ಸ್ಟೀಲ್ನಿಂದ ತಯಾರಿಸಿದ ವಸ್ತುಗಳನ್ನು ಧರಿಸಬಹುದೇ? ಆಧ್ಯಾತ್ಮಿಕ ವಿವರಣೆ ಇಲ್ಲಿದೆ
ಈ ದೈನಂದಿನ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ಅವರು ಸ್ಟೀಲ್ ಆಭರಣ ಧರಿಸುವುದರ ಬಗ್ಗೆ ಚರ್ಚಿಸುತ್ತಾರೆ. ಸ್ಟೀಲ್‌ನಲ್ಲಿರುವ ಕಬ್ಬಿಣದ ಅಂಶ ಮತ್ತು ಶನಿ ದೇವರೊಂದಿಗಿನ ಸಂಬಂಧವನ್ನು ವಿವರಿಸುತ್ತಾ, ಪೂಜೆ ಮತ್ತು ದೈನಂದಿನ ಜೀವನದಲ್ಲಿ ಇದರ ಪರಿಣಾಮಗಳನ್ನು ತಿಳಿಸುತ್ತಾರೆ. ತಾಮ್ರ ಅಥವಾ ಇತರ ಲೋಹಗಳ ಬಳಕೆಯನ್ನು ಪರ್ಯಾಯವಾಗಿ ಸೂಚಿಸಲಾಗಿದೆ.
ಸ್ಟೀಲ್ ಆಭರಣ ಧರಿಸುವುದರ ಶುಭ-ಅಶುಭ ಫಲಗಳ ಬಗ್ಗೆ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ಗುರೂಜಿ ಚರ್ಚಸಿದ್ದಾರೆ. ಸ್ಟೀಲ್‌ನಲ್ಲಿರುವ ಕಬ್ಬಿಣದ ಅಂಶವು ಶನಿ ದೇವರಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತದೆ. ಹಿಂದೆ ಬಿದಿರಿನ ಬುಟ್ಟಿಯಲ್ಲಿ ಪೂಜಾ ಸಾಮಗ್ರಿಗಳನ್ನು ಇಡುವುದು ಸಾಮಾನ್ಯವಾಗಿತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ಈ ಆಚಾರಗಳು ಕಡಿಮೆಯಾಗಿವೆ. ಸ್ಟೀಲ್ ಆಭರಣಗಳ ಬದಲು ತಾಮ್ರ ಅಥವಾ ಹಿತ್ತಾಳೆಯನ್ನು ಬಳಸುವುದು ಉತ್ತಮ ಎಂದು ಅವರು ಸೂಚಿಸಿದ್ದಾರೆ. ಸ್ಟೀಲ್ ಚೈನ್‌ಗಳು, ಕಡಗಗಳು ಮನಸ್ಸನ್ನು ಚಂಚಲಗೊಳಿಸಬಹುದು ಮತ್ತು ಅದೃಷ್ಟಕ್ಕೆ ಅಡ್ಡಿಯಾಗಬಹುದು ಎಂದು ಅವರು ಹೇಳಿದ್ದಾರೆ. ಹೆಚ್ಚಿನ ವಿರಗಳಿಗೆ ವಿಡಿಯೋ ನೋಡಿ.