Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video:'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್; ವಿಡಿಯೋ ವೈರಲ್

Viral Video:’ಹರೇ ರಾಮ, ಹರೇ ಕೃಷ್ಣ’ ಮಂತ್ರ ಜಪಿಸಿದ ಸಾಂತಾಕ್ಲಾಸ್; ವಿಡಿಯೋ ವೈರಲ್

ಅಕ್ಷತಾ ವರ್ಕಾಡಿ
|

Updated on:Dec 26, 2024 | 2:38 PM

ಕ್ರಿಸ್‌ಮಸ್ ಹಬ್ಬದಂದು ಸಾಂಟಾ ಕ್ಲಾಸ್ ಹರೇ ರಾಮ ಹರೇ ಕೃಷ್ಣ ಮಂತ್ರಗಳನ್ನು ಜಪಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. @jpsin1 ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಸಾಂಟಾ ಜೊತೆಗೆ ಇತರರು ಭಜನೆಗಳನ್ನು ಹಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಲಕ್ಷಾಂತರ ಜನರನ್ನು ತಲುಪಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ನಿನ್ನೆ ಅಂದರೆ ಡಿಸೆಂಬರ್ 25 ರಂದು ವಿಶ್ವದಾದ್ಯಂತ ಕ್ರಿಸ್‌ಮಸ್ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಇದೀಗ ಕ್ರಿಸ್‌ಮಸ್ ಹಬ್ಬದ ನಡುವೆ ಸಾಂತಾಕ್ಲಾಸ್ ಹರೇ ರಾಮ, ಹರೇ ಕೃಷ್ಣ ಮಂತ್ರ ಜಪಿಸಿದ ಮಂತ್ರ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​ ಆಗಿದೆ. @jpsin1 ಎಂಬ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಅಲ್ಲಿದ್ದವರು ಭಜನೆಗಳನ್ನು ಹಾಡುವುದರ ಜೊತೆಗೆ, ಸಾಂತಾಕ್ಲಾಸ್ ಕೂಡ ಹರೇ ರಾಮ್ ಹರೇ ಕೃಷ್ಣ ಭಜನೆಯನ್ನು ಹಾಡಲು ಪ್ರಾರಂಭಿಸುವುದನ್ನು ಕಾಣಬಹುದು.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 26, 2024 02:37 PM