AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಜೇನುತುಪ್ಪ ಮಾರಾಟದ ಬಗ್ಗೆ ತನಿಖೆ ಅಗತ್ಯ!

ಭಾರತದ ಜೇನುತುಪ್ಪ ಉತ್ಪಾದನೆಯಲ್ಲಿನ ಅಸಂಗತತೆಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ. ವಾರ್ಷಿಕ ಜೇನು ಉತ್ಪಾದನೆಗಿಂತ ಹೆಚ್ಚಿನ ಪ್ರಮಾಣದ ಜೇನುತುಪ್ಪ ಮಾರುಕಟ್ಟೆಯಲ್ಲಿ ಲಭ್ಯವಿದೆ ಎಂಬ ಆತಂಕವಿದೆ. ಸರ್ಕಾರದಿಂದ ವಿಶೇಷ ತನಿಖೆ, ಜೇನುಗೂಡುಗಳ ಸಂಖ್ಯೆಯ ಪರಿಶೀಲನೆ ಮತ್ತು ಜೇನುತುಪ್ಪದ ಗುಣಮಟ್ಟ ನಿಯಂತ್ರಣದ ಅಗತ್ಯವನ್ನು ಈ ಲೇಖನ ಪ್ರತಿಪಾದಿಸುತ್ತದೆ. ರೋಗಿ ಜೇನು ಹುಳಗಳ ವಿತರಣೆ ಮತ್ತು ಕೀಟನಾಶಕಗಳ ಬಳಕೆಯ ಪರಿಣಾಮಗಳನ್ನೂ ಚರ್ಚಿಸಲಾಗಿದೆ.

ನಕಲಿ ಜೇನುತುಪ್ಪ ಮಾರಾಟದ ಬಗ್ಗೆ ತನಿಖೆ ಅಗತ್ಯ!
Honey Production
TV9 Web
| Updated By: ಅಕ್ಷತಾ ವರ್ಕಾಡಿ|

Updated on: Apr 12, 2025 | 3:21 PM

Share

ಇತ್ತೀಚಿನ ವರ್ಷಗಳಲ್ಲಿ ಜೇನುತುಪ್ಪದ ಬಗ್ಗೆ ಅನುಮಾನ ಹೆಚ್ಚಾಗಿದೆ ವರ್ಷವೊಂದಕ್ಕೆ ಜೇನು ಹುಳ ಎಷ್ಟು ಜೇನುತುಪ್ಪ ತಯಾರಿಸುತ್ತದೆಯೋ ಅದರ ಸಾವಿರಾರು ಪಟ್ಟು ಹೆಚ್ಚು ಜೇನುತುಪ್ಪ ವಿಕ್ರಿಯಾಗುತ್ತದೆ ಎಂದು ನನಗೆ ಅನುಮಾನ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜೇನುತುಪ್ಪ ,ಜೇನು ತಯಾರಿಸುತ್ತದೆ ಎಂದಾದರೆ ಈ ಬಗ್ಗೆ ಕೇಂದ್ರ ಸರ್ಕಾರ ವಿಸ್ತೃತ ವಿಶೇಷ ಅಧ್ಯಯನ ಮಾಡುವಂತಹ ಇನ್ನೂಂದು ಆಯೋಗದ ರಚನೆ ಮಾಡಿ ಅದನ್ನೇ ರಾಷ್ಟ್ರೀಯ ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಳ್ಳುವಂತಹ ವಿಚಾರ ಮಾಡಬೇಕು.

ಇತರ ಜಿಲ್ಲೆಗಳಲ್ಲಿ ನನಗೆ ಮಾಹಿತಿ ಇಲ್ಲ ಉತ್ತರ ಕನ್ನಡದಲ್ಲಿಂತು ಹಲವರು ಜೇನು ನಾಶದತ್ತ ಜೇನು ನಾಶದತ್ತ ಅಂತ ಸಾಮಾನ್ಯ ಜನರು ಹೇಳಿದ್ದು ಕೇಳಿದ್ದೇನೆ ಜೇನು ಪೆಟ್ಟಿಗೆ ಜೇನುಗೂಡ ಎಲ್ಲೋ ನೋಡಲಿಕ್ಕೆ ಸಿಗದು ಎಂದು ಜನ ಸಾಮಾನ್ಯ ಜನರು ಆಡಿಕೊಳ್ಳುವುದು ಕೇಳಿದ್ದೇನೆ ಆದರೆ ಜೇನುತುಪ್ಪ ಮಾತ್ರ ವಿಕ್ರಿ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ಆಗುತ್ತಿದೆ .

