AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas

Christmas

ಕ್ರಿಸ್ ಮಸ್ ಹಬ್ಬವೂ ಕ್ರೈಸ್ತ್ರ ಧರ್ಮಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಕ್ರಿಸ್ಮಸ್ ಯೇಸು ಕ್ರಿಸ್ತನ ಜನನವನ್ನು ಸೂಚಿಸುವ ದಿನವಾಗಿದ್ದು ಅವನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತದೆ. ಇದು ಒಂದು ಪ್ರಮುಖ ಕ್ರಿಶ್ಚಿಯನ್ ಹಬ್ಬವಾಗಿದ್ದರೂ, ವಿಶ್ವದಾದ್ಯಂತ ವಿವಿಧ ನಂಬಿಕೆಗಳ ಜನರು ಈ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಒಟ್ಟುಗೂಡುವ ಮೂಲಕ ಅವರೊಂದಿಗೆ ಉಡುಗೊರೆಗಳ ವಿನಿಮಯ ಹಾಗೂ ಎಲ್ಲರೂ ಜೊತೆ ಸೇರಿ ಊಟ ಮಾಡುತ್ತಾರೆ. ವಿಶ್ವದಾದಂತ್ಯ ಸಡಗರ ಸಂಭ್ರಮದಿಂದ ಆಚರಿಸಲಾಗುವ ಕ್ರಿಸ್ ಮಸ್ ಹಬ್ಬಕ್ಕೆ ಸಂಬಂಧಪಟ್ಟ ವಿಶೇಷ ಸ್ಟೋರಿಗಳನ್ನು ಓದಲು ಟಿವಿ 9 ನ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಇನ್ನೂ ಹೆಚ್ಚು ಓದಿ

Viral Video:’ಹರೇ ರಾಮ, ಹರೇ ಕೃಷ್ಣ’ ಮಂತ್ರ ಜಪಿಸಿದ ಸಾಂತಾಕ್ಲಾಸ್; ವಿಡಿಯೋ ವೈರಲ್

ಕ್ರಿಸ್‌ಮಸ್ ಹಬ್ಬದಂದು ಸಾಂಟಾ ಕ್ಲಾಸ್ ಹರೇ ರಾಮ ಹರೇ ಕೃಷ್ಣ ಮಂತ್ರಗಳನ್ನು ಜಪಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. @jpsin1 ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಸಾಂಟಾ ಜೊತೆಗೆ ಇತರರು ಭಜನೆಗಳನ್ನು ಹಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಲಕ್ಷಾಂತರ ಜನರನ್ನು ತಲುಪಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Merry Christmas 2024: ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ

Christmas Day Celebrations: ಇಂದು ನಾಡಿನೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ ಮನೆ ಮಾಡಿದ್ದು, ಕ್ರೈಸ್ತ ಬಾಂಧವರು ಎಲ್ಲೆಡೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಶಿವಾಜಿನಗರದಲ್ಲಿರುವ ಸೆಂಟ್‌ ಮೇರಿ ಬೆಸಿಲಿಕಾ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಗುತ್ತಿದೆ. ಇಂದು ಯೇಸುವಿನ ಜನ್ಮದಿನ ಹಿನ್ನೆಲೆ ಅದ್ದೂರಿ ಹಬ್ಬ ಆಚರಣೆ ಮಾಡಲಾಗುತ್ತಿದೆ.

Christmas 2024: ಕ್ರಿಸ್ ಮಸ್ ಹಬ್ಬದ ಆಚರಣೆಯೂ ಆರಂಭವಾದದ್ದು ಹೇಗೆ? ಏನಿದರ ಮಹತ್ವ? ಇಲ್ಲಿದೆ ಮಾಹಿತಿ

ಕ್ರಿಸ್ಮಸ್ ಹಬ್ಬ ಕ್ರೈಸ್ತ ಧರ್ಮಿಯರ ಪ್ರಮುಖ ಹಬ್ಬಗಳಲ್ಲಿ ಒಂದು. ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಡಿಸೆಂಬರ್ 25 ರಂದು ಆಚರಿಸಲಾಗುತ್ತದೆ. ಈ ಹಬ್ಬದ ದಿನ ಪರಸ್ಪರ ಕ್ರಿಸ್ಮಸ್ ಕಾರ್ಡ್‌, ಉಡುಗೊರೆ ನೀಡುವುದು, ಸಿಹಿ ತಿಂಡಿಗಳನ್ನು ಹಂಚುವುದು ಹಾಗೂ ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವ ಮೂಲಕ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಕ್ರಿಸ್ ಮಸ್ ಹಬ್ಬದ ಇತಿಹಾಸ, ಮಹತ್ವ, ಆಚರಣೆ ಕುರಿತಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

