ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ಮುಖ್ಯಸ್ಥರು ರಜೆಯಲ್ಲಿದ್ದಾರೆ ಆದರೆ ತನಿಖಾ ವರದಿ ಮಾಹಿತಿ ಸೋರಿಕೆಯಾಗಿದೆ -ಆರೋಪ
ಎಸ್ಐಟಿ ತನಿಖೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ತನಿಖೆಯ ವರದಿ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಎಸ್ಐಟಿ ಮುಖ್ಯಸ್ಥರು ಈವರೆಗೂ ರಜೆಯಲ್ಲಿದ್ದಾರೆ ಎಂದು ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆರೋಪ ಮಾಡಿದ್ದಾರೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ತನಿಖೆ ಪ್ರಶ್ನಿಸಿದ್ದ ಪಿಐಎಲ್ ವಿಚಾರಣೆ ತನಿಖೆಯ ವರದಿ ಬಗ್ಗೆ ಮಾಹಿತಿ ಸೋರಿಕೆಯಾಗಿದೆ. ಎಸ್ಐಟಿ ಮುಖ್ಯಸ್ಥರು ಈವರೆಗೂ ರಜೆಯಲ್ಲಿದ್ದಾರೆ ಎಂದು ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಸರ್ಕಾರದಿಂದ ವಿವರಣೆ ನೀಡುವಂತೆ ಹೈಕೋರ್ಟ್ ಕೇಳಿದ್ದು ಎಸ್ಐಟಿ ಮುಖ್ಯಸ್ಥರು ವರದಿಗೆ ಸಹಿ ಹಾಕಿಲ್ಲ. ಉಸ್ತುವಾರಿ ಸಂದೀಪ್ ಪಾಟೀಲ್ ಕೂಡ ವರದಿಗೆ ಸಹಿ ಹಾಕಿಲ್ಲ. ಮೇ 1ರಿಂದ ಎಸ್ಐಟಿ ಮುಖ್ಯಸ್ಥರು ರಜೆಯಲ್ಲಿದ್ದಾರೆ. ಮುಖ್ಯಸ್ಥರೇ ಇಲ್ಲದೇ SIT ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂದು ಯುವತಿ ಪರ ವಕೀಲೆ ಇಂದಿರಾ ಜೈಸಿಂಗ್ ಆರೋಪ ಮಾಡಿದ್ದಾರೆ. ಹಾಗೂ ಸೌಮೇಂದು ಮುಖರ್ಜಿ ಅನಿರ್ದಿಷ್ಟಾವಧಿ ರಜೆಯಲ್ಲಿದ್ದಾರಾ? ಎಸ್ಐಟಿಗೆ ಬೇರೆ ಮುಖ್ಯಸ್ಥರನ್ನು ಏಕೆ ನೇಮಿಸಿಲ್ಲ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸದಂತೆ ಹೈಕೋರ್ಟ್ ಸೂಚನೆ ನೀಡಿದ್ದು ವಿಚಾರಣೆ ಆಗಸ್ಟ್ 12ಕ್ಕೆ ಮುಂದೂಡಿದೆ.
ಇದನ್ನೂ ಓದಿ: ಕೆಲವು ಹಿತೈಷಿಗಳು, ಮಠಾಧೀಶರು ‘ತಡೀಪಾ’ ಅಂದಿದ್ದಕ್ಕೆ ರಾಜೀನಾಮೆ ನೀಡಿಲ್ಲ: ಶಾಸಕ ರಮೇಶ್ ಜಾರಕಿಹೊಳಿ
Published On - 12:52 pm, Tue, 27 July 21