Christmas Wishes 2024: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು

ಕ್ರಿಸ್‌ಮಸ್ ಕ್ರೈಸ್ತ ಧರ್ಮಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಪ್ರತಿ ವರ್ಷ ಡಿಸೆಂಬರ್‌ 25ರಂದು ಪ್ರಪಂಚದಾದಂತ್ಯ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸಂಭ್ರಮದಿಂದ ಆಚರಿಸುವ ಈ ಕ್ರಿಸ್ಮಸ್ ಹಬ್ಬಕ್ಕೆ ಒಂದೆರಡು ದಿನಗಳಷ್ಟೇ ಬಾಕಿಯಿವೆ. ಈ ಹಬ್ಬಕ್ಕೆ ಶುಭಾಶಯಗಳ ಕೋರಲು ಒಂದೊಳ್ಳೆ ಸಂದೇಶಗಳಿಗಾಗಿ ಹುಡುಕಾಡುತ್ತಿದ್ದೀರಾ. ಹಾಗಾದ್ರೆ ನಿಮ್ಮ ಪ್ರೀತಿ ಪಾತ್ರರಿಗೆ ವಿಭಿನ್ನವಾಗಿ ಶುಭಾಶಯಗಳನ್ನು ಕೋರಲು ಇಲ್ಲಿದೆ ಸಂದೇಶಗಳು.

Christmas Wishes 2024: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು
Christmas Wishes 2024
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 23, 2024 | 2:59 PM

ಡಿಸೆಂಬರ್ ತಿಂಗಳು ಬಂತೆಂದರೆ ಸಾಕು, ಮೊದಲು ನೆನಪಾಗುವುದೇ ಕ್ರಿಸ್ ಮಸ್. ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಇದು ಕೂಡ ಒಂದು. ಕ್ರೈಸ್ತ ಧರ್ಮದ ಪ್ರಕಾರ ಈ ದಿನ ಯೇಸು ಕ್ರಿಸ್ತನ ಜನನ ದಿನವಾಗಿದೆ. ಈ ವಿಶೇಷ ದಿನದಂದು ವಿವಿಧ ಚರ್ಚ್‌ಗಳಲ್ಲಿ ಯೇಸುವಿಗೆ ಪೂಜೆ ಸಲ್ಲಿಸಿ ಕೇಕ್‌ಗಳನ್ನು ಕತ್ತರಿಸುತ್ತಾರೆ. ಅದಲ್ಲದೇ, ಮನೆಗಳು ಸೇರಿದಂತೆ ಮಾಲ್‌ಗಳಲ್ಲಿಯೂ ವಿಶೇಷ ಕ್ರಿಸ್ ಮಸ್ ದೀಪಾಲಂಕಾರ, ಕ್ರಿಸ್ ಮಸ್ ಟ್ರೀಗಳನ್ನು ಕಾಣಬಹುದು. ಇನ್ನು ಬಂಧು ಬಾಂಧವರಿಗೆ ಸಿಹಿ ಹಂಚುವ ಮೂಲಕ ಹಬ್ಬವನ್ನು ಸಂಭ್ರಮಿಸುತ್ತಾರೆ. ಈ ಬಾರಿಯ ಕ್ರಿಸ್ಮಸ್ ಹಬ್ಬಕ್ಕೆ ನಿಮ್ಮ ಪ್ರೀತಿ ಪಾತ್ರರಿಗೆ ಶುಭಾಶಯ ಕೋರಬೇಕೆಂದಿದ್ದರೆ ಇಲ್ಲಿದೆ ಶುಭ ಸಂದೇಶಗಳು.