Viral: ಸೀಕ್ರೆಟ್‌ ಸಾಂತ ಕಾರ್ಯಕ್ರಮ ಸ್ಥಗಿತಗೊಳಿಸಿದ ಕಬ್ಬನ್‌ ಪಾರ್ಕ್‌ ಆಡಳಿತ ಮಂಡಳಿ

ಡಿಸೆಂಬರ್‌ 21 ಶನಿವಾರದಂದು ಕಬ್ಬನ್‌ ರೀಡ್ಸ್‌ ಸಂಸ್ಥೆ ಕಬ್ಬನ್‌ ಪಾರ್ಕ್‌ನಲ್ಲಿ ಸೀಕ್ರೆಟ್‌ ಸಾಂತ ಕಾರ್ಯಕ್ರವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 500 ರಿಂದ 600 ರಷ್ಟು ಜನ ಭಾಗವಹಿಸಿದ್ದು, ಹಲವಾರು ಉಡುಗೊರೆಗಳನ್ನು ಕೂಡಾ ತರಲಾಗಿತ್ತು. ಮಾರ್ಗಸೂಚಿ ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಕಬ್ಬನ್‌ ಪಾರ್ಕ್‌ ಆಡಳಿತ ಮಂಡಳಿ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಿತ್ತು. ಇದೀಗ ಈ ಬಗ್ಗೆ ಸೀಕ್ರೆಟ್‌ ಸಾಂತ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದ್ದು ಮಾತ್ರವಲ್ಲದೆ ಧಮ್ಕಿ ಹಾಕಿ ನಮ್ಮನ್ನು ಹೊರ ದಬ್ಬಿದ್ರು ಎಂದು ಆಡಳಿತ ಮಂಡಳಿಯ ವಿರುದ್ಧ ಕಬ್ಬನ್‌ ರೀಡ್ಸ್‌ ಗಂಭೀರ ಆರೋಪವನ್ನು ಮಾಡಿದೆ.

Christmas Wishes 2024: ಕ್ರಿಸ್‌ಮಸ್‌ ಹಬ್ಬಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳು ಕೋರಲು ಇಲ್ಲಿದೆ ಸಂದೇಶಗಳು

ಕ್ರಿಸ್‌ಮಸ್ ಕ್ರೈಸ್ತ ಧರ್ಮಿಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು. ಪ್ರತಿ ವರ್ಷ ಡಿಸೆಂಬರ್‌ 25ರಂದು ಪ್ರಪಂಚದಾದಂತ್ಯ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸಂಭ್ರಮದಿಂದ ಆಚರಿಸುವ ಈ ಕ್ರಿಸ್ಮಸ್ ಹಬ್ಬಕ್ಕೆ ಒಂದೆರಡು ದಿನಗಳಷ್ಟೇ ಬಾಕಿಯಿವೆ. ಈ ಹಬ್ಬಕ್ಕೆ ಶುಭಾಶಯಗಳ ಕೋರಲು ಒಂದೊಳ್ಳೆ ಸಂದೇಶಗಳಿಗಾಗಿ ಹುಡುಕಾಡುತ್ತಿದ್ದೀರಾ. ಹಾಗಾದ್ರೆ ನಿಮ್ಮ ಪ್ರೀತಿ ಪಾತ್ರರಿಗೆ ವಿಭಿನ್ನವಾಗಿ ಶುಭಾಶಯಗಳನ್ನು ಕೋರಲು ಇಲ್ಲಿದೆ ಸಂದೇಶಗಳು.