ಇನ್ನು ಒಂದು ಅಂಬೋಣದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಜೇನುಪೆಟ್ಟಿಗೆ ಹಾಗೂ ಅದರ ಇನ್ನಿತರ ಪರಿಕರಗಳನ್ನು ರೈತರಿಗೆ ವಿಶೇಷ ಯೋಜನೆ ಅಡಿಯಲ್ಲಿ ನೀಡುತ್ತಾ ಬಂದಿದೆ ಎಂದು ಕೇಳಿದ್ದೇನೆ ಕಳೆದ ಹತ್ತು ವರ್ಷದಿಂದ ಈ ನೀಡಿರುವ ಸಂಖ್ಯೆಯನ್ನು ಒಮ್ಮೆ ಪರಿಶೀಲಿಸಿದರೆ ಜೇನು ಹುಳ ಹಾಗೂ ಜೇನುಪೆಟ್ಟಿಗೆಗಳಿಂದಲೇ ಕಾಡಿನಲ್ಲಿ ಟ್ರಾಫಿಕ್ ಜಾಮ್ ಆಗಬೇಕಿತ್ತು. ಆದರೆ ಜೇನುಪೆಟ್ಟಿಗೆ ಜೇನು ಹುಳಗಳ ಸಂಖ್ಯೆಯಲ್ಲಿ ಹೆಚ್ಚಾಗದೆ ಮಾರಾಟ ಮಾಡುವ ಬಾಟಲಿಗಳಲ್ಲಿಯ ಜೇನುತುಪ್ಪದ ಪ್ರಮಾಣ ಮಾತ್ರ ಗಣನೀಯವಾಗಿ ಏರಿಕೆಯಾಗಿದೆ.

ಜೇನು ಕೃಷಿಕರು ಅಸಲಿ ಯಾರು ? ನಕಲಿ ಯಾರು ? ಎಂಬುದು ಜನಸಾಮಾನ್ಯರಿಗೆ ಈಗಾಗಲೇ ತಿಳಿದಿದೆ ಆದರೆ ಜೇನಿನಿಂದ ಬಂದಂತ ಕೀರ್ತಿ ಪ್ರಶಸ್ತಿ ಹೆಗ್ಗಳಿಕೆ ಇದು ಯಾರ್ಯಾರಿಗೋ ಹೋಗುತ್ತದೆ ಎಂದು ಪ್ರಾಮಾಣಿಕ ಜೇನು ಕೃಷಿಕ ರೈತರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ .

ಒಂದು ಅನುಮಾನದಂತೆ ಮನುಷ್ಯ ನಿರ್ಮಿತ ಜೇನು ಹಾಗೂ ಜೇನು ನಿರ್ಮಿತ ಜೇನು ಎಂಬ ಎರಡು ವರ್ಗಗಳನ್ನು ಕೇಂದ್ರ ಆಹಾರ ಸುರಕ್ಷತಾ ಸಂಸ್ಥೆ ಮಾಡಬೇಕಿದೆ ಅಲ್ಲದೆ ಈ ಜೇನಿನ ಬಗ್ಗೆ ವಿಶೇಷ ಟಾಸ್ಕ್ ಫೋರ್ಸ್ ಒಂದನ್ನು ತಯಾರಿಸಿ ಜೇನಿನ ಗುಣಮಟ್ಟದ ಬಗ್ಗೆ ತಾಲೂಕ ಮಟ್ಟದಲ್ಲಿ ಪ್ರಯೋಗಾಲಯಗಳಲ್ಲಿ ನಿಶ್ಚಿತ ರೀತಿಯಲ್ಲಿ ಮಾದರಿ ತೆಗೆಯುವ ಮೂಲಕ ಪ್ರತಿ ಮಾರಾಟಕ್ಕೆ ಲಭ್ಯವಿರುವ ಜೇನಿನ ಪರೀಕ್ಷೆ ಆಗಬೇಕಿದೆ.

