AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುದೇವ ಶ್ರೀ ಶ್ರೀ ರವಿಶಂಕರ್​​​​ರ ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗ: ಸಾವಿರಾರು ಭಾರತೀಯರು ಭಾಗಿ

ಗುರುದೇವ ಶ್ರೀ ಶ್ರೀ ರವಿಶಂಕರ್ ಅವರ ನೇತೃತ್ವದಲ್ಲಿ ಭಾರತಾದ್ಯಂತ ಹಲವು ಸ್ಥಳಗಳಲ್ಲಿ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನ ಯೋಗಾಭ್ಯಾಸ ನಡೆಯಿತು. ಆರ್ಟ್ ಆಫ್ ಲಿವಿಂಗ್ ಮತ್ತು ಆಯುಷ್ ಸಚಿವಾಲಯದ ಸಹಯೋಗದೊಂದಿಗೆ, ಸಾವಿರಾರು ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೊಲಂಬಿಯಾದಲ್ಲಿಯೂ ಗುರುದೇವರು ಯೋಗದ ಮಹತ್ವವನ್ನು ವಿವರಿಸಿದರು.

ಗುರುದೇವ ಶ್ರೀ ಶ್ರೀ ರವಿಶಂಕರ್​​​​ರ ಆರ್ಟ್ ಆಫ್ ಲಿವಿಂಗ್ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಯೋಗ: ಸಾವಿರಾರು ಭಾರತೀಯರು ಭಾಗಿ
ಆರ್ಟ್ ಆಫ್ ಲಿವಿಂಗ್
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 22, 2025 | 10:03 AM

Share

ಬೆಂಗಳೂರು, ಜೂನ್ 22: ವರ್ಷದಲ್ಲಿಯೇ ಅತ್ಯಂತ ದೀರ್ಘವಾದ ಹಗಲಿನ ದಿನವಾದ ನಿನ್ನೆ (ಜೂನ್​ 21) ಭಾರತದ ಎಲ್ಲೆಡೆ ಜರುಗಿದ ಯೋಗಾಭ್ಯಾಸವು ಅತ್ಯಂತ ಉತ್ಸಾಹದಿಂದ ಕೂಡಿತ್ತು. ಆಯುಷ್ ಸಚಿವಾಲಯದ ಸಹಯೋಗದೊಂದಿಗೆ, ಆರ್ಟ್ ಆಫ್ ಲಿವಿಂಗ್‌ನ ಗುರುದೇವ ಶ್ರೀ ಶ್ರೀ ರವಿಶಂಕರ್ (Gurudev Sri Sri Ravi Shankar) ಯೋಗ ಶಿಕ್ಷಕರ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು (International Yoga Day) ಆಚರಿಸಲಾಯಿತು.

ಗುರುದೇವ ಶ್ರೀ ಶ್ರೀ ರವಿಶಂಕರ್​ ವಿದ್ಯಾ ಮಂದಿರದ ಸಾವಿರಾರು ವಿದ್ಯಾರ್ಥಿಗಳು ವಿಶಾಲಾಕ್ಷಿ ಮಂಟಪದಲ್ಲಿ ಯೋಗಾಸನಗಳನ್ನು ಮಾಡುತಿದ್ದ ದೃಶ್ಯವು, ಯೋಗದ ಭವ್ಯ ಪರಂಪರೆಗೆ ಸಾಕ್ಷಿಯಾಗಿತ್ತು. ತವಾಂಗ್ ಯುದ್ಧ ಸ್ಮಾರಕ, ಸುಖ್ನಾ ಮಿಲಿಟರಿ ಸ್ಟೇಷನ್ ಹಾಗೂ ಇಂಡೋ-ಭೂತಾನ್ ಗಡಿಭಾಗದಲ್ಲಿ ಯೋಧರು ಯೋಗಾಭ್ಯಾಸ ನಡೆಸಿದ ದೃಶ್ಯಗಳು ಸ್ಪೂರ್ತಿದಾಯಕವಾಗಿದ್ದವು. ಸಾಮಲೆಶ್ವರಿ ದೇವಾಲಯದ ಆವರಣದಲ್ಲಿ 5000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ವಿಶಾಖಪಟ್ಟಣದ ಥೋತ್ಲಕೊಂಡ ಬೌದ್ಧ ಪರಂಪರ ಕ್ಷೇತ್ರದಲ್ಲಿ ಮ್ಯಾನ್ಮಾರ್ ಹಾಗೂ ಕಂಬೋಡಿಯಾದ ಬೌದ್ಧ ಭಿಕ್ಷುಗಳು ಸಹ ಪಾಲ್ಗೊಂಡು ಯೋಗದ ಈ ಜಾಗತಿಕ ಉತ್ಸವಕ್ಕೆ ಸಾಕ್ಷಿಯಾದರು.

