ನೀವು ಖರೀದಿಸಿದ ಜೇನುತುಪ್ಪ ಅಸಲಿಯೇ ನಕಲಿಯೇ ಎಂದು ಪತ್ತೆ ಹಚ್ಚುವುದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್ಸ್
ಜೇನುತುಪ್ಪ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮುಖದ ಸೌಂದರ್ಯದಿಂದ ಹಿಡಿದು ತೂಕ ಇಳಿಕೆಗೂ ಜೇನುತುಪ್ಪ ಸಹಕಾರಿಯಾಗಿದ್ದು, ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಜೇನುತುಪ್ಪದಲ್ಲಿ ಕಲಬೆರಕೆಯನ್ನು ಕಾಣಬಹುದಾಗಿದ್ದು, ಹೀಗಾಗಿ ಅಸಲಿ ಮತ್ತು ನಕಲಿಯೇ ಎಂದು ಗುರುತಿಸಲು ತುಂಬಾನೇ ಕಷ್ಟ. ಹಾಗಾದ್ರೆ ನೀವು ಖರೀದಿಸಿರುವ ಜೇನುತುಪ್ಪ ಶುದ್ಧವಾಗಿದೆಯೇ ಎಂದು ಮನೆಯಲ್ಲೇ ಪತ್ತೆಹಚ್ಚಲು ಈ ವಿಧಾನವನ್ನು ಅನುಸರಿಸಿ.
ಇತ್ತೀಚೆಗಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳು ಕೂಡ ಕಲಬೆರಕೆಯುಕ್ತವಾಗಿದೆ. ದಿನನಿತ್ಯ ಬಳಸುವ ಆಹಾರ ಪದಾರ್ಥಗಳಿಂದ ಹಿಡಿದು ಜೇನುತುಪ್ಪದಲ್ಲಿಯೂ ಕಲಬೆರಕೆಯನ್ನು ಕಾಣಬಹುದು. ಮಾರುಕಟ್ಟೆಯಲ್ಲಿ ಕಲಬೆರಕೆಯುಕ್ತ ಜೇನುತುಪ್ಪ ಲಭ್ಯವಿದ್ದು, ಖರೀದಿಸಿ ಕೊನೆಗೆ ಮೋಸ ಹೋಗುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಾರುಕಟ್ಟೆಯಿಂದ ಖರೀದಿಸಿ ತಂದಿರುವ ಜೇನುತುಪ್ಪವು ಶುದ್ಧವಾಗಿದೆಯೇ ಎಂದು ಮನೆಯಲ್ಲೇ ಕಂಡು ಹಿಡಿಯಬಹುದು. ಆದರೆ ಈ ಕೆಲವು ವಿಧಾನಗಳನ್ನು ಬಳಸಿ ಜೇನುತುಪ್ಪ ಅಸಲಿಯೇ ಹಾಗೂ ನಕಲಿಯೇ ಎಂದು ಪತ್ತೆ ಹಚ್ಚಬಹುದು.
- ಹೆಬ್ಬೆರಳಿನ ಮೇಲೆ ಒಂದೆರಡು ಹನಿ ಜೇನುತುಪ್ಪವನ್ನು ಹಾಕಿಕೊಳ್ಳಿ. ಜೇನುತುಪ್ಪ ಅಸಲಿಯಾಗಿದ್ದರೆ, ಬೆರಳಿನ ಮೇಲೆ ಉಳಿದುಕೊಳ್ಳುತ್ತದೆ. ಹೆಬ್ಬೆರಳಿನ ಮೇಲೆ ಹರಡಿಕೊಂಡರೆ ಜೇನು ತುಪ್ಪ ನಕಲಿಯಾಗಿದೆ ಎನ್ನುವುದು ಖಚಿತವಾಗುತ್ತದೆ.
- ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಜೇನುತುಪ್ಪವು ನೀರಿನಲ್ಲಿ ತಕ್ಷಣ ಕರಗಿದರೆ, ಅದು ಕಲಬೆರಕೆವಾಗಿದೆ ಎಂದರ್ಥ. ಜೇನು ದಪ್ಪವಾದ ಎಳೆಯನ್ನು ಮಾಡಿ ಕೆಳಭಾಗದಲ್ಲಿ ಸೇರಿಕೊಂಡರೆ ಅದು ಶುದ್ಧ ಜೇನುತುಪ್ಪ.
- ಒಂದು ಟಿಶ್ಯೂ ಪೇಪರ್ ತೆಗೆದುಕೊಂಡು, ಒಂದೆರಡು ಹನಿ ಜೇನುತುಪ್ಪವನ್ನು ಹಾಕಿಕೊಳ್ಳಿ. ಶುದ್ಧ ಜೇನುತುಪ್ಪವಾಗಿದ್ದರೆ ಕಾಗದದ ಮೇಲೆ ಉಳಿಯುತ್ತದೆ. ಈ ಮೂಲಕ ನೀವು ಖರೀದಿಸಿದ ಜೇನುತುಪ್ಪವು ಅಸಲಿಯೇ ಎಂದು ಪತ್ತೆಹಚ್ಚಬಹುದು.
- ಬ್ರೆಡ್ ಬಳಸಿ ಜೇನುತುಪ್ಪ ಶುದ್ಧವಾಗಿದೆಯೇ ಎಂದು ಕಂಡುಹಿಡಿಯಬಹುದು. ಬ್ರೆಡ್ ಮೇಲೆ ಶುದ್ಧ ಜೇನುತುಪ್ಪ ಹಾಕಿದರೆ ಅದು ಗಟ್ಟಿಯಾಗುತ್ತದೆ. ಒಂದು ವೇಳೆ ಕಲಬೆರಕೆ ಜೇನತುಪ್ಪ ಹಾಕಿದ ಕೂಡಲೇ ಬ್ರೆಡ್ ಮೃದುವಾಗುತ್ತದೆ. ಈ ರೀತಿಯಾದರೆ ಜೇನುತುಪ್ಪ ಶುದ್ಧವಾಗಿಲ್ಲ ಎಂದರ್ಥ.
- ಒಂದು ಮರದ ಕಡ್ಡಿಗೆ ಹತ್ತಿಯನ್ನು ಸುತ್ತಿ ಅದರ ಮೇಲೆ ಜೇನುತುಪ್ಪವನ್ನು ಹಾಕಿಕೊಳ್ಳಿ. ಈಗ ಜೀನು ತುಪ್ಪ ಹಚ್ಚಿದ ಕಡ್ಡಿಯನ್ನು ಬೆಂಕಿಯ ಸಮೀಪ ತರುತ್ತಿದ್ದಂತೆ ತಕ್ಷಣ ಬೆಂಕಿ ಹೊತ್ತಿಕೊಂಡರೆ ಅದು ಶುದ್ದ ಜೇನು ಎಂದರ್ಥ. ಇಲ್ಲದಿದ್ದರೆ ಬೆಂಕಿಹೊತ್ತಿಕೊಳ್ಳಲು ಸಮಯ ತೆಗೆದುಕೊಂಡರೆ ಕಲಬೆರಕೆಯಾಗಿದೆ ಎನ್ನುವುದು ಖಚಿತವಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