ಅಲ್ಲದೆ ಸರ್ಕಾರದ ಸಬ್ಸಿಡಿ ಇರುವಂತಹ ಜೇನಿನ ಯೋಜನೆಗಳ ಬಗ್ಗೆ ಸಿಬಿಐ ತನಿಖೆಯಾಗಬೇಕಿದೆ. ಇದೇನಿನ ಯೋಜನೆಗಳು ಕಾಗದದ ಮೇಲೆಯೇ ಹೆಚ್ಚಿದ್ದು ಜೇನಿನ ಪೆಟ್ಟಿಗೆ,ಜೇನಿನ ಸಂಖ್ಯೆಯಲ್ಲಿ ಕಡಿಮೆ ಇದ್ದಂತೆ ತೋರುತ್ತದೆ. ಕಳೆದ ಹತ್ತು ವರ್ಷದಲ್ಲಿ ಈ ಎಲ್ಲಾ ಯೋಜನೆಗಳಿಂದ ಜೇನಿನ ಸಂಖ್ಯೆ ಹೆಚ್ಚಾಗಿದ್ದೇ ಆದರೆ ಈಗ ಪರಿಸರದಲ್ಲಿ ಜೇನುಹುಳಗಳ ಟ್ರಾಫಿಕ್ ಜಾಮ್ ಆಗಬೇಕಿತ್ತು. ಆದರೆ ನೈಸರ್ಗಿಕವಲ್ಲದ ಜೇನುತುಪ್ಪದ ಟ್ರಾಫಿಕ್ ಜಾಮ್ ಆಗಿದೆ .

ಇನ್ನು ಕೆಲವು ಜೇನು ಹುಳ ಪೂರೈಸುವವರು ರೋಗಿ ಜೇನುಹುಳ ನೀಡಿದ್ದರಿಂದ ಇತರ ಜೇನುಹುಳಗಳಿಗೂ ಇರುವ ತಗುಲಿರುವ ಶಂಕೆ ಕೆಲವು ಬೆಳೆಗಾರರ ಅನುಮಾನ, ರೋಗ ರಹಿತ ಜೇನುಹುಳ ಪೂರೈಕೆ ಆಗುವಂತೆ ಸರಕಾರ ಯೋಚಿಸಬೇಕಿದೆ. ಇನ್ನು ಕೆಲವು ಜೇನು ಬೆಳೆಗಾರರ ಅನುಮಾನದಂತೆ ಅಡಿಕೆಗೆ ಸಿಂಪಡಿಸುವ ಕೆಲವು ಔಷಧಿಗಳು ಕೂಡ ಜೇನಿನ ನಾಶಕ್ಕೆ ಕಾರಣ ಅಂತ ಯಾವುದಕ್ಕೂ ಸಂಬಂಧ ಪಟ್ಟ ಇಲಾಖೆ ಯೋಚಿಸಿ ತಿಳಿಸಬೇಕಾದಂತಹ ಅವಶ್ಯಕತೆ ಇದೆ.

ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ವಿಶೇಷವಾದಂತಹ ಒಂದು ಸ್ಥಾನ ಇದೆ ಅದರಂತೆ ಯೋಗವಾಹಿ ಎಂಬ ಗುಣವನ್ನು ಜೇನುತುಪ್ಪ ಹೊಂದಿದೆ. ಆದರೆ ಜೇನು ಹುಳದಿಂದ ತಯಾರ ಆಗದಂತಹ ಜೇನುತುಪ್ಪ ರೋಗವಾಹಿ ಗುಣ ಹೊಂದಿದೆ ಎಂದು ನನ್ನ ಅನಿಸಿಕೆ. ಕೊನೆಯದಾಗಿ ನಿಮ್ಮ ನಿಮ್ಮ ವಿಶ್ವಾಸದ ಖಾತ್ರಿಯ ಜೇನು ಕೃಷಿಕರಿಂದಲೇ ನೇರವಾಗಿ ಜೇನನ್ನ ಖರೀದಿಸಿ ಉಪಯೋಗಿಸಿ.

ಲೇಖನ: ಡಾ ರವಿಕಿರಣ ಪಟವರ್ಧನ ಶಿರಸಿ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