  • ನಿಮ್ಮ ಜೀವನ ಸಂತೋಷದಿಂದ ಕೂಡಿರಲೆಂದು ಶುಭ ಹಾರೈಸುತ್ತೇನೆ. ಕ್ರಿಸ್​ಮಸ್ ಹಬ್ಬದ ಹಾರ್ಥಿಕ ಶುಭಾಶಯಗಳು.
  • ಕ್ರಿಸ್ತನ ಜನನದ ಸಂತೋಷವು ನಿಮ್ಮ ಹೃದಯವನ್ನು ಸಂತೋಷ ಮತ್ತು ನಗೆಯಿಂದ ಬೆಳಗಿಸಲಿ. ಸರ್ವರಿಗೂ ಕ್ರಿಸ್​ಮಸ್ ಹಬ್ಬದ ಶುಭಾಶಯಗಳು.
  • ಕ್ರಿಸ್​ಮಸ್ ಹಬ್ಬದ ಶುಭಾಶಯಗಳು ಈ ಹಬ್ಬವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
  • ಕ್ರಿಸ್​ಮಸ್ ದಿನ ಹಚ್ಚುವ ಒಂದು ಕ್ಯಾಂಡಲ್ ಬೆಳಕು ನಿಮ್ಮ ಜೀವನದಲ್ಲಿ ಸೂರ್ಯನಷ್ಟು ಬೆಳಕು ನೀಡಲಿ, ಕ್ರಿಸ್​ಮಸ್ ಹಬ್ಬದ ಶುಭಾಶಯಗಳು.
  • ಕ್ರಿಸ್​ಮಸ್ ಎಂದರೆ ಕಾಳಜಿ ಮತ್ತು ಪರಸ್ಪರ ಖುಷಿ ಹಂಚಿಕೊಂಡು, ಜೊತೆಯಾಗಿ ಕಳೆಯುವ ಕ್ಷಣವಾಗಿದೆ. ಸರ್ವರಿಗೂ ಖುಷಿಯ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
  • ಶಾಂತಿದೂತರ ಜನ್ಮದಿನದ ಈ ಹಬ್ಬವು ನಿಮಗೆ ಎಲ್ಲಾ ಯಶಸ್ಸನ್ನು ತರಲಿ. ನಿಮ್ಮ ಜೀವನದ ಗುರಿ ಮುಟ್ಟುವ ಎಲ್ಲಾ ದಾರಿಗಳು ಹೂವಿನ ಹಾಸಿನಂತೆ ಸುಗಮವಾಗಲಿ ಎಂಬ ಹಾರೈಕೆ ನನ್ನದು. ನಿಮಗೂ ನಿಮ್ಮ ಕುಟುಂಬಕ್ಕೂ ಕ್ರಿಸ್​ಮಸ್ ಹಬ್ಬದ ಶುಭಾಶಯಗಳು.
  • ಕ್ರಿಸ್​ಮಸ್ ಹಬ್ಬದ ಸಂತೋಷ ಹಾಗೂ ಶಾಂತಿಯೂ ವರ್ಷವಿಡಿ ನಿಮ್ಮೊಂದಿಗೆ ಇರಲಿ. ಈ ಹಬ್ಬವು ನಿಮಗೆ ಮುಂದಿನ ವರ್ಷ ಶುಭವನ್ನೇ ತರಲಿ ಎಂದು ಆಶಿಸುತ್ತೇನೆ. ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
  • ಸರ್ವಶಕ್ತ ಯೇಸುವಿನ ಆಶೀರ್ವಾದವು ನಿಮ್ಮ ಮೇಲೆ ಇರಲಿ. ನಿಮ್ಮ ಜೀವನವನ್ನು ಸಮೃದ್ಧಿ ಹಾಗೂ ಸಂತೋಷದೆಡೆಗೆ ಕೊಂಡೊಯ್ಯಲಿ. ಕ್ರಿಸ್ ಮಸ್ ಹಬ್ಬದ ಶುಭಾಶಯಗಳು.
  • ಕ್ರಿಸ್‌ಮಸ್ ಹಬ್ಬವು ಸಂತೋಷ, ಪ್ರೀತಿ ಮತ್ತು ಶಾಂತಿಯನ್ನು ಬಯಸುವ ಸಮಯ. ಹೀಗಾಗಿ ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗ ಸಂತೋಷ, ಪ್ರೀತಿಯನ್ನು ಹಂಚಿಕೊಳ್ಳಿ. ಈ ವರ್ಷದ ಶುಭವನ್ನೇ ತರಲಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
  • ಕ್ರಿಸ್‌ಮಸ್ ಹಬ್ಬದ ಶುಭಾಶಯಗಳು. ಈ ಬಾರಿಯ ಹಬ್ಬವು ನಿಮ್ಮ ಜೀವನದಲ್ಲಿ ಬಹಳಷ್ಟು ಶಾಂತಿ ಮತ್ತು ಸಂತೋಷವನ್ನು ತರಲಿ. ನಿಮ್ಮ ಎಲ್ಲಾ ಆಸೆಗಳು ಮತ್ತು ಕನಸುಗಳು ನನಸಾಗಲಿ, ಮತ್ತು ನೀವು ವರ್ಷಪೂರ್ತಿ ಈ ಸಂತೋಷವನ್ನು ಅನುಭವಿಸುವಂತಾಗಲಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ಬಿಡುಗಡೆ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಕೊಹ್ಲಿ, ರೋಹಿತ್ ತಂಡಗಳನ್ನು ಸೋಲಿಸಿ 25 ಸಾವಿರ ರೂ. ಗೆದ್ದ ಯುವ ಆಟಗಾರ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ಬಳ್ಳಾರಿ: ಮನೆಯಿಂದ ದೂರವಾಗಿ 25 ವರ್ಷಗಳ ಬಳಿಕ ಪತ್ತೆಯಾದ ಮಹಿಳೆ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನೆಲಮಂಗಲ: ಬೆಳ್ಳಂ ಬೆಳಗ್ಗೆ ಬಾರ್ ತೆರದು ಅಕ್ರಮವಾಗಿ ಮದ್ಯ ಮಾರಾಟ
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್