ಯಡಿಯೂರಪ್ಪಗೆ ವಯಸ್ಸು 75 ವರ್ಷ: ಅವರಿಗೆ ಈಗ ಮದುವೆ ಮಾಡಿದ್ರೂ ಎರಡು ಮಕ್ಕಳಾಗುತ್ತದೆ- ಕಾಂಗ್ರೆಸ್ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ
ಅಕ್ಟೋಬರ್ನಲ್ಲಿ ಅಲ್ಪಸಂಖ್ಯಾತರ ಸೇರಿ ಸಭೆ ನಡೆಯಲಿದೆ. ಹೀರಾ-ಪೀರಾ ಸಭೆ ಕರೆದು ರಾಜ್ಯದ ಹಿತಾಸಕ್ತಿ ಕಾಪಾಡಲು ಏನು ಕ್ರಮ ಕೈಗೊಳ್ಳಬೇಕು ಅನ್ನೋದನ್ನು ನಿರ್ಧರಿಸುತ್ತೇವೆ. ಈ ತಿಂಗಳಲ್ಲಿ ಅಲ್ಪಸಂಖ್ಯಾತರ ಸಭೆ ಕರೆದಿದ್ದೇನೆ.
ಬೆಂಗಳೂರು: ಕೇರಳದಲ್ಲಿ ಶ್ರೀಧರನ್ 80 ವರ್ಷದ ಮುದಿಯಾ, ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ ಇಲ್ಲಿ ಯಡಿಯೂರಪ್ಪಗೆ 75 ವರ್ಷ ವಯಸ್ಸು. ಇಲ್ಲಿ ವಯಸ್ಸಾಯ್ತು ಅಂತ ಕಿತ್ತು ಹಾಕಿದ್ದಾರೆ. ಯಡಿಯೂರಪ್ಪ ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ ಅಂತ ಕಾಂಗ್ರೆಸ್ ಎಂಎಲ್‌ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಆರೂವರೆ ಕೋಟಿ ಜನರಿರುವ ರಾಜ್ಯದಲ್ಲಿ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ಅಕ್ಟೋಬರ್ನಲ್ಲಿ ಅಲ್ಪಸಂಖ್ಯಾತರ ಸಭೆ ನಡೆಯಲಿದೆ. ಹೀರಾ-ಪೀರಾ ಸಭೆ ಕರೆದು ರಾಜ್ಯದ ಹಿತಾಸಕ್ತಿ ಕಾಪಾಡಲು ಏನು ಕ್ರಮ ಕೈಗೊಳ್ಳಬೇಕು ಅನ್ನೋದನ್ನು ನಿರ್ಧರಿಸುತ್ತೇವೆ. ಈ ತಿಂಗಳಲ್ಲಿ ಅಲ್ಪಸಂಖ್ಯಾತರ ಸಭೆ ಕರೆದಿದ್ದೇನೆ. ಯಡಿಯೂರಪ್ಪ ಲವಲವಿಕೆಯಿಂದ ಇದ್ದಾರೆ. ರಾಜ್ಯಪಾಲರ ಹುದ್ದೆ ತಿರಸ್ಕರಿಸಿದ್ದಾರೆ. ಕನ್ನಡಿಗರು ನೀಡುವವರು, ಬೇಡುವವರಲ್ಲ. ಯಡಿಯೂರಪ್ಪ ಮೇಲೆ ಆರೋಪ, ಪ್ರತ್ಯಾರೋಪ ಇರಬಹುದು, ಅದು ಬೇರೆ. ಅಧಿಕಾರ ಇದ್ದಾಗ ನಾನು ದೂರ ಇರುವ ಮನುಷ್ಯ ಎಂದು ಇಬ್ರಾಹಿಂ ತಿಳಿಸಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ನೀಡಿರುವುದರಿಂದ ಭೇಟಿ ಮಾಡಲು ಬಂದಿದ್ದೇನೆ. ಸಿಎಂ ಯಾರೇ ಆಗಲಿ, ಅದನ್ನು ನಮ್ಮ ಜನ ಒಪ್ಪಲ್ಲ. ನಾನು ಏನು ಹೇಳಿದ್ರೂ, ನಂಬುತ್ತಿರಲಿಲ್ಲ. ಈಗ ಸಿಕ್ಸ್ತ್ ಸೆನ್ಸ್ ಪ್ರಕಾರ ನಡೆದಿದೆ. ನಾವು ಸಾದು ಸಂತರ ಜೊತೆ ಇದ್ದವರು. ಮಠದ ಸ್ವಾಮಿಗಳು ಕಾವಿ ಹಾಕಿಕೊಂಡು ವಿದ್ಯೆ, ಅನ್ನ ಕೊಟ್ಟಿದ್ದಾರೆ. ರಾಜ್ಯದಲ್ಲಿ ಹೊಸ ಪರ್ವ ಶುರುವಾಗಲಿದೆ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಬರಲಿಲ್ಲ. ಮಠದ ದಾಸೋಹಿ ನಾನು, ಯಡಿಯೂರಪ್ಪ ಭೇಟಿ ಆಗಲು ಬಂದೆ. ನಮ್ಮ ನಾಡು, ನಮ್ಮ ನೆಲ, ನಮ್ಮ ಜಲ ನಮ್ಮ ನಾಯಕನನ್ನ ಆಯ್ಕೆ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಬಿಎಸ್‌ವೈ ಸಿಎಂ ಆಗಿದ್ದಾಗ ಅವರ ಮನೆಗೆ ಹೋಗಿರಲಿಲ್ಲ. ಯಡಿಯೂರಪ್ಪನವರ ಕಚೇರಿಗೂ ನಾನು ಹೋಗಿರಲಿಲ್ಲ. ಆದರೆ ಈಗ ಬಿಎಸ್‌ವೈ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯೂ ಅಂಗೀಕಾರವಾಗಿದೆ. ಹೀಗಾಗಿ ಅವರಿಗೆ ಧೈರ್ಯ ಹೇಳಲು ಹೋಗಿದ್ದೇನೆ. ಜೈ ವೀರಭದ್ರ ಎದ್ದೇಳು ರುದ್ರಾ ರೆಡಿಯಾಗು ಎಂದಿದ್ದೇನೆ ಅಂತ ಬಿಎಸ್‌ವೈ ಭೇಟಿ ಬಳಿಕ ಎಂಎಲ್‌ಸಿ ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ
ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಫಿಕ್ಸ್ ಆಯ್ತು, ಇಂದೇ ಹೊಸ ಮುಖ್ಯಮಂತ್ರಿ ಆಯ್ಕೆ?
ಸಚಿವ ಸ್ಥಾನ ಸಿಗದಿದ್ರೆ ಎಲ್ಲಾ ಅಳಲನ್ನು ಮುಂದಿನ ದಿನಗಳಲ್ಲಿ ತೋಡಿಕೊಳ್ತೇನೆ -ಬಿಜೆಪಿ ಶಾಸಕ ದುರ್ಯೋಧನ ಐಹೊಳೆ
(BS Yediyurappa is 75 year old, if Yediyurappa got married he would have two children said CM Ibrahim)
Published On - 2:14 pm, Tue, 27 July 21