ಇದನ್ನೂ ಓದಿ: ಕೊಲಂಬಿಯಾ ಸಂಸತ್ತಿನಲ್ಲಿ ಗುರುದೇವ ಶ್ರೀ ಶ್ರೀ ರವಿಶಂಕರ್ ಭಾಷಣ: ಹಿಂಸಾ ಮುಕ್ತ ಜಗತ್ತಿನ ಕನಸು ಕಾಣವಂತೆ ಕರೆ

ಇದನ್ನೂ ಓದಿ
Image
ಸ್ನಾನಗೃಹದಿಂದ ಆಧುನಿಕ ಬಳಕೆವರೆಗೆ, ಟರ್ಕಿಶ್ ಟವೆಲ್‌ ಇಂಟರೆಸ್ಟಿಂಗ್ ಸ್ಟೋರಿ
Image
ನಕಲಿ ಜೇನುತುಪ್ಪ ಮಾರಾಟದ ಬಗ್ಗೆ ತನಿಖೆ ಅಗತ್ಯ!
Image
ಚಿನ್ನದ ಹೊಳಪಿನ ಹಿಂದೆ ತಳಮಳ
Image
ಮೀಟರ್ ಬಡ್ಡಿ ನಿಯಂತ್ರಣಕ್ಕೆ ಹೊಸ ಕಾನೂನು-ಖುಷಿಯಾಗದ ಜನ

ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ , ಗುರುದೇವ ಶ್ರೀ ಶ್ರೀ ರವಿಶಂಕರ್​​ ವಿದ್ಯಾ ಮಂದಿರ ಟ್ರಸ್ಟ್‌ನ 20,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆನ್‌ಲೈನ್​ನಲ್ಲಿ ಭಾಗವಹಿಸುವುದರೊಂದಿಗೆ “ಕಾಮನ್ ಯೋಗ ಪ್ರೋಟೋಕಾಲ್” ಅನ್ನು ಅನುಸರಿಸಿದರು. ಇದಾದ ನಂತರ ಸಾಮೂಹಿಕ ಧ್ಯಾನ ಮಾಡಲಾಯಿತು. “ಆಶ್ರಮದ ಪ್ರಶಾಂತವಾದ ಪರಿಸರದಲ್ಲಿನ ಈ ಯೋಗಾಭ್ಯಾಸವು, ಆಳವಾದ ಶಾಂತಿ ಮತ್ತು ನೆಮ್ಮದಿಯನ್ನು ನೀಡಿತು” ಎಂದು ಎಸ್​ಎಸ್​ಆರ್​ವಿಎಮ್​​ ಟ್ರಸ್ಟ್‌ನ ಆಡಳಿತಾಧಿಕಾರಿ ಆನಂದ್ ಜಿ.ಎನ್. ಅವರು ಹೇಳಿದರು.