ಕ್ರಿಸ್​​ಮಸ್ ಹಬ್ಬ: ಬೆಂಗಳೂರು-ಕಲಬುರಗಿ-ಮಂಗಳೂರಿಗೆ ವಿಶೇಷ ರೈಲು

ಕ್ರಿಸ್​ಮಸ್​ ಹಬ್ಬದ ಸಂದರ್ಭದಲ್ಲಿ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆ ಬೆಂಗಳೂರು-ಕಲಬುರಗಿ ಮತ್ತು ಯಶವಂತಪುರ-ಮಂಗಳೂರು ಮಾರ್ಗಗಳಲ್ಲಿ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ರೈಲು ಸಂಖ್ಯೆ, ಸಮಯ, ನಿಲುಗಡೆಗಳ ಮಾಹಿತಿಯನ್ನು ರೈಲ್ವೆ ವೆಬ್‌ಸೈಟ್ ಅಥವಾ 139 ಸಹಾಯವಾಣಿ ಮೂಲಕ ಪಡೆಯಬಹುದು. ಈ ವಿಶೇಷ ರೈಲುಗಳು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Viral Video: ಇಷ್ಟು ಮುದ್ದಾಗಿರುವ ಕ್ರಿಸ್ಮಸ್ ಟ್ರೀ ನೀವು ಎಲ್ಲೂ ನೋಡಿರಲ್ಲ!

ಸಾಮಾಜಿಕ ಮಾಧ್ಯಮದಲ್ಲಿ ನಾಯಿಗಳನ್ನು ಕ್ರಿಸ್ಮಸ್ ಟ್ರೀಯಾಗಿ ಅಲಂಕರಿಸಿದ ವೀಡಿಯೊ ವೈರಲ್ ಆಗಿದೆ. ಕೆಲವರು ಇದನ್ನು ಮುದ್ದಾದ ವಿಡಿಯೋ ಎಂದು ಹೊಗಳಿದರೆ, ಇನ್ನು ಕೆಲವರು ಪ್ರಾಣಿಗಳನ್ನು ಈ ರೀತಿ ಬಳಸುವುದನ್ನು ಖಂಡಿಸಿದ್ದಾರೆ. @pachacriollita ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಸದ್ಯ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ.

New Year: ಕ್ರಿಸ್​ಮಸ್, ಹೊಸ ವರ್ಷ ಪ್ರಯುಕ್ತ ರಾಜ್ಯದ ಈ ನಗರಗಳಿಗೆ ವಿಶೇಷ ರೈಲು

ಕ್ರಿಸ್​ಮಸ್ ಹಾಗೂ ಹೊಸ ವರ್ಷದ ಆಚರಣೆಗಾಗಿ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಈ ರೈಲುಗಳು ಬೆಂಗಳೂರು, ವಾಸ್ಕೋ ಡ ಗಾಮಾ ಮತ್ತು ಮಂಗಳೂರು ಸಂಪರ್ಕ ಕಲ್ಪಿಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲುಗಳ ಸಮಯಕೋಷ್ಟಕ ಮತ್ತು ನಿಲ್ದಾಣಗಳ ಮಾಹಿತಿಯನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಿದೆ.

Christmas 2024 : ಕ್ರಿಸ್ಮಸ್ ಹಬ್ಬಕ್ಕೆ ಮನೆಯನ್ನು ಈ ರೀತಿ ಶೃಂಗರಿಸಿ ಅಂದ ಹೆಚ್ಚಿಸಿ

ಹಬ್ಬಗಳು ಹತ್ತಿರ ಬರುತ್ತಿದ್ದಂತೆ ಎಷ್ಟು ಸಮಯವಿದ್ದರೂ ಸಾಲುವುದಿಲ್ಲ. ಡಿಸೆಂಬರ್ ತಿಂಗಳಲ್ಲಿ ಬರುವ ಈ ಕ್ರಿಸ್ಮಸ್ ಹಬ್ಬದ ಪೂರ್ವತಯಾರಿಯು ಒತ್ತಡದಿಂದ ಕೂಡಿರುತ್ತದೆ. ಹೀಗಾಗಿ ಕ್ರಿಸ್ಮಸ್ ಹಬ್ಬಕ್ಕೆ ದಿನಗಳು ಇರುವಾಗಲೇ ಸಿದ್ಧತೆಗಳು ಹಾಗೂ ಮನೆಯ ಅಲಂಕಾರದ ಕಡೆಗೆ ಹೆಚ್ಚು ಗಮನ ಕೊಡುವುದು ಸೂಕ್ತ. ಹಬ್ಬದ ಸಮಯದಲ್ಲಿ ಮಾಡುವ ಅಲಂಕಾರಗಳು ಹಬ್ಬದ ಮೆರಗು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಈ ಬಾರಿ ಕ್ರಿಸ್ಮಸ್ ಹಬ್ಬಕ್ಕೆ ತಯಾರಿ ನಡೆಸಲು ಶುರು ಮಾಡಿದ್ದರೆ ಈ ಕೆಲವು ಟಿಪ್ಸ್ ಗಳನ್ನು ಅನುಸರಿಸಿ ಮನೆಯನ್ನು ಇನ್ನಷ್ಟು ಸುಂದರಗೊಳಿಸಬಹುದು.

