ ಮನೆವರೆಗೆ ಶವವನ್ನು ಕರೆತರಲಾಗುತ್ತದೆ ಎಂದು ತಿಳಿಸಿದ್ದಾರೆ.

ಅಧಿಕೃತ ಯೋಜನೆಗೂ ಮುನ್ನವೇ ಅಸ್ಸಾಂ ಸರ್ಕಾರವು ಶ್ರದ್ಧಾಂಜಲಿ ಮಾರ್ಗದರ್ಶಿ ಚೌಕಟ್ಟಿನಲ್ಲಿ ಸುಮಾರು 15 ಮೃತದೇಹಗಳನ್ನು ಹಿಂದಿರುಗಿಸಲು ಅನುಕೂಲ ಮಾಡಿಕೊಟ್ಟಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:26 pm, Mon, 23 June 25