ವಿಕಾಸವೇ ಯೋಗ: ಗುರುದೇವ ಶ್ರೀ ಶ್ರೀ ರವಿಶಂಕರ್

ಆಸನಗಳು ಯೋಗದ ಪ್ರಮುಖ ಭಾಗವಾಗಿದಾರೂ, ಯೋಗದ ಮೂಲ ಉದ್ದೇಶ ದೈಹಿಕ ಭಂಗಿ ಮತ್ತು ಆಸನಗಳನ್ನು ಮೀರಿದ್ದಾಗಿದೆ. ಗುರುದೇವ ಶ್ರೀ ಶ್ರೀ ರವಿಶಂಕರರ ಪ್ರಕಾರ, “ ಹೂವಿನ ಮೊಗ್ಗೊಂದು ಅರಳುವ ಎಲ್ಲಾ ಸಾಮರ್ಥ್ಯವನ್ನು ಹೊಂದಿರುಂತೆ, ಮಾನವ ಜೀವನವು ಸಂಪೂರ್ಣವಾಗಿ ವಿಕಸಿಸುವ ಅವಕಾಶವಿದೆ. ಆ ವಿಕಾಸವೇ ಯೋಗ. ಯೋಗವೆಂದರೆ ನೈಪುಣ್ಯತೆ; ನಮ್ಮ ಅಸ್ತಿತ್ವದ ವಿವಿಧ ಹಂತಗಳನ್ನು ಸಾಮರಸ್ಯದಿಂದ ಒಗ್ಗೂಡಿಸಿ, ನಿಜವಾದ ಸ್ವಭಾವದ ಕಡೆಗೆ ಕರೆದೊಯ್ಯುವುದಾಗಿದೆ” ಎಂದಿದ್ದಾರೆ.

Tawang War Memorial, Arunachal Pradesh

ನಿನ್ನೆ ಸಂಜೆ ಕೊಲಂಬಿಯಾದ ಬೊಗೋಟಾದ ಪ್ಲಾಜಾ ಲಾ ಸಂತಮಾರಿಯಾದಿಂದ, ಗುರುದೇವ ಶ್ರೀ ಶ್ರೀ ರವಿಶಂಕರ್​ ಅವರು ಜಗತ್ತಿನ ಕೋಟ್ಯಂತರ ಜನರನ್ನು ಉದ್ದೇಶಿಸಿ ಮಾಡಿದರು. ಅವರೊಂದಿಗೆ ಬೊಗೋಟಾದ ಮೇಯರ್ ಕಾರ್ಲೊಸ್ ಫರ್ನಾಂಡೋ ಗ್ಯಾಲಾನ್ ಸಹ ಭಾಗವಹಿಸಿದ್ದರು.

ಇದನ್ನೂ ಓದಿ: ನಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸಲು ಅಡ್ಡಿಯಾಗುತ್ತಿರುವುದು ಏನು? ಗುರುದೇವ ರವಿಶಂಕರ್ ಬರಹ

ಗುರುದೇವರು ಪ್ರಸ್ತುತ, ಕೊಲಂಬಿಯಾ ದೇಶದ ಮೂರು ನಗರಗಳ ಐತಿಹಾಸಿಕ ಪ್ರವಾಸದಲ್ಲಿದ್ದಾರೆ. ಈ ವಾರದ ಆರಂಭದಲ್ಲಿ ಅವರು ಕೊಲಂಬಿಯಾದ ಸಂಸತ್ತಿನಲ್ಲಿ ಭಾಷಣ ಮಾಡಿದ್ದು, ದಶಕದ ಹಿಂದೆ ಇದೇ ನಗರದಲ್ಲಿ ಅವರು ನೀಡಿದ ಮಾನವೀಯ ಶಾಂತಿಯ ಕರೆಯು ಸ್ಮರಣೀಯವಾಗಿದೆ. ಅವರ ಮಧ್ಯಸ್ಥಿಕೆಯಿಂದ, ಫಾರ್ಕ್ ಮತ್ತು ಆ ಕಾಲದ ಕೊಲಂಬಿಯಾ ಸರ್ಕಾರದ ನಡುವೆ ಐತಿಹಾಸಿಕ ಶಾಂತಿ ಒಪ್ಪಂದವಾಗಿದೆ. ಈ ಒಪ್ಪಂದವು ಐವತ್ತು ವರ್ಷಗಳ ಸಾಂಘರ್ಷಿಕ ಇತಿಹಾಸಕ್ಕೆ ಕೊನೆ ಹಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:56 am, Sun, 22 June 25

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