ಕ್ರಿಸ್‌ಮಸ್‌ ಹಬ್ಬದ ಸಮಯದಲ್ಲಿ ನಮ್ಮ ಕರ್ನಾಟಕದಲ್ಲಿ ನೀವು ಭೇಟಿ ನೀಡಲೇಬೇಕಾದ ಸ್ಥಳಗಳಿವು

ಇನ್ನೇನೂ ಕ್ರಿಸ್ಮಸ್‌ ಬಂದೇ ಬಿಡ್ತು. ಈ ಕ್ರಿಸ್ಮಸ್‌ ಹಬ್ಬದ ಸಮಯದಲ್ಲಿ ಹೆಚ್ಚಿನವರು ಯುರೋಪ್‌ನಂತಹ ದೇಶಗಳಿಗೆ ಭೇಟಿ ನೀಡಲು ಇಷ್ಟ ಪಡ್ತಾರೆ. ಯುರೋಪ್‌ ಟ್ರಿಪ್‌ ತುಂಬಾ ದುಬಾರಿ, ಭಾರತದಲ್ಲಿಯೇ ಟ್ರಿಪ್‌ ಹೋಗುವ ಮೂಲಕ ಕ್ರಿಸ್ಮಸ್‌ ರಜೆಯನ್ನು ಎಂಜಾಯ್‌ ಮಾಡೋಣ ಎಂಬ ಯೋಜನೆಯಲ್ಲಿದ್ದರೆ, ಕಡಿಮೆ ಬಜೆಟ್‌ನಲ್ಲಿ ನಮ್ಮ ಕರ್ನಾಟಕದ ಈ ಕೆಲವು ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನೀವು ಕ್ರಿಸ್ಮಸ್‌ ಹಬ್ಬದ ಅನುಭವವನ್ನು ಪಡೆಯಬಹುದು.

ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಯುದ್ಧದ ಭೀತಿ; ಎಲ್​ಒಸಿಗೆ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಭೇಟಿ?
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಧೋನಿ ಸೇರಿದಂತೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದ ಚಾಹಲ್
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಯುದ್ಧ ನಡೆದರೆ ಪಾಕಿಸ್ತಾನಕ್ಕೆ ಉಳಿಗಾಲವಿಲ್ಲ ಅನ್ನೋದು ಮೇಲ್ನೋಟಕ್ಕೆ ಸ್ಪಷ್ಟ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ಪ್ರಧಾನಿ ಮೋದಿ ಉಗ್ರರಿಗೆ ತಕ್ಕ ಪಾಠ ಕಲಿಸದೆ ಬಿಡೋದಿಲ್ಲ: ರಾಜೇಶ್ವರಿ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ತಾನು ಯುದ್ಧ ಬೇಡ ಅನ್ನಲ್ಲ ಅಂತ ಮತ್ತೊಮ್ಮೆ ಹೇಳಿದ ಸಿದ್ದರಾಮಯ್ಯ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಉಗ್ರರು ಮತ್ತು ಅವರ ಸಂಘಟನೆಗಳಿಂದ ಅಂತರ ಕಾಯ್ದುಕೊಳ್ಳಲು ಸೂಚನೆ
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಬಸ್​ ನಿಲ್ಲಿಸಿ ನಮಾಜ್​ ಮಾಡಿದ ಕೆಎಸ್​ಆರ್​ಟಿಸಿ ಚಾಲಕ, ವಿಡಿಯೋ ವೈರಲ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
ಶಿಲ್ಲಾಂಗ್-ಶಿಲಚರ್ ನಡುವೆ 22,864 ಕೋಟಿ ವೆಚ್ಚದಲ್ಲಿ ಹೈ ಸ್ಪೀಡ್ ಕಾರಿಡಾರ್
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’
‘ಕರುಣೆಯೇ ಬೇಡ ಹಿಡಿ, ಹೊಡಿ, ಕಡಿ ಅಷ್ಟೇ ಬೇಕಿರೋದು’