AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್‌ಡೌನ್ ಸಮಯದಲ್ಲಿ ಅನಾಥರಾದ ಮಕ್ಕಳ ಸಂಖ್ಯೆಯನ್ನು ನಾವು ನಂಬಲು ಸಿದ್ಧರಿಲ್ಲ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ

Supreme Court: "ನೀವು (ಬಂಗಾಳ ಸರ್ಕಾರದ ವಕೀಲರು) ಕೇವಲ 27 ಮಕ್ಕಳನ್ನು ಮಾತ್ರ ಅನಾಥರು ಎಂದು ಹೇಳುತ್ತಿದ್ದರೆ ನಾವು ಹೇಳಿಕೆಯನ್ನು ದಾಖಲಿಸುತ್ತೇವೆ (ಆದರೆ) ಬಂಗಾಳ ದೊಡ್ಡ ರಾಜ್ಯ ... ಈ ಅಂಕಿ ಅಂಶವನ್ನು ನಂಬಲು ನಾವು ಸಿದ್ಧರಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಲಾಕ್‌ಡೌನ್ ಸಮಯದಲ್ಲಿ ಅನಾಥರಾದ ಮಕ್ಕಳ ಸಂಖ್ಯೆಯನ್ನು ನಾವು ನಂಬಲು ಸಿದ್ಧರಿಲ್ಲ: ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಖಡಕ್ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jul 27, 2021 | 4:49 PM

Share

ದೆಹಲಿ: ಕೊವಿಡ್ ಲಾಕ್‌ಡೌನ್ ಸಮಯದಲ್ಲಿ ಪೋಷಕರ ನಿಧನದಿಂದಾಗಿ ಅನಾಥರಾದ ಮಕ್ಕಳ ಬಗ್ಗೆ ಬಂಗಾಳ ಸರ್ಕಾರದ ಅಂಕಿಅಂಶಗಳು “ಸ್ವೀಕಾರಾರ್ಹವಲ್ಲ” ಎಂದು ಸುಪ್ರೀಂಕೋರ್ಟ್ ಮಂಗಳವಾರ ಹೇಳಿದೆ. ಅದೇ ವೇಳೆ ಸರಿಯಾದ ಮಾಹಿತಿಯನ್ನು ಒದಗಿಸದಿದ್ದರೆ ತನಿಖೆಗೆ ಆದೇಶಿಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇದು ಮಕ್ಕಳ ಕಲ್ಯಾಣ ವಿಷಯವಾಗಿದ್ದು, ಇದನ್ನು ರಾಜಕೀಯ ವಿಷಯವಾಗಿ ನೋಡಬಾರದು ಎಂದು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ನೇತೃತ್ವದ ಇಬ್ಬರು ನ್ಯಾಯಾಧೀಶರ ಪೀಠ ಹೇಳಿದೆ.

ಲಾಕ್‌ಡೌನ್ ಸಮಯದಲ್ಲಿ 27 ಮಕ್ಕಳನ್ನು ಅನಾಥರಾಗಿದ್ದಾರೆ ಎಂದು ಈ ಹಿಂದೆ ಬಂಗಾಳ ಸರ್ಕಾರ ಹೇಳಿತ್ತು. ರಾಜ್ಯದ ಸಾಂಕ್ರಾಮಿಕ ಮತ್ತು ಗಾತ್ರದ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ಉನ್ನತ ನ್ಯಾಯಾಲಯವು ಇದು ನಂಬಲಸಾಧ್ಯವಾಗಿದೆ ಎಂದಿದೆ.

“ನೀವು (ಬಂಗಾಳ ಸರ್ಕಾರದ ವಕೀಲರು) ಕೇವಲ 27 ಮಕ್ಕಳನ್ನು ಮಾತ್ರ ಅನಾಥರು ಎಂದು ಹೇಳುತ್ತಿದ್ದರೆ ನಾವು ಹೇಳಿಕೆಯನ್ನು ದಾಖಲಿಸುತ್ತೇವೆ (ಆದರೆ) ಬಂಗಾಳ ದೊಡ್ಡ ರಾಜ್ಯ … ಈ ಅಂಕಿ ಅಂಶವನ್ನು ನಂಬಲು ನಾವು ಸಿದ್ಧರಿಲ್ಲ” ಎಂದು ನ್ಯಾಯಾಲಯ ಹೇಳಿದೆ.  ಈ ಡೇಟಾವನ್ನು ಸಂಗ್ರಹ “ನಡೆಯುತ್ತಿರುವ” ಪ್ರಕ್ರಿಯೆ ಎಂದು ರಾಜ್ಯದ ವಕೀಲರು ಹೇಳಿದ್ದಾರೆ.

ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡಬೇಡಿ ಮತ್ತು ಸಬೂಬು ಕೊಡಬೇಡಿ. ಪರಿಸ್ಥಿತಿಯ ತುರ್ತುನ್ನು ಅರ್ಥಮಾಡಿಕೊಳ್ಳಿ. ಅನಾಥರು ತಮ್ಮನ್ನು ತಾವೇ ರಕ್ಷಿಸಿಕೊಳ್ಳುವಲ್ಲಿ ಉಳಿದಿದ್ದಾರೆ. ಅವರನ್ನು ರಕ್ಷಿಸಬೇಕಾದವರು ನೀವು, ನಾವಲ್ಲ. ಮಕ್ಕಳಿಗೆ ಅವರ ಹಕ್ಕು ಸಿಗಬೇಕೆಂದು ನಾವು ಖಾತ್ರಿ ಎಂದು ನ್ಯಾಯಮೂರ್ತಿ ರಾವ್ ಹೇಳಿದ್ದಾರೆ.

“ಅಂತಹ ನಿಲುವನ್ನು ತೆಗೆದುಕೊಳ್ಳಬೇಡಿ. ಇದು ರಾಜಕೀಯ ವಿಷಯವಲ್ಲ, ಇದು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದೆ.” ಎಂದು ಹೇಳಿದ ನ್ಯಾಯಾಲಯವು ಸಂಬಂಧಪಟ್ಟ ಸರ್ಕಾರಿ ಇಲಾಖೆಯ ಕಾರ್ಯದರ್ಶಿಗೆ ಅಫಿಡವಿಟ್ ಸಲ್ಲಿಸುವಂತೆ ಕೇಳಿಕೊಂಡಿತು.

ಇದನ್ನೂ ಓದಿ:ಯಡಿಯೂರಪ್ಪಗೆ ವಯಸ್ಸು 75 ವರ್ಷ: ಅವರಿಗೆ ಈಗ ಮದುವೆ ಮಾಡಿದ್ರೂ ಎರಡು ಮಕ್ಕಳಾಗುತ್ತದೆ- ಕಾಂಗ್ರೆಸ್ ಎಂಎಲ್​ಸಿ ಸಿ.ಎಂ. ಇಬ್ರಾಹಿಂ 

ಇದನ್ನೂ ಓದಿ: ‘ಅವರಿಗೆ ಬೇರೆ ಆಯ್ಕೆ ಇಲ್ಲ ಕೊವಿಡ್ ಸಾಂಕ್ರಾಮಿಕದ ನಡುವೆ ಭಿಕ್ಷಾಟನೆ ತಡೆಯುವ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

(West Bengal government data Of Orphaned Children was unacceptable says Supreme Court)