ರಚಿತಾ ರಾಮ್ ಮೇಲೆ ವಾಣಿಜ್ಯ ಮಂಡಳಿ ಅಧ್ಯಕ್ಷರು ಗರಂ; ಕಾರಣ ಏನು?
ನಟಿ ರಚಿತಾ ರಾಮ್ ಹಾಗೂ ‘ಸಂಜು ವೆಡ್ಸ್ ಗೀತಾ 2’ ಸಿನಿಮಾ ತಂಡದ ನಡುವೆ ಕಿರಿಕ್ ಆಗಿದೆ. ಈ ಬಗ್ಗೆ ನಿರ್ದೇಶಕ ನಾಗಶೇಖರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು. ಆದರೆ ರಚಿತಾ ರಾಮ್ ಅವರನ್ನು ವಾಣಿಜ್ಯ ಮಂಡಳಿಗೆ ಕರೆಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿದ್ದಾರೆ.
ನಟಿ ರಚಿತಾ ರಾಮ್ ಹಾಗೂ ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಸಿನಿಮಾ ತಂಡದ ನಡುವೆ ಕಿರಿಕ್ ಆಗಿದೆ. ಈ ಬಗ್ಗೆ ನಿರ್ದೇಶಕ ನಾಗಶೇಖರ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (KFCC) ದೂರು ನೀಡಿದ್ದರು. ಆದರೆ ರಚಿತಾ ರಾಮ್ (Rachita Ram) ಅವರನ್ನು ವಾಣಿಜ್ಯ ಮಂಡಳಿಗೆ ಕರೆಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮಂಡಳಿ ಅಧ್ಯಕ್ಷ ನರಸಿಂಹಲು ಮಾತನಾಡಿದ್ದಾರೆ. ‘ಎಷ್ಟು ಬಾರಿ ಸಿನಿಮಾ ಬಿಡುಗಡೆ ಆದರೂ ಕಲಾವಿದರು ಪ್ರಚಾರಕ್ಕೆ ಬಂದು ಬೆಂಬಲ ನೀಡಲೇಬೇಕು. ಯಾಕೆಂದರೆ ಸಿನಿಮಾ ರಂಗದಿಂದಲೇ ನೀವು ಹಣ, ಹೆಸರು ಗಳಿಸಿದ್ದೀರಿ. ವಾಣಿಜ್ಯ ಮಂಡಳಿಗಾದರೂ ಸ್ಪಂದಿಸಬೇಕು. ಯಾರೋ ಪಿಎಗಳಿಂದ ಮಾತನಾಡಿಸೋದಲ್ಲ’ ಎಂದು ನರಸಿಂಹಲು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.